October 5, 2024

ಅಂಬೇಡ್ಕರವನ್ನು ಸೋಲಿಸಿದ ಮತ್ತು ಅನೇಕ ಸಂದರ್ಭದಲ್ಲಿ ಅವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಪಕ್ಷ ಓಟಿಗಾಗಿ ಅವರ ಹೆಸರು ದುರ್ಬಳಕೆ ಮಾಡುತ್ತಿದೆ. ಕಾಂಗ್ರೇಸ್ ಪಕ್ಷಕ್ಕೆ ದಲಿತರು ಮತ್ತು ಬಡವರ ಮತ ಕೇಳುವ ಹಕ್ಕಿಲ್ಲ ಎಂದು ಮೂಡಿಗೆರೆ ಎಸ್ಸಿ ಮೋರ್ಚಾದ ಮಂಡಲ ಅಧ್ಯಕ್ಷ ಸಚಿನ್ ಬಾನಳ್ಳಿ ತಿಳಿಸಿದರು.

ಅವರು ಎಸ್ಸಿ ಮೋರ್ಚಾ ಮಂಡಲ ಕಾರ್ಯಕಾರಣಿ ಯನ್ನು ಪಕ್ಷದ ಕಚೇರಿ ಪಂಚವಟಿಯಲ್ಲಿ ಉದ್ದೇಶಿಸಿ ಮಾತನಾಡಿ. ಸ್ವಾತಂತ್ರ್ಯ ಬಂದಾಗ ಅಂಬೇಡ್ಕರ್ ಅವರು ಕಾನೂನು ಮಂತ್ರಿಯಾಗಿ ದೇಶಕ್ಕೆ ಉತ್ತಮ ಕಾರ್ಯ ನಿರ್ವಹಿಸಿದ್ದು. ಇವರು ಬರೆದ ಸಂವಿಧಾನ ಅಂಗಿಕರಿಸಿ ಗಣರಾಜ್ಯ ಅದ ನಂತರ ಅಂಬೇಡ್ಕರ್ ಅವರು ಸಚಿವರಾಗುವುದನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಇವರ ವಿರುದ್ಧ ನಿಲ್ಲಿಸಿ ಸೋಲಿಸಿ, ದೇಶದ ದಲಿತರಿಗೆ ದ್ರೋಹ ಬಗೆದ ಪಕ್ಷವಾಗಿದ್ದು. ಇಂದು ಮತಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನ ಬಳತ್ತಿರುವುದು ದುರಂತವಾಗಿದೆ ಎಂದರು.

ನಮ್ಮ ಎಸ್ಸಿ ಸಮಾಜ ಇದನ್ನು ಅರಿಯಬೇಕು. ಅಲ್ಲದೆ ಇವರು ತೀರಿಕೊಂಡಾಗ ದೆಹಲಿಯಲ್ಲಿ ಶವಸಂಸ್ಕಾರಕ್ಕೆ ಆರಡಿ ಜಾಗವನ್ನು ನೀಡದೆ ಶವವನ್ನು ಮುಂಬೈಗೆ ಸಾಗ ಹಾಕಲಾಯಿತು. ಅಂದು ಜನ ಸಂಘದ ಮುಖಂಡರೇ ಅಂತಿಮ ವಿಧಿ ವಿಧಾನಗಳನ್ನು ಗೌರವದಿಂದ ನಡೆಸಿಕೊಟ್ಟವರು. ದೇಶದಲ್ಲಿ ಅಂಬೇಡ್ಕರ್ ಸಂವಿಧಾನವನ್ನು ಯಶಸ್ವಿಯಾಗಿ ಕಾಂಗ್ರೆಸ್ ಜಾರಿಗೆ ತಂದಿದ್ದಲ್ಲಿ ಇಂದು ಬಡತನ ಜಾತೀಯತೆ ಸಮಾಜದಿಂದ ತೊಲಗುತ್ತಿತ್ತು ಎಂದರು.

ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುವಂಗಿ ಮಾತನಾಡಿ ದಿನ ದಲಿತರು ಬಡವರ ಉದ್ಧಾರವನ್ನು ಮಾನ್ಯ ನರೇಂದ್ರ ಮೋದಿ ಅವರಿಂದ ಮಾತ್ರ ಮಾಡಲು ಸಾಧ್ಯ ಎಂದು ಈಗಾಗಲೇ ತೋರಿಸಿಕೊಟ್ಟಿದ್ದು. ಅಂಬೇಡ್ಕರ್ ಅವರ ಪಂಚ ಧಾಮಗಳನ್ನು ಅಭಿವೃದ್ಧಿಪಡಿಸಿ ಸಮಾಜಕ್ಕೆ ಗೌರವ ತಂದಿದ್ದಾರೆ. ಈ ಸಲದ ಚುನಾವಣೆಯಲ್ಲಿ ದೇಶದಲ್ಲಿ ನಿರುದ್ಯೋಗ ಬಡತನ ನಿವಾರಣೆಗಾಗಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸೋಣ ಎಂದರು.

ಕಾರ್ಯಕ್ರಮದಲ್ಲಿ ಮಂಡಲ ಕಾರ್ಯದರ್ಶಿ ಪ್ರಶಾಂತ್ ಬಿಳಗುಳ. ಸುಜಿತ್ ಹಳೆಮೂಡಿಗೆರೆ, ಜೈಪಾಲ್ ಬಿದ್ರಳ್ಳಿ. ಕೃಷ್ಣಮೂರ್ತಿ ಆಲ್ದೂರು. ಮಂಜು. ಪ್ರಕಾಶ್ ಕಿರಗುಂದ, ರತನ್ ದೇವವೃಂದ. ಶರತ್ ಮಾಕೋನಹಳ್ಳಿ. ರಾಘವೇಂದ್ರ ಚಿನ್ನಿಗ. ರಾಜು ಕಡಿದಾಳು. ಪ್ರಸನ್ನ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ