October 5, 2024

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದಲ್ಲಿ ನಿವೇಶನ ರಹಿತರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ನಡುವೆ ನಡೆದ ಬಹಿರಂಗ ಚರ್ಚೆಯ ಸಭೆ ಯಾವುದೇ ಪರಿಹಾರ ಕಾಣದೇ ಗೊಂದಲದಲ್ಲಿ ಮುಕ್ತಾಯವಾಗಿದೆ.

ಚಿಕ್ಕಮಗಳೂರು  ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರದ ಕೆಲವು ನಿವಾಸಿಗಳಿಗೆ ವಸತಿ ಹಂಚಿಕೆ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ ಹಾಗೂ ಅಧಿಕಾರದ ದುರುಪಯೋಗವಾಗಿದೆ ಎಂದು ಇತ್ತೀಚೆಗೆ ಗ್ರಾಮದ ಕೆಲವರು ಅಸಮಾಧಾನಗೊಂಡು  ಗ್ರಾಮ ಪಂಚಾಯತಿ ಸೇರಿದಂತೆ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗ್ರಾಮದ ಕೆಲವರು ಮಾಡಿದಂತಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಆರೋಪಕ್ಕೆ  ಪ್ರತ್ಯಾರೋಪ ಮಾಡಿ ಪ್ರತಿಕ್ರಿಯಿಸಿದ್ದರು.

ಅದರ ಅನ್ವಯ ಅಧ್ಯಕ್ಷರು ಮಾತನಾಡಿ ನಾವು ನಿವೇಶನ ಆಯ್ಕೆ ಪಟ್ಟಿ ತಯಾರಿಸುವಾಗ ಹಿರಿತನದ ಆಧಾರ ಹಾಗೂ 2013ರ ಹಿಂದೆ ನೀಡಿದ ಅರ್ಜಿಯನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆಯನ್ನು ಮಾಡಿದ್ದೇವೆ ಅದನ್ನು ಬಿಟ್ಟು ನಾವು ಅಥವಾ ನನ್ನ ಸ್ವಂತ ಇಚ್ಛೆಯಂತೆ ನನ್ನ ಸಂಬಂಧಿಕರಿಗೆ ಹಾಗೂ ನನಗೆ ಬೇಕಾದವರಿಗೆ ಯಾರಿಗೂ ನಾನು ನಿವೇಶನವನ್ನು ಹಂಚುವ ಆಯ್ಕೆ ಪಟ್ಟಿಯನ್ನು ತಯಾರಿಸಿಲ್ಲ ನನ್ನ ಸ್ಥಾನದಲ್ಲಿ ಬೇರೆ ಯಾರೇ ಇದ್ದರು ನಾನು ಆಯ್ಕೆ ಮಾಡಿದಂತೆ ವ್ಯಕ್ತಿಗಳನ್ನು ಮೊದಲಾದ್ಯತೆಯಲ್ಲಿ  ಪರಿಗಣಿಸುತ್ತಿದ್ದರು ಆದರೆ ನನ್ನ ಮೇಲೆ ವೈಯಕ್ತಿಕ ದ್ವೇಷದಿಂದ ಆರೋಪವನ್ನು ಹೊರಿಸಿ ನಿಂದಿಸುವ ಪ್ರಯತ್ನ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿ ಉತ್ತರವಂತೆ ಪುನಃ ಪತ್ರಿಕಾಗೋಷ್ಠಿ ನಡೆಸಿದ ಗ್ರಾಮದ ಕೆಲವು ನಿವಾಸಿಗಳು  ಅಧ್ಯಕ್ಷರು ನೀಡಿರುವ ಹೇಳಿಕೆಯಲ್ಲಿ ತಾರತಮ್ಯವಿದೆ ಅವರಿಗೆ ಬೇಕಾದಂತೆ ಸುದ್ದಿಗೋಷ್ಠಿ ನಡೆಸಿ ತಪ್ಪು ಮಾಹಿತಿಯನ್ನು ಜನರಿಗೆ ನೀಡಿದ್ದಾರೆ ಆದ್ದರಿಂದ ಗ್ರಾಮಕ್ಕೆ ಬಹಿರಂಗವಾಗಿ ಅಧ್ಯಕ್ಷರು ಚರ್ಚೆಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದರು.

ಇದರ ಅನ್ವಯ ಸಮಸ್ಯೆಯನ್ನು ಮಾತಾಡಿ ಬಗೆಹರಿಸುವಂತೆ ಗ್ರಾಮದ ಹಿರಿಯರು ಮನವಿ   ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಕೃಷ್ಣಾಪುರದ ಸಮುದಾಯ ಭವನದಲ್ಲಿ  ಬಹಿರಂಗ ಚರ್ಚೆಗೆ ಅಧ್ಯಕ್ಷರನ್ನು ಆಹ್ವಾನಿಸಿ ಚರ್ಚೆ ಪ್ರಾರಂಭಿಸುತಿದ್ದಂತೆ ನಮಗೆ ಇದುವರೆಗೂ ನಿಮ್ಮಿಂದ ಯಾವುದೇ ರೀತಿಯ ನ್ಯಾಯಯುತವಾದ ಕೆಲಸಗಳಾಗಿಲ್ಲ ಅಧ್ಯಕ್ಷರು ಅವರಿಗೆ ಬೇಕಾದಂತೆ ಖಾಸಗಿ ಸಭೆ ಏರ್ಪಡಿಸಿದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ಗ್ರಾಮ ಪ್ರಮುಖರು ಮಾತನಾಡಿ ಈ ಸಭೆಯಲ್ಲಿ ನಾವು ತಾಳ್ಮೆಯಿಂದ ಚರ್ಚಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಹಕರಿಸಿ ಎಂದಾಗ ಇದಕ್ಕೆ ಪ್ರತಿಕ್ರಿಯಿಸಿದ ಆಕ್ರೋಶಿತ ಗ್ರಾಮಸ್ಥರು ಇಲ್ಲ ಈ ಸಂದಾನದಿಂದ ನಮಗೆ ಯಾವುದೇ ಪ್ರಯೋಜನವಿಲ್ಲ ನಾವು ಮುಂದಿನ  ದಿನಗಳಲ್ಲಿ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಸಭೆ ಬಹಿಷ್ಕರಿಸಿ ಆಕ್ರೋಶಿತ ಗ್ರಾಮಸ್ಥರು ಹೊರನಡೆದರು.

ಒಟ್ಟಾರೆ ಬಹಿರಂಗ ಚರ್ಚೆ ಮತ್ತು ಸಂಧಾನ ಸಭೆ ಯಾವುದೇ ಪರಿಹಾರವನ್ನು ಕಾಣದೇ ಗೊಂದಲದ ನಡುವೆ ಸಮಾಪ್ತಿಗೊಂಡಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ