October 5, 2024

ಸನ್​ರೈಸರ್ಸ್​ ಹೈದರಾಬಾದ್​ ತಂಡ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಐಪಿಎಲ್​(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್​ ಪೇರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ ದಾಖಲೆಯನ್ನು ಮುರಿದಿದೆ.

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿದ ಎಸ್.ಆರ್.ಹೆಚ್. ತಂಡ 20 ಓವರ್​ಗಳಲ್ಲಿ 3 ವಿಕೆಟ್​ಗೆ 277 ರನ್​ ಬಾರಿಸಿದೆ. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದೆ. ಆರ್​ಸಿಬಿ 2013ರಲ್ಲಿ ಪುಣೆ ವಾರಿಯರ್ಸ್​ ವಿರುದ್ಧ 5 ವಿಕೆಟ್​ಗೆ 263 ರನ್​ ಬಾರಿಸಿತ್ತು. ಇದೀಗ ಈ ದಾಖಲೆಯನ್ನು ಹೈದರಾಬಾದ್​ 11 ವರ್ಷಗಳ ಬಳಿಕ ಮೀರಿ ನಿಂತಿದೆ.

ಐಪಿಎಲ್ನಲ್ಲಿ ಅತಿ ಹೆಚ್ಚು ರನ್ಬಾರಿಸಿದ ತಂಡಗಳು

ಸನ್ರೈಸರ್ಸ್ಹೈದರಾಬಾದ್​-3 ವಿಕೆಟ್ಗೆ 277(ಮುಂಬೈ ಇಂಡಿಯನ್ಸ್ವಿರುದ್ಧ)

ರಾಯಲ್ಚಾಲೆಂಜರ್ಸ್ಬೆಂಗಳೂರು 5 ವಿಕೆಟ್ಗೆ 263( ಪುಣೆ ವಾರಿಯರ್ಸ್ವಿರುದ್ಧ)

ಲಕ್ನೋ ಸೂಪರ್ಜೈಂಟ್ಸ್​-5 ವಿಕೆಟ್ಗೆ 257(ಪಂಜಾಬ್ಕಿಂಗ್ಸ್ವಿರುದ್ಧ)

ರಾಯಲ್ಚಾಲೆಂಜರ್ಸ್ಬೆಂಗಳೂರು– 3 ವಿಕೆಟ್ಗೆ 248( ಗುಜರಾತ್ಲಯನ್ಸ್ವಿರುದ್ಧ

ಕೋಲ್ಕತ್ತಾ ನೈಟ್ರೈಡರ್ಸ್​-6 ವಿಕೆಟ್ಗೆ 246(ರಾಜಸ್ಥಾನ್ರಾಯಲ್ಸ್ವಿರುದ್ಧ)

ಚೆನ್ನೈ ಸೂಪರ್ಕಿಂಗ್ಸ್​-5 ವಿಕೆಟ್ಗೆ 240(ಕಿಂಗ್ಸ್ಇಲೆವೆನ್ಪಂಜಾಬ್ವಿರುದ್ಧ)

ಹೈದರಾಬಾದ್​ನಲ್ಲಿ ಬುಧವಾರ ಸಿಕ್ಸರ್​ಗಳ ಸುರಿಮಳೆಯೇ ಸುರಿಯಿತು. ಮುಂಬೈ ಇಂಡಿಯನ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳ ಆಟಗಾರರು ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕ ಈ ಸಿಕ್ಸರ್​ಗಳ ಮಳೆಗೆ ಕಾರಣರಾದರು. ಅಂತಿಮವಾಗಿ ಪಂದ್ಯದಲ್ಲಿ ತವರಿನ ತಂಡವಾದ ಸನ್​ರೈಸರ್ಸ್​ ಹೈದರಾಬಾದ್ 31 ರನ್​ ಅಂತರದಿಂದ ಗೆದ್ದು ಬೀಗಿತು​. ಮುಂಬೈ ಸತತ 2ನೇ ಸೋಲಿನ ಅವಮಾನಕ್ಕೆ ಸಿಲುಕಿತು.

ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆತಿಥೇಯ ಸನ್​ರೈಸರ್ಸ್ ಹೈದರಾಬಾದ್​ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 277 ರನ್​ ಬಾರಿಸಿತು. ಈ ದೊಡ್ಡ ಮೊತ್ತವನ್ನು ಅಷ್ಟೇ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಮುಂಬೈ ಅಂತಿಮವಾಗಿ 5 ವಿಕೆಟ್​ಗೆ 246 ರನ್​ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ 523 ರನ್​ ದಾಖಲಾಯಿತು. ಇದು ಐಪಿಎಲ್​ನಲ್ಲಿ 2 ತಂಡಗಳು ಸೇರಿ ಬಾರಿಸಿದ ಗರಿಷ್ಠ ಮೊತ್ತದ ದಾಖಲೆ. ಈ ಹಿಂದೆ 2010ರಲ್ಲಿ ಚೆನ್ನೈ ಮತ್ತು ಕೆಕೆಆರ್​ ನಡುವಣ ಪಂದ್ಯದಲ್ಲಿ 469 ರನ್​ ಹರಿದು ಬಂದಿತ್ತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಆರಂಭಿಕರಾದ ಇಶಾನ್​ ಕಿಶನ್​ ಮತ್ತು   ರೋಹಿತ್​ ಶರ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಅಡಿಪಾಯ ನಿರ್ಮಿಸಿದರು. ಇವರಿಬ್ಬರ ಬ್ಯಾಟಿಂಗ್​ ಆರ್ಭಟದಿಂದ ತಂಡ ಕೇವಲ ಮೂರು ಓವರ್​ಗೆ ವಿಕೆಟ್​ ನಷ್ಟವಿಲ್ಲದೆ 50 ರನ್​ ಕಲೆಹಾಕಿತು.

ಆದರೆ ರೋಹಿತ್​  26 ರನ್​ ಗಳಿಸಿ ನಾಯಕ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಇಶಾನ್​ ಕಿಶನ್​ 13 ಎಸೆತಗಳಿಂದ 34 (4 ಸಿಕ್ಸರ್​, 3 ಬೌಂಡರಿ) ರನ್​ ಬಾರಿಸಿದರು. ಬಳಿಕ ಬಂದ ನಮನ್ ಧೀರ್ ಮತ್ತು ತಿಲಕ್​ ವರ್ಮ ಕೂಡ ಬಿರುಸಿನ ಆಟವಾಡಿ ತಂಡದ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಪಟ್ಟರು. ಮುಂಬೈ 10 ಓವರ್​ಗೆ 140 ರನ್​ ಗಡಿ ದಾಡಿದ ವೇಳೆ ಈ ಬೃಹತ್​ ಮೊತ್ತವನ್ನು ಕೂಡ ಚೇಸಿಂಗ್​ ಮಾಡಿ ಗೆಲ್ಲುವ ಸೂಚನೆ ನೀಡಿತು. ಆದರೆ ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ಬೌಲರ್​ಗಳು ಲಯಬದ್ಧ ಬೌಲಿಂಗ್​ ನಡೆಸಿ ಪಂದ್ಯವನ್ನು ಹಿಡಿತಕ್ಕೆ ತಂದರು.

Sunrisers Hyderabad  (20 ovs maximum)

BATTING   R B M 4s 6s SR
Mayank Agarwal  c David b Pandya 11 13 19 1 0 84.61
Travis Head  c Naman Dhir b Coetzee 62 24 39 9 3 258.33
Abhishek Sharma  c Naman Dhir b Chawla 63 23 36 3 7 273.91
Aiden Markram  not out 42 28 59 2 1 150.00
Heinrich Klaasen † not out 80 34 43 4 7 235.29
Extras (b 4, lb 1, nb 2, w 12) 19
TOTAL 20 Ov (RR: 13.85) 277/3
Fall of wickets: 1-45 (Mayank Agarwal, 4.1 ov), 2-113 (Travis Head, 7.5 ov), 3-161 (Abhishek Sharma, 10.6 ov) • DRS

 

BOWLING O M R W ECON 0s 4s 6s WD NB
Kwena Maphaka 4 0 66 0 16.50 7 7 5 3 0
Hardik Pandya 4 0 46 1 11.50 5 5 2 0 0
Jasprit Bumrah 4 0 36 0 9.00 4 2 1 1 1
Gerald Coetzee 4 0 57 1 14.25 3 4 3 2 1
Piyush Chawla 2 0 34 1 17.00 1 0 4 0 0
Shams Mulani 2 0 33 0 16.50 1 1 3 2 0

Mumbai Indians  (T: 278 runs from 20 ovs)

BATTING   R B M 4s 6s SR
Rohit Sharma  c Abhishek Sharma b Cummins 26 12 20 1 3 216.66
Ishan Kishan † c Markram b Shahbaz Ahmed 34 13 14 2 4 261.53
Naman Dhir  c Cummins b Unadkat 30 14 35 2 2 214.28
Tilak Varma  c Agarwal b Cummins 64 34 49 2 6 188.23
Hardik Pandya (c) c †Klaasen b Unadkat 24 20 40 1 1 120.00
Tim David  not out 42 22 29 2 3 190.90
Romario Shepherd  not out 15 6 7 2 1 250.00
Extras (b 1, lb 4, nb 1, w 5) 11
TOTAL 20 Ov (RR: 12.30) 246/5
Fall of wickets: 1-56 (Ishan Kishan, 3.2 ov), 2-66 (Rohit Sharma, 4.3 ov), 3-150 (Naman Dhir, 10.4 ov), 4-182 (Tilak Varma, 14.1 ov), 5-224 (Hardik Pandya, 17.6 ov) • DRS

 

BOWLING O M R W ECON 0s 4s 6s WD NB
Bhuvneshwar Kumar 4 0 53 0 13.25 7 3 5 0 0
Jaydev Unadkat 4 0 47 2 11.75 6 4 3 2 0
Shahbaz Ahmed 3 0 39 1 13.00 5 1 4 0 0
Pat Cummins 4 0 35 2 8.75 7 1 2 1 0
Umran Malik 1 0 15 0 15.00 2 0 2 1 0
Mayank Markande 4 0 52 0 13.00 5 3 4 1 1

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ