October 5, 2024

ELECTORAL BONDS - 4

ಸುಪ್ರೀಂ ಕೋರ್ಟ್ ಆದೇಶದಂತೆ ಭಾರತದ ಚುನಾವಣಾ ಆಯೋಗ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಿಂದ ಪಡೆದ ಚುನಾವಣಾ ಬಾಂಡ್‌ (Electoral Bond)ಗಳ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸುಪ್ರೀಂ ಕೋರ್ಟ್‌ ಮಾರ್ಚ್‌ 15ರ ಒಳಗಡೆ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಚುನಾವಣಾ ಆಯೋಗಕ್ಕೆ ಗಡುವು ನೀಡಿತ್ತು. ಇದೀಗ ಚುನಾವಣಾ ಆಯೋಗ ಒಂದು ದಿನದ ಮೊದಲೇ ಮಾಹಿತಿಯನ್ನು ಪ್ರಕಟಿಸಿದೆ.

ನ್ಯಾಯಾಲಯದ ಸೂಚನೆಯಂತೆ ಚುನಾವಣಾ ಬಾಂಡ್​ಗಳ ವಿವರಗಳನ್ನು ಎರಡು ವಿಭಾಗಗಳಲ್ಲಿ ಹಂಚಿಕೊಳ್ಳಲಾಗಿದೆ. ಮೊದಲ ಭಾಗದಲ್ಲಿ ಬಾಂಡ್‌ಗಳ ಖರೀದಿದಾರರ ಹೆಸರು ಮತ್ತು ಮುಖಬೆಲೆಯನ್ನು ತೋರಿಸಲಾಗಿದೆ. ಇನ್ನೊಂದರಲ್ಲಿ ರಾಜಕೀಯ ಪಕ್ಷಗಳು ಮತ್ತು ಅವುಗಳು ನಗದು ಮಾಡಿದ ಬಾಂಡ್‌ಗಳ ಬೆಲೆಯನ್ನು ಪ್ರಕಟಿಸಲಾಗಿದೆ.

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಟಾಪ್ 10 ದಾನಿಗಳು

ಫ್ಯೂಚರ್ ಗೇಮಿಂಗ್ & ಹೋಟೆಲ್ ಸರ್ವೀಸಸ್ ಪಿಆರ್ – 1,368 ಕೋಟಿ ರೂ.
ಮೇಘಾ ಎಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್ – 966 ಕೋಟಿ ರೂ.
ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ – 410 ಕೋಟಿ ರೂ.
ವೇದಾಂತ ಲಿಮಿಟೆಡ್ – 400 ಕೋಟಿ ರೂ.
ಹಲ್ದಿಯಾ ಎನರ್ಜಿ ಲಿಮಿಟೆಡ್ – 377 ಕೋಟಿ ರೂ.
ಭಾರ್ತಿ ಗ್ರೂಪ್ – 247 ಕೋಟಿ ರೂ.
ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್ – 224 ಕೋಟಿ ರೂ.
ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್‌ ಕಂಪೆನಿ ಲಿಮಿಟೆಡ್ – 220 ಕೋಟಿ ರೂ.
ಕೆವೆಂಟರ್ ಫುಡ್‌ಪಾರ್ಕ್‌ ಇನ್ಫ್ರಾ ಲಿಮಿಟೆಡ್ – 195 ಕೋಟಿ ರೂ.
ಮದನ್ ಲಾಲ್ ಲಿಮಿಟೆಡ್ – 185 ಕೋಟಿ ರೂ.

ಯಾರಿಗೆ ಎಷ್ಟು?

ಎಸ್.ಬಿ.ಐ. ಪ್ರಕಟಿಸಿರುವ ವಿವರದಂತೆ ಎಲೆಕ್ಟ್ರೋಲ್ ಬಾಂಡ್ ಪಡೆದ ಪಕ್ಷಗಳ ಪೈಕಿ ಬಿಜೆಪಿ ಸಿಂಹಪಾಲು ಪಡೆದುಕೊಂಡಿದೆ. ಬಿಜೆಪಿಯ ಪಾಲು 47.5%ಕ್ಕಿಂತ ಹೆಚ್ಚು (6,060.5 ಕೋಟಿ ರೂ.). ತೃಣಮೂಲ ಕಾಂಗ್ರೆಸ್ 1,609.50 ಕೋಟಿ ರೂ.(12.6%) ಪಡೆದರೆ, ಕಾಂಗ್ರೆಸ್‌ಗೆ 1,421.9 ಕೋಟಿ ರೂ. (11.1%) ಲಭಿಸಿದೆ. ಭಾರತ್ ರಾಷ್ಟ್ರ ಸಮಿತಿ (9.5%), ಬಿಜು ಜನತಾದಳ (6.1%) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (5%) 500 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಿದ ಇತರ ಪಕ್ಷಗಳು.

ಫೆಬ್ರವರಿ 15ರಂದು ಕೋರ್ಟ್‌ ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಅನಾಮಧೇಯ ರಾಜಕೀಯ ಧನಸಹಾಯವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಇದನ್ನು “ಅಸಂವಿಧಾನಿಕ” ಎಂದು ಕರೆದಿತ್ತು ಮತ್ತು ದಾನಿಗಳು ಮತ್ತು ಸ್ವೀಕರಿಸುವವರ ಮೊತ್ತವನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ