October 5, 2024

ಭಕ್ತಿಗೀತೆಗಳಿಗೆ ನಾಟ್ಯ ಜೋಡಿಸುವ ನಾಡಿನ ಪ್ರಥಮ ಪ್ರಯೋಗ ‘ನೃತ್ಯ ನಮನ’ ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಯಶಸ್ವಿಯಾಯಿತು.

ಕಲ್ಕಟ್ಟೆ ಪುಸ್ತಕಮನೆ, ಲಯನ್ಸ್ ಸಂಸ್ಥೆ, ಯಕ್ಷಸಿರಿ ನಾಟ್ಯವೃಂದ, ಕೆನರಾಬ್ಯಾಂಕ್ ‘ಕಲ್ಕಟ್ಟೆ ಕನ್ನಡ-21’ ಖ್ಯಾತಸಾಹಿತಿ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಸಾಹಿತ್ಯ ರಚಿಸಿ ಸ್ವರ ಸಂಯೋಜಿಸಿದ 10ಭಕ್ತಿಗೀತೆಗಳಿಗೆ ನೃತ್ಯ ಅಭಿನಯನದ ಮೂಲಕ ನಮನ ಸಲ್ಲಿಸಲಾಯಿತು.

ಚಿಕ್ಕಮಗಳೂರಿನ ಭರತಕಲಾ ಕ್ಷೇತ್ರ ಮತ್ತು ಶ್ರೀಕಂಠೇಶ್ವರ ಕಲಾಮಂದಿರ ಹಾಗೂ ಶೃಂಗೇರಿಯ ನಾಟ್ಯವೈಭವ ನೃತ್ಯ ಅಕಾಡೆಮಿಯ 50ಕ್ಕೂ ಹೆಚ್ಚು ಕಲಾವಿದರು ಅಂದಚಂದದ ವಸ್ತ್ರಾಭರಣಗಳೊಂದಿಗೆ ಭಾವತುಂಬಿ ನೃತ್ಯಾಭಿನಯದ ಮೂಲಕ ಗಮನಸೆಳೆದರು.

ಕಲಾವಿದೆ ಹಿಮಗಿರಿವೆಂಕಟೇಶ್‍ರ ಪ್ರಾರ್ಥನಾ ನೃತ್ಯ ಗಣಪತಿ ಸ್ತುತಿಯೊಂದಿಗೆ ಅಭಿನಯಿಸಿದ ಭರತನಾಟ್ಯದೊಂದಿಗೆ ಆರಂಭಗೊಂಡ ಭಕ್ತಿಗೀತೆಗಳ ನೃತ್ಯನಮನ ನಾಡಿನಲ್ಲಿ ಅತಿಹೆಚ್ಚು ಮನ-ಮನೆ ತಲುಪಿರುವ ಎಸ್ಪಿಬಿ ಸಿರಿಕಂಠದಲ್ಲಿ ಮೊಳಗಿದ ‘ಭಾವದಲೆಯಲ್ಲಿ ಶಾರದೆಗಾನ…’ ಹಾಡಿಗೆ 30ಕ್ಕೂ ಹೆಚ್ಚು ಯುವ ಕಲಾವಿದರು ಹೆಜ್ಜೆ ಹಾಕುವ ಮೂಲಕ ಸಂಪನ್ನಗೊಂಡಿತು.

ನಮೋ ಶಾರದಾಂಬೆ…, ಅಕ್ಷರಮಾತೆ ಹರಿಹರಪುರವಾಸಿ…, ನೃತ್ಯದ ನಂತರ ಮಂದಾರ್ತಿ ದುರ್ಗಾ ಪರಮೇಶ್ವರಿಯನ್ನು ಸ್ತುತಿಸುವ ನಿನ್ನ ನೋಡಲೆಂದೆ ನಾ ಬಂದೇನಮ್ಮಾ…, ಕಾಪಾಡಮ್ಮ ಕೋಲ್ಲೂರ ಮುಕಾಂಬಿಕೆ… ಸೇರಿದಂತೆ ಒಟ್ಟು ಹತ್ತು ಭಕ್ತಿಭಾವ ಬೆಸೆಯುವ ನೃತ್ಯಗಳು ನೋಡುಗರ ಮನಸೆಳೆಯಿತು.

ಚಲನಚಿತ್ರ ನಟಿ ಶೃಂಗೇರಿಯ ನಾಗಶ್ರೀ ಬೇಗಾರ್ ಜ್ಯೋತಿ ಬೆಳಗುವ ಮೂಲಕ ‘ನೃತ್ಯ ನಮನ’ ಉದ್ಘಾಟಿಸಿ ಶುಭ ಹಾರೈಸಿದರು. ಲಯನ್ಸ್ ಅಧ್ಯಕ್ಷ ಜಿ.ರಮೇಶ್, ಪದಾಧಿಕಾರಿಗಳಾದ ಬಾಲಕೃಷ್ಣ-ನಾರಾಯಣಸ್ವಾಮಿ, ಯಕ್ಷಸಿರಿ ನಿರ್ದೇಶಕ ಪರಮೇಶ್ವರ, ಕಲಾಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ವೇದಿಕೆಯಲ್ಲಿದ್ದರು.

ಮುಖ್ಯಅತಿಥಿಗಳಾಗಿದ್ದ ಎಐಟಿ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ರಾಯ ಮಾತನಾಡಿ ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಅವಕಾಶ ಕೊಟ್ಟಾಗ ಅನಾವರಣಗೊಳ್ಳುತ್ತದೆ. ಪುಟ್ಟಮಕ್ಕಳನ್ನು ಗುರುತಿಸಿ, ಪ್ರೋತ್ಸಾಹಿಸಿ ತರಬೇತಿ ನೀಡಿ ಉತ್ಸಾಹತುಂಬಿ ಭಕ್ತಿಗೀತೆಗಳಿಗೆ ನೃತ್ಯ ಮಾಡಿಸುವ ಮೂಲಕ ಬೆನ್ನುತಟ್ಟುವ ಕೆಲಸ ಸ್ತುತ್ಯಾರ್ಹ. ಕಲ್ಕಟ್ಟೆ ಪುಸ್ತಕಮನೆ ಓದುವ ಸಂಸ್ಕøತಿಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಆರಂಭಗೊಂಡು ಹಲವು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಮೊಬೈಲ್ ಅಂತರ್ಜಾಲ ಸೇರಿದಂತೆ ವಿವಿಧೆಡೆಯಿಂದ ಎರವಲು ಪಡೆಯುವ ಮಾಹಿತಿ ಎಷ್ಟರಮಟ್ಟಿಗೆ ಮನಪಟದಲ್ಲಿ ನೆಲೆನಿಲ್ಲುತ್ತದೆ ಎಂಬುದು ಯೋಜಿಸಬೇಕಾಗಿದೆ. ಪುಸ್ತಕ ಓದುವುದರ ಜೊತೆಗೆ ಕೊಂಡು ಓದುವ ಸಂಸ್ಕøತಿಯನ್ನು ರೂಢಿಸಿಕೊಳ್ಳಬೇಕೆಂದು ಡಾ.ಸುಬ್ರಾಯ ಕರೆ ನೀಡಿದರು.

ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಸಿದ ಎಚ್.ಎಂ.ನಾಗರಾಜರಾವ್ 2013ರಲ್ಲಿ ಜಿಲ್ಲೆಯ ಗಡಿಗ್ರಾಮ ಚೌಳಹಿರಿಯೂರಿನಲ್ಲಿ ಆರಂಭಗೊಂಡ ಕಲ್ಕಟ್ಟೆಪುಸ್ತಕಮನೆ 17ಜಿಲ್ಲೆಗಳಲ್ಲಿ ಈವರೆಗೆ 365ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹೈದರಾಬಾದ್, ಮುಂಬೈ, ಕಾಸರಗೋಡು ಸೇರಿದಂತೆ ಪಕ್ಕದ ರಾಜ್ಯಗಳಲ್ಲೂ ಕಾರ್ಯಕ್ರಮ ನೀಡಿದ್ದು 21ನೆಯ ವರ್ಷದ ಸಂಭ್ರಮಕ್ಕಾಗಿ ಭಕ್ತಿಗೀತೆಗಳ ನೃತ್ಯನಮನ ಆಯೋಜನೆಗೊಂಡಿದೆ ಎಂದರು.

ಕಲ್ಕಟ್ಟೆಕುಟುಂಬದ ಪಿಎಚ್‍ಡಿ ಪದವೀಧರೆ ಬೆರಣುಗೋಡಿನ ಡಾ.ಬಿ.ಎನ್.ನಮನಾ ಮತ್ತು ಸಂಗೀತ ನೃತ್ಯ ಅಕಾಡೆಮಿಯ ಮಾಜಿಸದಸ್ಯ ರೇಖಾಪ್ರೇಮಕುಮಾರ್ ಅವರನ್ನು ಕಲಾಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಸಾಹಿತಿ ಮೇಕನಗದ್ದೆ ಲಕ್ಷ್ಮಣಗೌಡ ಮತ್ತಿತರರು ಸನ್ಮಾನಿಸಿದರು. ಭರತ ಕಲಾಕ್ಷೇತ್ರದ ಪ್ರಧಾನಗುರು ವೀಣಾ ಅರವಿಂದ, ಶ್ರೀಕಂಠೇಶ್ವರ ಕಲಾಮಂದಿರದ ವಿದೂಷಿ ಸುಮನಾ ರಾಮಚಂದ್ರ, ಶೃಂಗೇರಿ ನಾಟ್ಯವೈಭವ ನೃತ್ಯ ಅಕಾಡೆಮಿಯ ಪ್ರಧಾನಗುರು ವಿದೂಷಿ ಸುನೀತಾನವೀನಗೌಡರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಅಭಿನಂದನೆ ಸ್ವೀಕರಿಸಿದ ನಾಗಶ್ರೀಬೇಗಾರ್ ಕೃತಜ್ಞತೆಸಲ್ಲಿಸಿ ಮಾತನಾಡಿ ಬಾಲ್ಯ ನಟಿಯಾಗಿ ಕೃಷ್ಣರೂಪಕದಿಂದ ಜಲಪಾತ ನಾಯಕನಟಿಯಾಗಿ ರೂಪುಗೊಂಡ ಪ್ರಯಾಣದಲ್ಲಿ ಕಲ್ಕಟ್ಟೆ ಕುಟುಂಬದ ಪ್ರೋತ್ಸಾಹ ಅಪಾರ. ಇದೇ ಕಲಾಮಂದಿರದಲ್ಲಿ ನೃತ್ಯ, ನಾಟಕ, ಸಂಗೀತ ಕಾರ್ಯಕ್ರಮಗಳಲ್ಲಿ ಹತ್ತು ಹಲವುಬಾರಿ ಪಾಲ್ಗೊಂಡಿದ್ದ ತಮಗೆ ಇಂದು ಅದ್ಭುತ ಪ್ರಯೋಗ ಉದ್ಘಾಟಿಸುವ ಸೌಭಾಗ್ಯ ಸಂತಸ ತಂದಿದೆ ಎಂದರು.

27ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ವಾಸಿಸುತ್ತಿರುವ ತಮ್ಮ ಕುಟುಂಬದ ಕಷ್ಟಸುಖಗಳನ್ನು ಹಂಚಿಕೊಂಡ ಕಲ್ಕಟ್ಟೆಕುಟುಂಬ ಪ್ರತಿಭೆಯನ್ನು ಗುರುತಿಸುವ ಮಹತ್ವದ ಕೆಲಸ ಮಾಡಿಕೊಂಡು ಬಂದಿದೆ ಎಂದು ವೀಣಾಅರವಿಂದ್ ನುಡಿದರೆ, ತವರಿನ ಸನ್ಮಾನ ಅತಿಹೆಚ್ಚು ಸಂತಸ ತಂದಿದೆ ಎಂದವರು ರೇಖಾ ಪ್ರೇಮಕುಮಾರ್.

ಒಂದುಕುಟುಂಬ ಬೆಳೆಯುವುದರೊಂದಿಗೆ ಸುತ್ತಲಿನ ಕಲಾವಿದರನ್ನು ಪೋಷಿಸಿ ಬೆಳೆಸಿ ಪ್ರೋತ್ಸಾಹಿಸುವ ಕೆಲಸ ಕಲ್ಕಟ್ಟೆ ಕುಟುಂಬದಿಂದ ನಡೆದಿದೆ. ಕಲಾ ಉಪಾಸನೆಗೆ ಇದೊಂದು ಮಾದರಿ ಎಂದವರು ಸುಮನಾರಾಮಚಂದ್ರ. ಪಿಎಚ್‍ಡಿ ಪದವೀಧರೆಯಾಗಿ ರೂಪುಗೊಂಡಿದ್ದೆ ಚಿಕ್ಕಮಗಳೂರಿನಲ್ಲಿ ಎಂದ ಡಾ.ನಮನಾ, ಸಮಾಜದ ಪ್ರೀತಿ ಋಣತೀರಿಸುವ ಹೊಣೆಗಾರಿಕೆಯ ಅರಿವಿದೆ ಎಂದರು.

ಕಲ್ಕಟ್ಟೆ ಪುಸ್ತಕದಮನೆ ಅಧ್ಯಕ್ಷೆ ರೇಖಾನಾಗರಾಜರಾವ್ ವಂದಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ