October 5, 2024

ಕರ್ನಾಟಕ ಜಾನಪದ ಪರಿಷತ್ ಕಳಸ ತಾಲೂಕು ಹಾಗೂ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಕಲ್ಮಕ್ಕಿ ಬಾಲ ಗಣಪತಿ ಸಮುದಾಯ ಭವನದಲ್ಲಿ ಜಾನಪದ ಜಗಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಾನಪದ ಕಲೆಗಳು ಉಳಿಯಬೇಕೆಂದರೆ ಯುವ ಸಮುದಾಯ ಹಳ್ಳಿಯ ಜಾನಪದ ಕಲಾ ಪ್ರಕಾರಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕಿದೆ, ಆ ದೆಸೆಯಲ್ಲಿ ಯುವಕರು ಪಟ್ಟಣದಲ್ಲಿ ಉದ್ಯೋಗ ಮಾಡಿದರು ಹಳ್ಳಿಯ ಜಾನಪದ ಕಲೆಗಳನ್ನು ಮುಖ್ಯ ವೇದಿಕೆಗೆ ಪರಿಚಯಿಸುವ ಕೆಲಸ ಮಾಡುವುದರೊಂದಿಗೆ ಜಾನಪದ ಉಳಿಸಬೇಕಿದೆ ಎಂದು ಕರ್ನಾಟಕ ಜನಪದ ಪರಿಷತ್ತಿನ ಅಧ್ಯಕ್ಷರಾದ ರಜಿತ್ ಕೆಳಗೂರ್ ಅಭಿಪ್ರಾಯಪಟ್ಟರು.

ಅಳಿದು ಹೋಗುತ್ತಿರುವ ಜಾನಪದ ಕಲೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಜಾನಪದ ಪರಿಷತ್ ಕಳಸ ಘಟಕವು ಇನ್ನೂ ಹೆಚ್ಚಿನದಾಗಿ ಅಭಿವೃದ್ಧಿ ಕಾಣಲಿ ಜಾನಪದ ಕಲೆಗಳು ಇನ್ನಷ್ಟು ಬೆಳಕಿಗೆ ಬಂದು ಮಲೆನಾಡಿನ ಮೂಲ ಜಾನಪದ ಕಲೆಗಳು ಉಳಿಯಲಿ ಎಂದು ಜ್ಞಾನ ವಿಜ್ಞಾನ ಸಮಿತಿಯ ಸಂಯೋಜಕರಾದ ಸಂದೇಶ್ ಅವರು ಅಭಿಪ್ರಾಯಪಟ್ಟರು.

ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶ್ರೀನಿವಾಸ್. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕುಮಾರ್ ಬಾಲ ಗಣಪತಿ ಸಮುದಾಯ ಭವನದ ಸದಸ್ಯರಾದ ವೆಂಕಟೇಶ್  ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರಾದ ಗಣೇಶ್ ಕುಕ್ಕೊಡು ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾದ ಕುಕ್ಕುಡು ಮಂಜೇಗೌಡರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೌಮ್ಯ ಅವರನ್ನು ಗೌರವಿಸಲಾಯಿತು.  ಜ್ಞಾನವಿಜ್ಞಾನ ಸಮಿತಿಯ ವತಿಯಿಂದ ವಿದ್ಯಾರ್ಥಿಗಳಿಗೆ ವಿಜ್ಞಾನದ ವಸ್ತುಗಳ ಪ್ರಾಯೋಗಿಕ ಪ್ರದರ್ಶನವನ್ನು ನೀಡಲಾಯಿತು. ಸಂದರ್ಭದಲ್ಲಿ  ಕರ್ನಾಟಕ ಜಾನಪದ ಪರಿಷತ್ತಿನ ಉಪಾಧ್ಯಕ್ಷರಾದ ಸರ್ವಜಿತ್, ಸುನಿಲ್ ಮಸಿಗದ್ದೆ,ಮಹ್ಮದ್ ಶಮೀರ್, ಆಶ ರಾಘವೇಂದ್ರ ಐತಾಳ್, ಪೂರ್ಣಿಮಾ ಪ್ರಮೋದ್, ನಿಖಿತಾ ಸಂತೋಷ್, ಪ್ರಿಯಾ ಗುರುಪ್ರಸಾದ್. ನಗಿನ ಖಾದರ್ ಹಾಜರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ