October 5, 2024

ಕೃಷಿ ಮತ್ತು ಮಹಿಳೆಗೆ ಅವಿನಾಭಾವ ಸಂಬಂಧವಿದೆ ಕೋಟಿವಿದ್ಯೆಗಳಲ್ಲಿ ಮೇಟಿವಿದ್ಯೆಯೆ ಮೇಲು. ದೇಶದ ಅಭಿವೃದ್ದಿಗೆ ಕೃಷಿ ಪ್ರಧಾನ ಪಾತ್ರವಹಿಸುತ್ತದೆ ಎಂದು ಕೃಷಿಇಲಾಖೆಯ ಸಹಾಯಕ ನಿರ್ದೇಶಕಿ ಆಶಾ ಅಭಿಪ್ರಾಯಿಸಿದರು.

ಚಿಕ್ಕಮಗಳೂರು ಅಕ್ಕಮಹಾದೇವಿ ಮಹಿಳಾ ಸಂಘದ ಶರಣೆ ಕಾಳವ್ವೆ ಗುಂಪಿನ ಭಾರತಹುಣ್ಣಿಮೆ ಕಾರ್ಯಕ್ರಮವನ್ನು ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರಕ್ಕೆ ನಾಂದಿ ಮಹಿಳೆ ಎಂದರೆ ತಪ್ಪಾಗದು. ಅಲೆದಾಡಿಕೊಂಡು ಜೀವನಸಾಗಿಸುತ್ತಿದ್ದ ಮಾನವ, ಒಂದೆಡೆ ನೆಲೆನಿಂತು ಕೃಷಿ ಆರಂಭಿಸಿದ ಪರಿ ಅಚ್ಚರಿಯದು. ಎಲ್ಲ ಶಾಸ್ತ್ರಗಳಿಗೂ ಕೃಷಿ ಮಾತೃ ಸ್ವರೂಪಿ. ಮಹಿಳೆ ತನ್ನ ಜ್ಞಾನದ ಎರಕವನ್ನು ಹೊಯ್ದಿದ್ದಾಳೆ. ಭಿತ್ತನೆ ಬೀಜದ ಆಯ್ಕೆಯಿಂದ ಹಿಡಿದು ಕೊಯ್ಲಿನವರೆಗೆ ಎಲ್ಲ ಹಂತದ ಕೃಷಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮಹಿಳೆಯರು ಸಂಪೂರ್ಣ ತೊಡಗಿಸಿಕೊಂಡಿರುತ್ತಾರೆ. ಆದರೆ ಈ ಬಗ್ಗೆ ಅವರಿಗೆ ಅರಿವು ಅಭಿಮಾನ ಇಲ್ಲ ಎಂದರು.

ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹೆಣ್ಣುಮಗಳಿಗೆ ತಮ್ಮದೇ ಜಮೀನಿನಲ್ಲಿ ಕೃಷಿ ಕಸುಬು ಮಾಡುತ್ತಿದ್ದೇನೆಂದು ಹೇಳುವುದೂ ಇಲ್ಲ. ಮಹಿಳೆಯರಿಗೆ ಎಲ್ಲ ವೃತ್ತಿಗಳಂತೆ ಕೃಷಿ ಒಂದು ವೃತ್ತಿ ಎನಿಸಿದ್ದೆ ಇಲ್ಲ. ದುಡಿಯುತ್ತಿದ್ದೇವೆ ಎಂಬ ಭಾವವೂ ಇಲ್ಲ. ಊಟ-ಉಸಿರಾಟದಂತೆ ಇದೊಂದು ಸಹಜಕ್ರಿಯೆ ಎನಿಸಿದೆ. ಮಧ್ಯಮವರ್ಗದ ಕೃಷಿ ಕುಟುಂಬಗಳಲ್ಲಿ ಮಹಿಳೆಗೆ ವಿರಾಮದ ಅವಶ್ಯಕತೆ ಅರಿವೇ ಇಲ್ಲ ಎಂದರು.

ಮಹಿಳೆಯರನ್ನು ಕೃಷಿ ಕೆಲಸಕ್ಕೆ ಪರಿಗಣಿಸುವ ಸಮಾಜ ಆದಾಯದ ಪಾಲುಗಾರಿಕೆಯಲ್ಲಿ ಕೈಬಿಡುತ್ತಿದೆ. ಗ್ರಾಮೀಣಪ್ರದೇಶದ ಪ್ರತಿ ಮನೆಯಲ್ಲೂ ಕೃಷಿಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಭಿನ್ನ. ಮೂಲ ಕಸುಬಲ್ಲೆ ತೊಡಗಿಸಿಕೊಂಡವರು ಕೆಲವರಾದರೆ ಮತ್ತೆ ಕೆಲವರು ಉಪ ಕಸುಬುಗಳನ್ನು ತಮ್ಮದಾಗಿಸಿಕೊಂಡು ಕುಟುಂಬದ ಆದಾಯ ಹೆಚ್ಚಿಸುತ್ತಾರೆ.

ಕೈತೋಟದಿಂದ ಹಿಡಿದು ಟೇರಸ್ ತೋಟದವರೆಗೆ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸುವಲ್ಲಿ ಮಹಿಳೆಯರದೇ ಆಸಕ್ತಿ ಅಧಿಕ. ಜೇನುಸಾಕಾಣಿಕೆ, ಅಣಬೆ, ಎರೆಹುಳು, ಸಾವಯವಗೊಬ್ಬರ ಮತ್ತಿತರ ಕೃಷಿಪೂರಕ ಚಟುವಟಿಕೆಗಳಲ್ಲೂ ಮಹಿಳೆಯರ ಜ್ಞಾನ, ಪರಿಶ್ರಮ ಸಹಜವಾಗಿಯೆ ಸಂದಾಯವಾಗಿರುತ್ತದೆ ಎಂದ ಆಶಾ, ಮೌಲ್ಯವರ್ಧನೆಯಲ್ಲೂ ಸಾಕಷ್ಟು ಪರಿಣಿತಿ ಹೊಂದಿದ್ದರೂ ಸಮುದಾಯ ಸರಿಯಾಗಿ ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿದರು.

ಸಜ್ಜನರಸಂಗವದು ಹೆಜ್ಜೇನು ಸವಿದಂತೆ ಎಂಬಂತೆ ಮಹಿಳೆಯರು ಸಂಘಟಿತರಾಗಿ ಈ ಮಹಿಳಾಸಮಾಜವನ್ನು ವ್ಯವಸ್ಥಿತವಾಗಿ ಮುನ್ನಡೆಸುತ್ತಿರುವುದು ಹರ್ಷದ ಸಂಗತಿ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಜ್ಞಾನವನ್ನು ಹಂಚಿಕೊಳ್ಳುವ ಸಂಘಟನೆ ಇದಾಗಿದೆ. ವ್ಯಕ್ತಿತ್ವ ವಿಕಾಸನದ ಗರಡಿ ಎಂದರೂ ತಪ್ಪಾಗಲಾರದು ಎಂದ ಆಶಾ, ಉತ್ತಮ ಗೆಳೆತನಕ್ಕೆ ಇದು ಬುನಾದಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಮಾತನಾಡಿ ಮಾಸಿಕ ಕಾರ್ಯಕ್ರಮಗಳಲ್ಲಿ ಎಲ್ಲ ಸದಸ್ಯರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಟೋಟಸ್ಪರ್ಧೆ, ಮನರಂಜನಾ ಕಾರ್ಯಕ್ರಮಗಳ ಜೊತೆಗೆ ಒಂದಷ್ಟು ಉತ್ತಮ ವಿಚಾರಗಳನ್ನು ಸಾಧಕರಿಂದ ಅರಿತುಕೊಳ್ಳಲು ಇರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದರು.

ಅಕ್ಕಮಹಾದೇವಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಅರ್ಪಿತಾನಿತಿನ್, ಕಾರ್ಯದರ್ಶಿ ರೇಖಾ ಉಮಾಶಂಕರ್, ಖಜಾಂಚಿ ಭಾರತಿಶಿವರುದ್ರಪ್ಪ, ಸಹಕಾರ್ಯದರ್ಶಿ ನಾಗಮಣಿಕುಮಾರ್, ನಿರ್ದೇಶಕರಾದ ಗೀತಾ, ಹೇಮಾ, ಹಿರಿಯಸದಸ್ಯರಾದ ಕಮಲಮ್ಮ ವೇದಿಕೆಯಲ್ಲಿದ್ದರು.

ತಂಡದ ಮುಖಂಡೆ ದಾಕ್ಷಾಯಣಿಸತೀಶ್ಚಂದ್ರ ಪ್ರಾಸ್ತಾವಿಸಿ ಶರಣೆ ಕಾಳವ್ವೆ ಗುಂಪಿನ ಸದಸ್ಯರು ಹೊರವಲಯದ ತೋಟಗಳಲ್ಲಿ ನೆಲೆಸಿದ್ದು, ಒಂದುಗೂಡಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಭಾರತಹುಣ್ಣಿಮೆ ಸಂದರ್ಭದಲ್ಲಿ ಕೃಷಿ ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಆಶಾ ಕೃಷಿಯ ಬಗ್ಗೆ ಇಂದು ಚಿಂತನೆ ಮಾಡಲಿದ್ದಾರೆಂದರು .

ಸದಸ್ಯರಾದ ವನಮಾಲಾ ಸ್ವಾಗತಿಸಿದರು. ಮಲ್ಲಿಕಾರಾಜೇಶ್ ನಿರೂಪಿಸಿ, ಪುಷ್ಪಾನಾಗರಾಜ ಪ್ರಾರ್ಥಿಸಿದರು. ಕನ್ಯಾಲೋಕೇಶ್ ಪರಿಚಯಿಸಿ, ರಮ್ಯ ವಚನಗಾಯನ ಹಾಡಿದರು. ಗಿರಿಜಮ್ಮ ಮತ್ತು ದೀನಾತಂಡ ನಾಡಗೀತೆ ಹಾಡಿದರು. ಇದೇ ಸಂದರ್ಭ ಹಿರಿಯಸದಸ್ಯೆ ಸವಿತಾಮಲ್ಲಿಕಾರ್ಜುನ ಅವರನ್ನು ಗೌರವಿಸಲಾಯಿತು.

ಆಟೋಟಸ್ಪರ್ಧಾ ವಿಜೇತರಿಗೆ ದಾಕ್ಷಾಯಣಿ ಬಹುಮಾನ ವಿತರಿಸಿದರು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಆಕರ್ಷಕವಾಗಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ