October 5, 2024

ಗ್ಯಾಸ್ ಮತ್ತು ಪೆಟ್ರೋಲಿಯಂ ಮಾರ್ಗ ಹಾದುಹೋಗಿರುವ ಪ್ರದೇಶಗಳ ಸಮುದಾಯದ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಅಣುಕು ಡ್ರಿಲ್ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ಹೆಚ್.ಪಿ.ಸಿ.ಎಲ್. ಜನರಲ್ ಮ್ಯಾನೇಜರ್ ವಿನೋದ್ ಕುಮಾರ್ ಹೇಳಿದರು.

ಅವರು ಗುರುವಾರ ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪನಿ ಹಾಗೂ ಪೆಟ್ರೋನೆಟ್ ಎಂ.ಹೆಚ್.ಬಿ. ಆಯೋಜಿಸಿದ್ದ ಅಣುಕು ಡ್ರಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತುರ್ತು ಪ್ರತಿಕ್ರಿಯೆ ಕಾರ್ಯವಿಧಾನಗಳ ಪರಿಣಾಮಕಾರಿತ್ವವನ್ನುನಿರ್ಣಯಿಸುವುದು. ಸಂವಹನ ವ್ಯವಸ್ಥೆಗಳು ಮತ್ತು ಪ್ರೋಟೋಕಾಲ್‌ಗಳನ್ನು ಮೌಲ್ಯಮಾಪನ ಮಾಡುವುದು. ಸಂಪನ್ಮೂಲಗಳ ನಿಯೋಜನೆ ಮತ್ತು ಸಮನ್ವಯವನ್ನು ಪರೀಕ್ಷಿಸುವುದು. ಅಂತರ ಸಂಸ್ಥೆ ಸಹಯೋಗ ಮತ್ತು ಸಹಕಾರವನ್ನು ಹೆಚ್ಚಿಸುವುದು. ಅಸ್ತಿತ್ವದಲ್ಲಿರುವ ಪ್ರೋಟೋಕಾಲ್‌ಗಳನ್ನು ಪರಿಷ್ಕರಿಸಲು ಮತ್ತು ಸನ್ನದ್ಧತೆಯ ಪ್ರಯತ್ನಗಳನ್ನು ಹೆಚ್ಚಿಸಲು ಡ್ರಿಲ್ ಸಮಯದಲ್ಲಿ ಸಂಗ್ರಹಿಸಿದ ಪ್ರತಿಕ್ರಿಯೆ ಮತ್ತು ಅವಲೋಕನಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸಲಾಗುತ್ತದೆ. ಕಲಿತ ಪಾಠಗಳು ಭವಿಷ್ಯದ ತರಬೇತಿ ಕಾರ್ಯಕ್ರಮಗಳು ಮತ್ತು ತುರ್ತು ಪ್ರತಿಕ್ರಿಯೆ ತಂತ್ರಗಳನ್ನುತಿಳಿಸುತ್ತದೆ, ಅಪಾಯಗಳನ್ನು ತಗ್ಗಿಸಲು ಮತ್ತು ಸಮುದಾಯಗಳನ್ನು ರಕ್ಷಿಸಲು ಪೂರ್ವಭಾವಿ ವಿಧಾನವನ್ನು ಖಾತ್ರಿಪಡಿಸುತ್ತದೆ ಎಂದರು.

ಮಂಗಳೂರಿನಿಂದ ಹಾಸನಕ್ಕೆ ನೆಲದಡಿಯ ಪೈಪ್ ಲೈನ್ ಮೂಲಕ ಹಾದುಹೋಗಿರುವ ಗ್ಯಾಸ್ ಲೈನ್ ಸುರಕ್ಷತೆ ಬಗ್ಗೆ ಹೆಚ್.ಪಿ.ಸಿ.ಎಲ್. ಮತ್ತು ಎಂ.ಹೆಚ್.ಎಂ.ಬಿ.ಎಲ್. ಕಂಪನಿಯ ನೆರಿಯ ಘಟಕ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ತುರ್ತು ಸಂದರ್ಭದಲ್ಲಿ ಅವಘಡ ನಿರ್ವಹಣೆ ಬಗ್ಗೆ ಅಣುಕು ಪ್ರದರ್ಶನವನ್ನು ತಾಲ್ಲೂಕಿನ ಗೌಡಹಳ್ಳಿ ಗ್ರಾಮದಲ್ಲಿ   ಏರ್ಪಡಿಸಲಾಗಿತ್ತು.

ಈ ಅಣುಕು ಪ್ರದರ್ಶನದಲ್ಲಿ  ಗ್ಯಾಸ್ ಲೈನ್ ನಲ್ಲಿ ಮಾನವನ ಮಧ್ಯಪ್ರವೇಶದಿಂದ ಆಕಸ್ಮಿಕವಾಗಿ ಗ್ಯಾಸ್ ಲೀಕ್ ಆದ ಸಂದರ್ಭದಲ್ಲಿ ಸ್ಥಳೀಯರು ನಿರ್ವಹಿಸಬೇಕಾದ ಜವಾಬ್ದಾರಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಜೊತೆಗೆ ಇಂತಹ ಸನ್ನಿವೇಶದಲ್ಲಿ ಕಂಪನಿಯ ಸಿಬ್ಬಂದಿಗಳು ಇತರೆ ಇಲಾಖೆಗಳ ಸಹಭಾಗಿತ್ವದಲ್ಲಿ ಯಾವ ರೀತಿ ಕಾರ್ಯಾಚರಣೆ ನಡೆಸುತ್ತಾರೆ ಎಂಬುದರ ಅಣಕು ಪ್ರದರ್ಶನದ ಮೂಲಕ ಜನರಿಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಡೆಪ್ಯುಟಿ ಡೈರೆಕ್ಟರ್ ಫ್ಯಾಕ್ಟರಿ ಮಂಗಳೂರು ಎಂ.ಎಸ್. ಮಹಾದೇವ್ ಮಾತನಾಡಿ ಕಂಪನಿಯು ಏರ್ಪಡಿಸಿದ ಅಣುಕು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯರಲ್ಲಿ ಭಯ ಮತ್ತು ಆತಂಕವನ್ನು ನಿವಾರಿಸಲು ಸಾಧ್ಯ ಎಂದರು.

ಚಿಕ್ಕಮಗಳೂರು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೀಕ್ಷಿತ್, ಗೋಣಿಬೀಡು ಪಿಎಸೈ ಹರ್ಷವರ್ಧನ್, ಗೌಡಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ದಿವಾಕರ್ ಮಾತನಾಡಿದರು.  ಊರುಬಗೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪ ರಾಜು, ಸದಸ್ಯರಾದ ಅಭಿಷೇಕ್, ನಚ್ಚಿ, ಸಂತೋಷ್, ಕಂಪನಿಯ ಹಿರಿಯ ಅಧಿಕಾರಿಗಳು,   ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ,   ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ