October 5, 2024

ಭಾರತದ ಸಂವಿಧಾನದ ಯಥಾವತ್ ಜಾರಿಗಾಗಿ ಮತ್ತು ಸರ್ವ ಜನರ ಏಳಿಗೆಗಾಗಿ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸಿ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಕೆ.ಟಿ. ರಾಧಾಕೃಷ್ಣ ಮನವಿ ಮಾಡಿದ್ದಾರೆ.

ಅವರು ಶುಕ್ರವಾರ ಮೂಡಿಗೆರೆಯಲ್ಲಿ ಮಾಧ್ಯಮಗೊಷ್ಠಿ ಉದ್ದೇಶಿಸಿ ಮಾತನಾಡಿದರು. ಜನ ಬದಲಾವಣೆ ಬಯಸುತ್ತಿದ್ದಾರೆ. ಜನಪರ ಹೋರಾಟದ ಮತ್ತು ಚಿಂತನೆಯ ಪಕ್ಷವಾಗಿರುವ ಬಿ.ಎಸ್ಪಿ ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ ಪ್ರಭಾವಿತವಾಗಿ ಪ್ರಾರಂಭವಾಗಿರುವ ಪಕ್ಷವಾಗಿದೆ. ದೇಶದಲ್ಲಿ ಬಿ.ಜೆ.ಪಿ. ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಅಧಿಕಾರ ನಡೆಸುತ್ತಿದೆ. ಕಾಂಗ್ರೇಸ್ ತಾನು ಅಹಿಂದ ಪರ ಎಂದು ಆ ಜನರನ್ನು ಮರುಳು ಮಾಡುತ್ತಿದೆ, ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗ, ಎಸ್ಸೀಎಸ್ಟಿ, ಮೇಲ್ಜಾತಿ ವರ್ಗಕ್ಕೆ ಮೀಸಲಾತಿ ನೀಡಿದ್ದಾರೆ. ಯಾವುದೇ ತಾರತಮ್ಯ ಮಾಡದೇ ಅಧಿಕಾರ ನಡೆಸಿದ್ದಾರೆ.

ಕರ್ನಾಟಕದ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಎಸ್ಸಿ ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಬಳಸಬೇಕಾದ ಹಣವನ್ನು ಬಿಟ್ಟಿ ಭಾಗ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಯಾವ ಅಭಿವೃದ್ಧಿ ಸಾಧ್ಯವಿಲ್ಲ. ದೇಶದಲ್ಲಿ ಶೇ.80 ರಷ್ಟು ಜನ ಆತಂಕ, ಸಂಕಷ್ಟದಲ್ಲೇ ಬದುಕುತ್ತಿದ್ದಾರೆ. ಇದಕ್ಕೆ ಚಿಕಿತ್ಸೆ ನೀಡಬೇಕಾಗಿದೆ. ಜನರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದ ನನಗೆ ಜನತೆ ಆಶೀರ್ವಾದ ಮಾಡಿ ಗೆಲ್ಲಿಸಿದರೆ, ಸಂಸತ್‍ನಲ್ಲಿ ಹೋರಾಟ ಮಾಡುವ ಮೂಲಕ ಜನರ ಸಮಸ್ಯ ಬಗೆಹರಿಸುತ್ತೇನೆಂದು ಹೇಳಿದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್ ಮಾತನಾಡಿ ಸುಪ್ರೀಂ ಕೋರ್ಟ್‍ನ ಮಹತ್ವದ ನಿರ್ಧಾರದಿಂದ ಚುನಾವಣಾ ಬಾಂಡ್ ಹಗರಣ ಬೆಳೆಕಿಗೆ ಬಂದಿದೆ. ಅದರಲ್ಲಿ 26 ಪಕ್ಷಗಳಿಗೆ ಅಕ್ರಮ ಹಣ ನೀಡಿದ್ದು, ಬಿಜೆಪಿ ಪಕ್ಷ ನಂ 1 ಸ್ಥಾನ ಪಡೆದಿದೆ. ಆದರೆ ಬಿಎಸ್‍ಪಿ ಪಕ್ಷ ಮಾತ್ರ ಇದರಿಂದ ಹೊರಗುಳಿದಿದ್ದು, ಯಾವುದೇ ಹಗರಣದಲ್ಲಿ ಇಲ್ಲ ಎಂದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಬಾಂಡ್ ಮೂಲಕ ಪಕ್ಷಕ್ಕೆ 5986 ಸಾವಿರ ಕೋಟಿ ಪಡೆದದ್ದು ಯಾಕೆ? ಆ ಹಣ ಎಲ್ಲಿಗೆ ಬಳಕೆ ಮಾಡಲಾಗಿದೆ ಎಂದು ದೇಶದ ಜನತೆಗೆ ತಿಳಿಸಬೇಕು. 2 ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇವೆ. ಕಪ್ಪು ಹಣ ತರುತ್ತೇವೆಂದು ಸುಳ್ಳು ಹೇಳಿ ಅಧಿಕಾರಿಕ್ಕೆ ಬಂದು ಇರುವ ಉದ್ಯೋಗವನ್ನೇ ಕಿತ್ತುಕೊಂಡು ಜನರನ್ನು ಬೀದಿಗೆ ನಿಲ್ಲಿಸಿದ್ದಾರೆ. ಇದು ಸಾಲದೆಂದು ಟಿವಿ ಚಾನಲ್‍ಗಳಲ್ಲಿ ಸುಳ್ಳು ಜಾಹಿರಾತು ನೀಡುವ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿರುವುದು ಜನತೆ ಗಮನಿಸುತ್ತಿದೆ. ಇನ್ನು ಕಾಂಗ್ರೆಸ್‍ನವರು ಕೊಡುತ್ತಿರುವ ಬಿಟ್ಟಿ ಭಾಗ್ಯ ಯಾರೂ ಕೇಳಿರಲಿಲ್ಲ. ಅದರ ಬದಲು ಉದ್ಯೋಗ ನೀಡಿದ್ದರೆ ಜನ ನೆಮ್ಮದಿಯಿಂದ ಬದುಕುತ್ತಿದ್ದರು. ಸಂವಿಧಾನವನ್ನೇ ಪ್ರಣಾಳಿಕೆ ಮಾಡಿಕೊಂಡು ಜನರ ಹಿತ ಕಾಯುವ ಪಕ್ಷವೊಂದಿದ್ದರೆ ಅದು ಬಿಎಸ್‍ಪಿ ಪಕ್ಷ ಮಾತ್ರ. ಈಗ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸತ್ ಚುನಾವಣೆಗೆ ಹೋರಾಟಗಾರ ಕೆ.ಟಿ.ರಾಧಾಕೃಷ್ಣ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಮತದಾರರು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಸಂಯೋಜಕ ಗಂಗಾಧರ್, ಬಿಎಸ್‍ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಲ್.ಬಿ.ರಮೇಶ್, ಬಿ.ಎಂ. ಶಂಕರ್, ಬಕ್ಕಿ ಮಂಜು, ರತ್ನ, ಹೊನ್ನೇಶ್, ಬಾಬಣ್ಣ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ