October 5, 2024

ಪ್ರೊ ಕಬಡ್ಡಿ ಲೀಗ್‌ 2024ರ ನೂತನ ಚಾಂಪಿಯನ್‌ ಆಗಿ ಪುಣೆರಿ ಪಲ್ಟನ್‌ ತಂಡ ಹೊರಹೊಮ್ಮಿದೆ. ಶುಕ್ರವಾರ ರಾತ್ರಿ  ನಡೆದ ಫೈನಲ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 28-23 ಅಂತರದ ಗೆಲುವು ಸಾಧಿಸಿ ಪುಣೇರಿ ಪಲ್ಟನ್ ಚಾಂಪಿಯನ್ ಪಟ್ಟಕ್ಕೇರಿದೆ.

ಹರಿಯಾಣ ಸ್ಟೀಲರ್ಸ್‌ ವಿರುದ್ಧದ ರೋಚಕ ಫೈನಲ್‌ ಪಂದ್ಯದಲ್ಲಿ ಗೆದ್ದ ಪುಣೇರಿ ಪಲ್ಟನ್ ತಂಡವು   ಮೊಟ್ಟಮೊದಲ ಬಾರಿ ಪ್ರೋ ಕಬ್ಬಡ್ಡಿ ಟ್ರೋಫಿ ಎತ್ತಿಹಿಡಿದಿದೆ.   ಶುಕ್ರವಾರ ರಾತ್ರಿ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಸ್ಲಾಮ್‌ ಇನಾಮ್ದಾರ್‌ ನೇತೃತ್ವದ ಪುಣೇರಿ ಪಲ್ಟನ್ ತಂಡ ಗೆದ್ದು ಚಾಂಪಿಯನ್‌ ಆಗಿದೆ.

ಆರಂಭದಿಂದಲೂ ಲೀಡ್‌ ಕಾಯ್ದುಕೊಂಡಿಂದ್ದ ಪುಣೇರಿ ಪಲ್ಟನ್ ಒಂದು ಹಂತದಲ್ಲಿ ಭಾರಿ ಮುನ್ನಡೆ ಸಾಧಿಸಿತು. ಆದರೆ ತಿರುಗೇಟು ನೀಡಿದ ಹರ್ಯಾಣ ಸಮಬಲ ಸಾಧಿಸಿ ಪ್ರಬಲ ಪೈಪೋಟಿ ನೀಡಿತು. ಅಂತಿಮ ಹಂತದಲ್ಲಿ ಪುಣೆ ಲೀಡ್‌ ಕಾಯ್ದುಕೊಂಡಿದ್ದು ನೆರವಾಯಿತು. ಅಲ್ಲದೆ ಒಂದು ಬಾರಿ ಹರಿಯಾಣವನ್ನು ಆಲೌಟ್‌ ಮಾಡುವಲ್ಲಿ ಪುಣೆ ಯಶಸ್ವಿಯಾಗಿದ್ದು, ಅದಕ್ಕೆ ಹೆಚ್ಚುವರಿ ಅಂಕಗಳನ್ನು ತಂದಿತ್ತಿತ್ತು. ಅಂತಿಮವಾಗಿ 28-25 ಅಂಕಗಳ ಅಂತರದಿಂದ ತಂಡ ಫೈನಲ್ ಪಂದ್ಯ ಗೆದ್ದು ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ.

ಪಂಕಜ್‌ ಮೋಹಿತೆ ಒಟ್ಟು 9 ರೈಡ್‌ ಪಾಯಿಂಟ್‌ಗಳೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೋಹಿತ್‌ ಗೋಯತ್‌ ಕೂಡಾ 5 ಪಾಯಿಂಟ್‌ ಕಲೆ ಹಾಕಿದರು. ಟೂರ್ನಿಯಲ್ಲಿ ಅತಿ ಹೆಚ್ಚು ಟ್ಯಾಕಲ್‌ ಪಾಯಿಂಟ್‌ ಕಲೆ ಹಾಕಿದ ಮಹಮದ್ರೇಜಾ ಶಾಡ್ಲೋಯಿ 2 ಟ್ಯಾಕಲ್‌ ಪಾಯಿಂಟ್‌ ಗಳಿಸಿದರು. ನಾಯಕ ಅಸ್ಲಾಮ್‌ ಹಾಗೂ ಗೌರವ್‌ ತಲಾ 4 ಅಂಕ ತಂಡಕ್ಕೆ ತಂದರು. ಹರಿಯಾಣ ಪರ ಶಿವಂ ಪಟಾರೆ 6 ರೈಡ್‌ ಅಂಕ ಪಡೆದರೆ, ಸಿದ್ದಾರ್ಥ್‌ ದೇಸಾಯಿ 4 ಪಾಯಿಂಟ್‌ ಸಂಗ್ರಹಿಸಿದರು.

ಪಂದ್ಯಾವಳಿಯ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಅರ್ಹವಾಗಿಯೇ ಚಾಂಪಿಯನ್ ಪಟ್ಟ ಗಳಿಸಿದ ಪುಣೇರಿ ಪಲ್ಟರ್  ಗೆ 3 ಕೋಟಿ ರೂ ಬಹುಮಾನದ ಮೊತ್ತ ಲಭಿಸುತ್ತಿದ್ದು, ರನ್ನರ್ ಅಪ್ ಹರ್ಯಾಣ ಸ್ಟೀಲರ್ಸ್ ತಂಡ 1.8 ಕೋಟಿ ರೂ ಬಹುಮಾನದ ಹಣ ಪಡೆಯಲಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ