October 5, 2024

????????????????????????????????????

ಲಾಢ್ಯರಿಗೆ ಭೂಮಿಗುತ್ತಿಗೆ ನೀಡಲು ಹೊರಟಿರುವ ಸರ್ಕಾರದ ನೀತಿಯನ್ನು ಖಂಡಿಸಿ, ಅಧಿಸೂಚನೆ ಹಿಂಪಡೆಯಬೇಕೆಂದು ಒತ್ತಾಯಿಸಿ ಭೂಮಿ ಹಕ್ಕು ಹೋರಾಟ ಸಮಿತಿ ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಆಜಾದ್ ವೃತ್ತದಲ್ಲಿ ಶುಕ್ರವಾರ ವಿವಿಧ ಪಕ್ಷ ಮತ್ತು ಸಂಘಟನೆಯ ಮುಖಂಡರು ಪ್ರತಿಭಟಿಸಿ ಒತ್ತುವರಿ ಭೂಮಿಯನ್ನು ಭೂಮಿಹೊಂದಿದವರಿಗೆ ನೀಡುವ ಬದಲು ಭೂಹೀನ ಬಡವರಿಗೆ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲೆಸೇರಿದಂತೆ ಉಡುಪಿ, ಹಾಸನ,ಕೊಡಗು ಜಿಲ್ಲೆಯಲ್ಲಿ ಒತ್ತುವರಿಮಾಡಿರುವ ಭೂಮಾಲೀಕರಿಗೆ 25 ಎಕರೆವರೆಗೆ 30 ವರ್ಷಕ್ಕೆ ಭೂಮಿಯನ್ನು ಗುತ್ತಿಗೆ ಹೊಡಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಲಾಯಿತು. ಭೂಮಿ ನೀಡುವ ಪ್ರಸ್ತಾವನೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಮಲೆನಾಡಿನಲ್ಲಿ ಭೂ ಒತ್ತುವರಿ ಗಂಭೀರ ಸಮಸ್ಯೆಯಾಗಿದೆ. ದಲಿತ, ಕಾರ್ಮಿಕ, ಸಣ್ಣ, ಅತಿಸಣ್ಣ ರೈತರು ತಮ್ಮ ಭೂಹಿಡುವಳಿಯ ಜೊತೆಗೆ ಭೂಮಿ ಇಲ್ಲದವರು ಅರ್ಧ,ಒಂದು ಎಕರೆ ಹೆಚ್ಚೆಂದರೆ 34 ಎಕರೆ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. 20ರಿಂದ 30 ಎಕರೆಗೂ ಹೆಚ್ಚಿನ ತೋಟವಿದ್ದವರು ತಮ್ಮ ಜಮೀನು ಸುತ್ತ ಅದಕ್ಕೆ ಹೊಂದಿಕೊಂಡಿರುವ 20,50, 100 ಎಕರೆವರೆಗೂ ಒತ್ತುವರಿ ಮಾಡಿಕೊಂಡಿದ್ದಾರೆಂದು ಮನವಿಯಲ್ಲಿ ತಿಳಿಸಲಾಗಿದೆ.

ಇಂತಹ ಭೂ ಮಾಲೀಕರಿಗೆ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಸರಿಯೇ ಎಂದು ಪ್ರಶ್ನಿಸಿರುವ ಭೂಮಿಹಕ್ಕು ಹೋರಾಟ ಸಮಿತಿ, ಸರ್ಕಾರಿ ಜಾಗದಲ್ಲಿ ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕುಪತ್ರನೀಡಬೇಕು. ಸಾರ್ವಜನಿಕ ಉದ್ದೇಶಕ್ಕೆ ಭೂಮಿಯನ್ನು ಕಾಯ್ದಿರಿಸದೆ ಬಡವರಿಗೆ ಮೋಸಮಾಡಲು ಸರ್ಕಾರ ಹೊರಟಿಸಿದೆ ಎಂದು ಟೀಕಿಸಿದ್ದಾರೆ.

ಭೂಮಾಲೀಕರ ಸರ್ಕಾರಿ ಒತ್ತುವರಿ ಭೂಮಿಯನ್ನು ಖುಲ್ಲಾಪಡಿಸಬೇಕು. ಮಲೆನಾಡಿನ ಭೂಮಿಗೆ ಭೂಮಿತಿಕಾಯ್ದೆ ಜಾರಿಗೊಳಿಸಬೇಕು.ಬಲಾಢ್ಯರ ಒತ್ತುವರಿಭೂಮಿಯನ್ನು ಬಿಡಿಸಿ ಕೂಲಿಲೈನಿನಲ್ಲಿ ವಾಸಿಸುವವರು, ನಿವೇಶನ ರಹಿತರು, ಭೂ ರಹಿತರು ಮತ್ತು ಸ್ಮಶಾನಕ್ಕೆ ಭೂಮಿ ಮೀಸಲಿಡಬೇಕೆಂದು ಆಗ್ರಹಿಸಿದ್ದಾರೆ.

ಅಸಂವಿಧಾನಿಕ ಭೂ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ನಮೂನೆ 53,57 ಅಡಿಯಲ್ಲಿ ಅರ್ಜಿಸಲ್ಲಿಸಿದ ಭೂರಹಿತರಿಗೆ ಹಕ್ಕುಪತ್ರನೀಡಬೇಕು.ಹಂಗಾಮಿ ಸಾಗುವಳಿ ಚೀಟಿಯನ್ನು ಖಾಯಂಗೊಳಿಸಬೇಕು. ದಲಿತರ ಭೂಮಿಯನ್ನು ಪಿಟಿಸಿಎಲ್ಕಾಯ್ದೆ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಿಪಿಐಎಂಎಲ್ ರಾಜ್ಯಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ರಾಜ್ಯ ಸರ್ಕಾರ ಬಡವರು ಕಾರ್ಮಿಕರ ಪರವಾಗಿದೆ.ನಿವೇಶನ ರಹಿತರಿಗೆ ನಿವೇಶನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೇಲೆ ಶ್ರೀಮಂತರ ಲಾಬಿಗೆ ಮಣಿದು ಕಾಫಿಬೆಳೆಗಾರರ ಪರವಾಗಿ ರೂಪಿಸಿರುವ ಕಾನೂನನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ದಲಿತಸಂಘರ್ಷ ಸಮಿತಿ ಪ್ರಧಾನ ಜಿಲ್ಲಾ ಸಂಚಾಲಕ ಮರ್ಲೆಅಣ್ಣಯ್ಯ, ಅಂಬೇಡ್ಕರ್ ವಿಚಾರವೇದಿಕೆಯ ಕೆ.ಜೆ.ಮಂಜುನಾಥ, ಅಂಗಡಿಚಂದ್ರು, ಉಮೇಶ್ಕುಮಾರ್ ಮಾತನಾಡಿದರು.ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿಶ್ರೀನಿವಾಸ, ಜಿಲ್ಲಾ ಮುಖಂಡಟ ವೈ.ಎಂ.ಹೊನ್ನಪ್ಪ, ಟಿಯುಸಿಐ ಮುಖಂಡ ಕೆ.ಕೆ.ಕೃಷ್ಣಪ್ಪ, ಪ್ರಗತಿಪರ ರೈತಸಂಘದ .ಎಂ.ಪೂರ್ಣೇ ಇದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ