October 5, 2024

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಾಳೆ(ಬುಧವಾರ) ಸಂಜೆ 6 ಗಂಟೆಗೆ ಸಲೀಂ ಅಲಿ ಪಕ್ಷಿಲೋಕದ ಬೆರಗು ನಾಟಕ ನಡೆಯಲಿದೆ.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಚಿಕ್ಕಮಗಳೂರಿನ ಜಿಲ್ಲಾ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಭಾರತದ ಪಕ್ಷಿ ಮನುಷ್ಯ ಖ್ಯಾತಿಯ ಪಕ್ಷಿ ತಜ್ಞ ಡಾ.ಸಲೀಂ ಅಲಿ ಅವರ ಜೀವನಾಧಾರಿತ ಸಲೀಂ ಅಲಿ ಪಕ್ಷಿಲೋಕದ ಬೆರಗು ನಾಟಕ ನಡೆಯಲಿದೆ.

ಮೈಸೂರಿನ ಅರಿವು ರಂಗ ತಂಡ ನಾಟಕವನ್ನು ಪ್ರಸ್ತುತ ಪಡಿಸುತ್ತಿದ್ದು ನಾಟಕದ ರಚನೆ ಡಾ.ಮನೋಹರ ಎಂ.ಸಿ, ನಿರ್ದೇಶನ ಬರ್ಟಿ ಒಲಿವೆರಾ, ಸಂಗೀತ ಸಾಯಿಶಿವ್, ರಂಗ ಮತ್ತು ಬೆಳಕಿನ ವಿನ್ಯಾಸ ಯತೀಶ್ ಎಸ್ ಕೊಳ್ಳೇಗಾಲ, ಬೆಳಕಿನ ನಿರ್ವಹಣೆ ವಿನೋದ್, ರಂಗ ಪರಿಕರ ಕಾಜು, ವಸ್ತ್ರ ವಿನ್ಯಾಸ ರಜನೀಶ್ ಜೆ, ಸಂಗೀತ ನಿರ್ವಹಣೆ ಗಿರಿಧರ್ ಎಂ.ಸಿ, ಪ್ರಸಾಧನ ರಂಗನಾಥ್ ಅವರದಾಗಿದೆ.

ನಾಟಕಕ್ಕೆ ಪ್ರವೇಶ ಉಚಿತವಾಗಿದ್ದು ಹೆಚ್ಚಿನ ಮಾಹಿತಿಗೆ 9663098873 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ