October 5, 2024

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ನಿಡುವಾಳೆ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ  ಮಾತನಾಡಿದ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳೇ ನನಗೆ ಈ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ ಎಂದರು.  ನರೇಂದ್ರ ಮೋದಿಯವರ ಸತತ 10ವರ್ಷದ ಕೇಂದ್ರದ ಬಿಜೆಪಿ ಸರ್ಕಾರ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಮಾಡಿದ ಕೆಲಸಗಳೇ ನಮಗೆ ಸಹಾಕಾರಿಯಾಗಲಿದ್ದು, ಮೋದಿಯವರು ಬಡವರಿಗೆ ಉಜ್ವಲಾ ಯೋಜನೆಗೆ ಸಬ್ಸಿಡಿ, ಆಯುಷ್ಮಾನ್ ಕಾರ್ಡ್, ಬಡವರಿಗೆ ಅಕ್ಕಿ, ರೈತರಿಗೆ ವರ್ಷಕ್ಕೆ 6,000 ನೇರ ನಗದು, ಜಲಜೀವನ್ ಮಿಷನ್ ಯೋಜನೆಯಡಿ ಮನೆಗೆ ನೀರು, ಜನಔಷಧಿ ಕೇಂದ್ರ, ಫಸಲ್ ಭೀಮ ಯೋಜನೆಯಡಿ ಪರಿಹಾರ , ಜನಾಧನ್, ಮುದ್ರಾ ಯೋಜನೆಯಡಿ ದೇಶದ ನಾಗರಿಕರಿಗೆ ಸೌಲಭ್ಯ ತಲುಪಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದರು.

ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು ಇವರು ಜನಸಾಮಾನ್ಯರಿಗೆ ಪ್ರತಿದಿನ ಸಿಗುವ ರಾಜಕಾರಣಿಯಾಗಿದ್ದಾರೆ, ಕೇಂದ್ರ ಸರ್ಕಾರ ರಾಮಮಂದಿರ, ಸರ್ಜಿಕಲ್ ಸ್ಟ್ರೇಕ್, ಆರ್ಟಿಕಲ್ 370 ರದ್ದು, ತಲಾಕ್ ನಿಷೇಧ ಮುಂತಾದ ಕಠಿಣ ಕ್ರಮಗಳಿಂದ ದೇಶದ ನಾಗರಿಕರ ಮನ ಗೆದ್ದಿದ್ದು ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಸುಂಕಸಾಲೆ,ಬಾಳೂರು,ನಿಡುವಾಳೆ,ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಮಂಡಲ ಬಿಜೆಪಿ ಅಧ್ಯಕ್ಷ ಟಿ.ಎಂ.ಗಜೇಂದ್ರ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎಸ್.ಲಕ್ಷ್ಮಣ್ ಗೌಡ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಬಿ.ಎಂ.ಭರತ್ ಬಾಳೂರು, ಪರೀಕ್ಷಿತ್ ಜಾವಳಿ, ,ಬಾಳೂರು ಹೋಬಳಿ ಬಿಜೆಪಿ ಅಧ್ಯಕ್ಷ ಎಂ.ಎಲ್. ವಿಜೇಂದ್ರ, ಜೆಡಿಎಸ್ ಹೋಬಳಿ ಅಧ್ಯಕ್ಷ ಪ್ರವೀಣ್, ಲೋಕೇಶ್ ಮರ್ಕಲ್, ಮನೋಜ್ ಬಾಳೂರು,ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬಿ.ಮಂಜುನಾಥ್ ,ಬಿ.ಎಸ್. ಕಲ್ಲೇಶ್, ರವಿ ಪಟೇಲ್ ಕೂವೆ, ಕೃಷ್ಣ ಟೈಲರ್, ಅಜಿತ್ ದುರ್ಗದಹಳ್ಳಿ, ರಘುಪತಿ ಮತ್ತಿತರರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ