ಇಂದು (ಬುಧವಾರ) ಮೂಡಿಗೆರೆ ತಾಲ್ಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಅಗಲಿದೆ.
ಮೂಡಿಗೆರೆ-ಗೆಂಡೇಹಳ್ಳಿ ಮಾರ್ಗದ ಜಂಗಲ್ ಕಟ್ಟಿಂಗ್ ಕಾರ್ಯ ಹಮ್ಮಿಕೊಂಡಿರುವುದರಿಂದ ಮೂಡಿಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಮಾರ್ಗಗಳಾದ ಬಣಕಲ್, ಬಾಳೂರು, ಗೋಣಿಬೀಡ, ದೇವರುಂದ, ಗೌಡಹಳ್ಳಿ, ದಾರದಹಳ್ಳಿ, ಮಾಕೋನಹಳ್ಳಿ, ಮೂಡಿಗೆರೆ ಪಟ್ಟಣ, ಹ್ಯಾಂಡ್ ಪೋಸ್ಟ್ ಮತ್ತು ವಾಟರ್ ಸಪ್ಲೈ ಫೀಡರ್ ಗಳಲ್ಲಿ ಇಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಗ್ರಾಹಕರು ಸಹಕರಿಸಬೇಕೆಂದು ಮೂಡಿಗೆರೆ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕರ ಕಛೇರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.