October 5, 2024

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾ.ಪಂ. ಅಧ್ಯಕ್ಷರು ನಿವೇಶನ ಹಂಚಿಕೆಯಲ್ಲಿ ಕೃಷ್ಣಾಪುರ ಗ್ರಾಮಸ್ಥರಿಗೆ ತಾರತಮ್ಯ ಮಾಡಿದ್ದಾರೆ. ಈ ಬಗ್ಗೆ ನಾವು ಭಹಿರಂಗ ಚರ್ಚೆ ನಡೆಸಲು ತಯಾರಿದ್ದೇವೆಂದು ಮಹಮ್ಮದ್ ಶರೀಫ್ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾ.ಪಂ. ಅಧ್ಯಕ್ಷರು ನಿವೇಶನ ಹಂಚಿಕೆಯನ್ನು ರಾಜೀವ್‍ಗಾಂಧಿ ಹೌಸಿಂಗ್ ಗೈಡ್‍ಲೈನ್‍ನಂತೆ ಕೆಟಗರಿ ಮತ್ತು ಸೀನಿಯಾರಿಟಿ ಪ್ರಕಾರವೇ ಮಾಡಿದ್ದೇವೆಂದು ಹೇಳಿಕೆ ನೀಡಿದ್ದಾರೆ. ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಿದ್ದರೆ ಕೃಷ್ಣಾಪುರ ಗ್ರಾಮದ ಜಮೀಲಾ, ಮಂಜುಳ, ಸಹರಾ, ಕುಸುಮಾ, ಜ್ಯೋತಿ ಅವರಿಗೆ ನಿವೇಶನ ಸಿಗಬೇಕಿತ್ತು. ಅಲ್ಲದೇ ನಿವೇಶನ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪ ಕಂಡು ಬಂದರೆ 7 ದಿನದೊಳಗೆ ತಕರಾರು ಅರ್ಜಿ ನೀಡಲು ಹಾಕಿದ್ದ ನೋಟೀಸನ್ನು ನಾವು ಹರಿದು ಹಾಕಿಲ್ಲ. ಹಾಗೆ ಹರಿದಿದ್ದರೆ ಸಿಸಿ ಟಿವಿಯಲ್ಲಿ ಪರೀಕ್ಷೆ ಮಾಡಲಿ ಎಂದು ಹೇಳಿದರು.

ನನ್ನ ಪತ್ನಿ ಚುನಾವಣೆಯಲ್ಲಿ ಸೋತಿದ್ದ ಕಾರಣ ಧ್ವೇಷ ಕಾರುತ್ತಿದ್ದಾರೆಂದು ಹೇಳಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ಜನರ ಸೇವೆ ಮಾಡಲು ಜನಪ್ರತಿನಿಧಿಯಾಗಬೇಕೆಂಬ ನಿಯಮವಿಲ್ಲ. ಚುನಾವಣೆಯಲ್ಲಿ ನನ್ನ ಪತ್ನಿ 3 ಮತದಿಂದ ಸೂಲು ಕಂಡಿದ್ದರೂ ಜನರು ಮತ ಹಾಕಿರುವುದನ್ನು ಮರೆಯಬಾರದು. ಹಾಗಾಗಿ ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ನಿವೇಶನ ಹಂಚಿಕೆಯಾಗಿರುವ ಬಗ್ಗೆ ಮೊದಲು ಕೃಷ್ಣಾಪುರ ಸಮುದಾಯಭವನದಲ್ಲಿ ಭಹಿರಂಗ ಚರ್ಚೆಯಾಗಬೇಕು. ಅಲ್ಲಿಯವರೆಗೂ ಯಾರಿಗೂ ನಿವೇಶನ ಹಂಚಿಕೆ ಮಾಡಬಾರದು. ಒಂದು ವೇಳೆ ನಿವೇಶನ ಹಂಚಿಕೆ ಮಾಡಿದರೆ ಗ್ರಾ.ಪಂ. ಎದುರು ಟೆಂಟ್ ಹಾಕಿ ಗ್ರಾಮಸ್ಥರೊಂದಿಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಕೆ.ಎಂ.ಮುಸ್ತಾಕ್, ಹರೀಶ್, ರಾಮ್‍ರಾವ್, ಅಲ್ತಾಫ್, ಮುಸ್ತಾಕ್‍ಅಲಿ, ಜೋಸೆಫ್, ಪ್ರಕಾಶ್, ಶರೀಫಾ, ಸಾಯಿರಾ, ಕುಸುಮಾ, ಜ್ಯೋತಿ, ಕಮಲಾಕ್ಷಿ, ಜುಬೇದಾ, ಮಂಜುಳ, ತಸ್ಲೀಮಾ, ಸುಮಯ್ಯ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ