October 5, 2024

ಬಿ.ಜೆ.ಪಿ. ನಿನ್ನೆ ಬಿಡುಗಡೆ ಮಾಡಿರುವ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯದ ಬಾಕಿ ಇದ್ದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಈಗಾಗಲೇ ರಾಜ್ಯದ 24 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದ ಬಿ.ಜೆ.ಪಿ. ಬಾಕಿಯಿದ್ದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪ್ರಕಟಿಸಿದೆ.

ಇದರೊಂದಿಗೆ ರಾಜ್ಯದಲ್ಲಿ ಚಿತ್ರದುರ್ಗ ಕ್ಷೇತ್ರವೊಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದಂತಾಗಿದೆ.

ಜೆಡಿಎಸ್ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿರುವ ಬಿ.ಜೆ.ಪಿ. ರಾಜ್ಯ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಜೆ.ಡಿ.ಎಸ್. ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಇದರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಸಚಿವರ ಡಾ. ಕೆ. ಸುಧಾಕರ್ ಅವರಿಗೆ, ಬೆಳಗಾವಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ, ರಾಯಚೂರು ಕ್ಷೇತ್ರದಿಂದ ಅಮರೇಶ್ ನಾಯಕ್ ಅವರಿಗೆ ಹಾಗೂ ಉತ್ತರ ಕನ್ನಡ ಕ್ಷೇತ್ರದಿಂದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಚಿಕ್ಕಬಳ್ಳಾಪುರ – ಡಾ.ಕೆ. ಸುಧಾಕರ್
ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ
ರಾಯಚೂರು – ಅಮರೇಶ್ವರ ನಾಯಕ್‌
ಬೆಳಗಾವಿ – ಜಗದೀಶ್ ಶೆಟ್ಟರ್

ಬೆಳಗಾವಿ ಕ್ಷೇತ್ರದಲ್ಲಿ ಹಾಲಿ ಸಂಸದೆ ಮಂಗಳ ಅಂಗಡಿಯವರಿಗೆ ಟಿಕೆಟ್ ಕೈತಪ್ಪಿದ್ದು, ಜಗದೀಶ್ ಶೆಟ್ಟರ್ ಗೆ ನೀಡಲಾಗಿದೆ. ಉತ್ತರಕನ್ನಡದಲ್ಲಿ ಸದಾ ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಟೀಕೆಗೆ ಗುರಿಯಾಗುತ್ತಿದ್ದ ಕಟ್ಟಾ ಹಿಂದುತ್ವವಾದಿ ಅನಂತಕುಮಾರ್ ಹೆಗಡೆ  ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಯವರನ್ನು ಕಣಕ್ಕಿಳಿಸಲಾಗಿದೆ. ರಾಯಚೂರು ಕ್ಷೇತ್ರದಿಂದ  ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಲಾಗಿದೆ. ಚಿಕಬಳ್ಳಾಪುರದಿಂದ ಹಾಲಿ ಸಂಸದ ಬಿ.ಎನ್. ಬಚ್ಚೇಗೌಡ ಬದಲಿಗೆ ಮಾಜಿ ಸಚಿವ ಕೆ. ಸುಧಾಕರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಮುನಿಸಿಕೊಂಡಿರುವ ಬಿ.ಎನ್. ಬಚ್ಚೇಗೌಡ ಇತ್ತೀಚೆಗೆ ಬಿ.ಜೆ.ಪಿ. ಪಕ್ಷವನ್ನು ತೊರೆದಿದ್ದರು.

ಈ ಹಿಂದೆ 20 ಕ್ಷೇತ್ರಗಳಿಗೆ ಘೋಷಣೆ ಮಾಡಿದ್ದ ಅಭ್ಯರ್ಥಿಗಳ ವಿವರ

  • ಚಿಕ್ಕೋಡಿ: ಅಣ್ಣಾ ಸಾಹೇಬ್‌ ಜೊಲ್ಲೆ
  • ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್‌
  • ವಿಜಯಪುರ: ರಮೇಶ್‌ ಜಿಗಜಿಣಗಿ
  • ಕಲಬುರಗಿ: ಡಾ. ಉಮೇಶ್‌ ಜಾಧವ್‌
  • ಬೀದರ್‌: ಭಗವಂತ್‌ ಖೂಬಾ
  • ಕೊಪ್ಪಳ: ಡಾ. ಬಸವರಾಜ ಕ್ಯಾವತೂರು
  • ಬಳ್ಳಾರಿ: ಬಿ. ಶ್ರೀರಾಮುಲು
  • ಹಾವೇರಿ: ಬಸವರಾಜ ಬೊಮ್ಮಾಯಿ
  • ಧಾರವಾಡ: ಪ್ರಹ್ಲಾದ್‌ ಜೋಶಿ
  • ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್‌
  • ಶಿವಮೊಗ್ಗ: ಬಿ.ವೈ ರಾಘವೇಂದ್ರ
  • ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
  • ದಕ್ಷಿಣ ಕನ್ನಡ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ
  • ತುಮಕೂರು: ವಿ ಸೋಮಣ್ಣ
  • ಮೈಸೂರು: ಯದುವೀರ್‌ ಕೃಷ್ಣ ದತ್ತ ಒಡೆಯರ್‌
  • ಚಾಮರಾಜನಗರ: ಎಸ್‌. ಬಾಲರಾಜ್‌
  • ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್‌. ಮಂಜುನಾಥ್‌
  • ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
  • ಬೆಂಗಳೂರು ಸೆಂಟ್ರಲ್‌: ಪಿ.ಸಿ. ಮೋಹನ್‌
  • ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ