October 5, 2024

ಸ್ವಾತಂತ್ರ್ಯ-ಸ್ವೇಚಾಚ್ಛಾರದ ನಡುವಿನ ಸಣ್ಣಗೆರೆ ಅರಿಯಬೇಕು. ಸಮಾಜದ ಉನ್ನತೀಕರಣಕ್ಕೆ ಮಹಿಳೆಯರ ಆರ್ಥಿಕ ಸಬಲತೆ ಮುಖ್ಯ ಎಂದು ಸಹಕಾರ ಇಲಾಖೆಯ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಸಂಧ್ಯಾರಾಣಿ ವಿಶ್ವನಾಥ ಅಭಿಪ್ರಾಯಿಸಿದರು.

ಅಕ್ಕಮಹಾದೇವಿ ಮಹಿಳಾಸಂಘದಿಂದ ಚಿಕ್ಕಮಗಳೂರು ಕೋಟೆ ಬಡಾವಣೆಯ ಶರಣೆ ಕೇತಲಾದೇವಿ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ನಿನ್ನೆ ಹೋಳಿಹುಣ್ಣಿಮೆಯಂದು ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮತ್ತು ಗಂಡುಮಕ್ಕಳನ್ನು ಸಮಾನವಾಗಿ ಬೆಳೆಸಬೇಕು. ಹೆಣ್ಣುಮಕ್ಕಳಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ನೀಡಬೇಕು. ಸ್ವಾತಂತ್ರ್ಯ-ಸ್ವೇಚ್ಛಾಚಾರದ ನಡುವೆ ಸಣ್ಣಗೆರೆ ಅರ್ಥಮಾಡಿಕೊಂಡರೆ ಒಳಿತು ಎಂದು ಸಲಹೆ ಮಾಡಿದ ಸಂಧ್ಯಾ, ಸ್ತ್ರೀಯರ ಶೈಕ್ಷಣಿಕ-ಸಾಂಸ್ಕøತಿಕ-ಆರ್ಥಿಕ ಸಬಲೀಕರಣವೇ ಮಹಿಳಾ ದಿನಾಚರಣೆಯ ಆಶಯ ಎಂದರು.

ಮಹಿಳೆಯರಲ್ಲಿ ಸಕಾರಾತ್ಮಕ ಮನೋಭಾವ, ತಾಳ್ಮೆ, ಸಹನೆ ಗುಣಸ್ವಭಾವ ಇದ್ದರೆ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ದುಡಿಯುವ ಮಹಿಳೆಯರು ಒಂದೆಡೆಯಾದರೆ ಮನೆಯಲ್ಲಿರುವ ಗೃಹಿಣಿಯರ ಹೊಣೆಗಾರಿಕೆ ಹೆಚ್ಚಿನದು. ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಗೌರವ ಇದೆ. ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮೀ, ಶಕ್ತಿಗೆ ಪಾರ್ವತಿಯಾಗಿ ನೋಡಲಾಗುತ್ತಿದೆ ಎಂದರು.

ಮಹಿಳೆಯರು ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ ಮನೆಯವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಉನ್ನತೀಕರಣಕ್ಕೆ ನೆರವಾಗಬಹುದು. ಮಹಿಳಾ ದಿನವನ್ನು ಕೇವಲ ಶೇ.30ರಷ್ಟು ಮಹಿಳೆಯರು ಮಾತ್ರ ಸಂತೋಷಿಸುತ್ತಿದ್ದೇವೆ. ಉಳಿದವರಿಗೆ ಇದರ ಅರಿವಿಲ್ಲ.
ಸಮಾಜದ ಉನ್ನತೀಕರಣದಲ್ಲಿ ವಯಸ್ಸಿನ ನಿರ್ಬಂಧವಿಲ್ಲದೆ ಮಹಿಳೆಯರೂ ಪಾಲ್ಗೊಳ್ಳಬಹುದು. ಇದಕ್ಕೆ ನಾವುಗಳು ಚಟುವಟಿಕೆಗಳಲ್ಲಿ ತೊಡಗುವುದು, ಓದುವುದು, ನೋಡುವುದು, ಪರಸ್ಪರ ಅಭಿಪ್ರಾಯ ಹಂಚಿಕೊಳ್ಳುವುದು ಜೊತೆಗೆ ನಮ್ಮ ಯೋಚನೆ-ಯೋಜನೆಗಳನ್ನು ಜಾರಿಗೊಳಿಸುವುದು ಮುಖ್ಯ. ಸಮಾಜದ ಎಲ್ಲ ಚಟುವಟಿಕೆಗಳಲ್ಲೂ ಭಾಗಿಯಾಗಲು ಸಹಕಾರಿ ಸಂಸ್ಥೆಗಳು ನೆರವಾಗುತ್ತದೆ ಎಂದರು.

ಮಹಿಳೆಯರು ಹೆಚ್ಚು ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯರಾಗಿ, ಆಡಳಿತ ಮಂಡಳಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ಅವಕಾಶವಿದೆ. ನಿರ್ದೇಶಕ ಮಂಡಳಿಯ 13ಸ್ಥಾನಗಳಲ್ಲಿ ಎರಡುಸ್ಥಾನ ಮಹಿಳೆಯರಿಗೆ ಮೀಸಲಿದೆ. ಅದಲ್ಲದೆ ಸಾಮಾನ್ಯಸ್ಥಾನಗಳಿಗೂ ಮಹಿಳೆಯರು ಸ್ಪರ್ಧೆ ಮಾಡಬಹುದು ಎಂದ ಸಂಧ್ಯಾ, ಸ್ವಸಹಾಯ ಸಂಘಗಳ ಮೂಲಕ ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ ಎಂದರು.

ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ತೋರುತ್ತಿದ್ದಾರೆ. ಉದ್ಯೋಗನಿರತ ಮಹಿಳೆಯರ ಸಮಾನತೆಹಕ್ಕು ಜೊತೆಗೆ ಸಮಾನ ವೇತನ-ಸೌಲಭ್ಯಗಳಿಗೆ ಹೋರಾಡಿದ ನೆನಪಿನಲ್ಲಿ ಮಹಿಳಾದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಕೇತಲಾದೇವಿ ತಂಡದ ಮುಖ್ಯಸ್ಥೆ ಪುಷ್ಪಾಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆಯರಲ್ಲಿರುವ ಪ್ರತಿಭೆಯರ ಪ್ರದರ್ಶನಕ್ಕೆ ವೇದಿಕೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದರು.

ನಿವೃತ್ತಶಿಕ್ಷಕಿ ಮಹಾದೇವಿ ಸ್ವಾಗತಿಸಿ, ಶಿಕ್ಷಕಿ ಸಪ್ನಾಬಸವರಾಜ್ ನಿರೂಪಿಸಿ, ಸೌಭಾಗ್ಯಜಯಣ್ಣ ವಂದಿಸಿದರು. ಶೈಲಾಬಸವರಾಜ್ ಪ್ರಾರ್ಥಿಸಿ, ಶಶಿಕಲಾಕಲ್ಲೇಶ್ ಅತಿಥಿಪರಿಚಯಿಸಿದರು. ಭವಾನಿವಿಜಯಾನಂದ, ವೀಣಾ ಮತ್ತು ಶೋಭಾ ತಂಡದ ವಚನರೂಪಕ,  ಮಂಜುಳಾ,ರಾಜೇಶ್ವರಿ ಮತ್ತು ಸುಮಾ ತಂಡ ನಾಡಗೀತೆ ಹಾಡಿದರು, ಶೈಲಾ ಮತ್ತು ಅನಿತಾ ತಂಡದ ವಚನಗಾಯನ ನಡೆಸಿಕೊಟ್ಟರು.

ಮಹಿಳಾದಿನಾಚರಣೆ ಅಂಗವಾಗಿ ಆಟೋಟಸ್ಪರ್ಧಾ ವಿಜೇತರಿಗೆ ಟಿಪಿಎಸ್ ಮಾಜಿಅಧ್ಯಕ್ಷೆ ಪುಷ್ಪಾ ಸೋಮಶೇಖರ್ ಬಹುಮಾನ ವಿತರಿಸಿದರು.

ಗೌರವಾಧ್ಯಕ್ಷೆ ಅರ್ಪಿತಾ, ಖಜಾಂಚಿ ಭಾರತಿಶಿವರುದ್ರಪ್ಪ, ಸಹಕಾರ್ಯದರ್ಶಿ ನಾಗಮಣಿಕುಮಾರ್, ಹೇಮಲತಾ ವೇದಿಕೆಯಲ್ಲಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ