October 5, 2024

ಮಾರ್ಚ್ 7 ರಂದು ನಡೆದ ದ್ವಿತೀಯ ಪಿಯು ಭೌತಶಾಸ್ತ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಭಾನುವಾರ ಸುತ್ತೋಲೆ ಹೊರಡಿಸಿದೆ.

ಮಾರ್ಚ್​​ 7ರಂದು ಭೌತಶಾಸ್ತ್ರ (Physics​​) ನಡೆದಿತ್ತು. ಆದರೆ ಭೌತಶಾಸ್ತ್ರ ವಿಷಯದ ಪರೀಕ್ಷೆಯು ಕಷ್ಟ ಕಷ್ಟವಾಗಿತ್ತು. ಅದರಲ್ಲೂ ಬಹುಆಯ್ಕೆ ಪ್ರಶ್ನೆಗಳು ತುಂಬಾ ಕಷ್ಟವಾಗಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದರು.

ತಕ್ಷಣವೇ ಪೆಟಿಷನ್​​ ಸಲ್ಲಿಕೆಗೆ ಮುಂದಾಗಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಆನ್​ಲೈನ್​ ಪೆಟಿಶನ್ ಸಲ್ಲಿಸಿದ್ದರು.

7/03/2024 ರಂದು ನಡೆದ ಭೌತಶಾಸ್ತ್ರ ಪರೀಕ್ಷೆಯಲ್ಲಿ, MCQ ಗಳು ತುಂಬಾ ಕಷ್ಟಕರ ಮತ್ತು ಟ್ರಿಕಿ ಆಗಿದ್ದವು. ತಿಂಗಳಾನುಗಟ್ಟಲೆ ಕಷ್ಟಪಟ್ಟು ಓದಿರುವ ನಾವು ಇಂತಹ ಕಷ್ಟದ ಪರಿಸ್ಥಿತಿ ಎದುರಿಸಲು ಬಯಸುವುದಿಲ್ಲ. ಪ್ರತಿಯೊಂದು ಅಂಕವೂ ನಮ್ಮ ಭವಿಷ್ಯವನ್ನು ನಿರ್ಧರಿಸುವಂತಹದ್ದಾಗಿರುವುದರಿಂದ

ನಾವು ಒಂದೇ ಒಂದು ಅಂಕವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಈ ಅಸ್ಪಷ್ಟತೆಗೆ ಪರಿಹಾರಾರ್ಥವಾಗಿ 7 MCQ ಗಳಿಗೆ ಗ್ರೇಸ್ ಅಂಕಗಳನ್ನು ನೀಡಬೇಕೆಂದು  ಪಿಯು ಮಂಡಳಿಯನ್ನು ಒತ್ತಾಯಿಸಿದ್ದರು.

ಇನ್ನು ಯಾವುದೇ ಪ್ರಶ್ನೆಪತ್ರಿಕೆಗಳಲ್ಲಿ ಪ್ರಶ್ನೆಗಳು ಅಸಂಬದ್ಧವಾಗಿ ಮತ್ತು ಅಸ್ಪಷ್ಟವಾಗಿ ಇರಬಾರದು ಎಂದು ಸ್ವತಃ ಪಿಯುಸಿ ಮಂಡಳಿ ಬದ್ಧತೆ ತೋರುತ್ತದೆ. ಆದರೆ ವಿಷಯ ತಜ್ಞರು ಹೇಳುವಂತೆ ಈಗಿನ ಭೌತಶಾಸ್ತ್ರ ಪರೀಕ್ಷೆಯಲ್ಲಿ MCQ ವಿಭಾಗದಲ್ಲಿ ಏಳೆಂಟು ಪ್ರಶ್ನೆಗಳ ಉತ್ತರಗಳು ಅಸ್ಪಷ್ಟವಾಗಿರುವಂತಿದೆ. ಇದಕ್ಕೆ ಹೊಣೆಯಾರು? ಅಥವಾ ಮಂಡಳಿಯು ತನ್ನದೇ ಆದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದೆಯೇ? ಹೌದಾದಲ್ಲಿ ಇದು ತುಂಬಾ ದುಃಖಕರವಷ್ಟೇ ಅಲ್ಲ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದಂತಾಗುವುದಿಲ್ಲವೇ? ಎಂದು ಹೇಳಿದ್ದರು. ಈ ಪೆಟಿಶನ್ಗೆ ಸಾಕಷ್ಟು ಮಂದಿ ಸಮ್ಮತಿ ಸೂಚಿಸಿದ್ದರು.

ಈ ಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.ಇಂದು ಒಂದು ಬಾರಿಯ ನಿರ್ಣಯವಷ್ಟೇ. ಭವಿಷ್ಯದಲ್ಲಿ ಮತ್ತೆ ಇಂತಹ ನಿರ್ಣಯಗಳ ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದೆ.

ಪ್ರಶ್ನೆಪತ್ರಿಕೆಯ ಭಾಗ A ಯಲ್ಲಿ ಬ್ಲೂಪ್ರಿಂಟ್ ಅಲ್ಲದ MCQ ಗಳನ್ನು ಪ್ರಯತ್ನಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲು ನಿರ್ಧರಿಸಲಾಗಿದ್ದು, ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನವೇ ನಡೆದ ವಿದ್ಯಾರ್ಥಿಗಳಿಗೆ ಯಾವುದೇ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ