October 5, 2024

ಭಾರತೀಯ ಕಾಫಿ ಮಂಡಳಿ ಮತ್ತು ವಿವಿಧ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಕಾಫಿ ತೋಟದ ಕಾರ್ಮಿಕರ ಅವಗಡದ ಭದ್ರತೆಗಾಗಿ ಕಾರ್ಮಿಕ ವಿಮಾ ಯೋಜನೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ದಿನೇಶ್ ಎಂ.ಜೆ ಅಧ್ಯಕ್ಷರು, ಭಾರತೀಯ ಕಾಫಿ ಮಂಡಳಿ ಇವರು ವಹಿಸಿದ್ದರು.

ಕು.ಶೋಭಾ ಕರಂದ್ಲಾಜೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವರು, ಭಾರತ ಸರ್ಕಾರ ಇವರು ಕಾರ್ಮಿಕರ ವಿಮಾ ಯೋಜನೆಗೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ, ಕೇಂದ್ರ ಸರಕಾರ ಕೊಡುವ ಅನೇಕ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು ಹಾಗೂ ಕಾಫಿ ಮಂಡಳಿ ಇಂದ ಕೊಡುವ ವಿದ್ಯಾರ್ಥಿ ವೇತನ ಚೆಕ್ ವಿತರಿಸಿದರು.

ಮುಖ್ಯ ಅತಿಥಿಗಳಾದ  ಎಂ.ಭಾಸ್ಕರ ಚಕ್ರವರ್ತಿ ಮಹಾ ಪ್ರಬಂಧಕರು ಮತ್ತು ಸಂಯೋಜಕರು, ಕೆನರಾ ಬ್ಯಾಂಕ್ ಕರ್ನಾಟಕ,   ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ವಿವರಿಸಿ ಕಾರ್ಮಿಕ ವರ್ಗದ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.

ಸುಧಾಕರ ಕೊಥಾರಿ ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್,  ಮಂಗಳೂರು ಇವರು ಮಾತಾಡಿ ಕೆನರಾ ಬ್ಯಾಂಕ್ ಈ ಎರಡು ಯೋಜನೆಗಳನ್ನು ಜನರಿಗೆ ಮತ್ತು ಕಾರ್ಮಿಕ ವರ್ಗದವರಿಗೆ ತಲುಪಿಸಲು ಶ್ರಮ ಪಡುತಿದ್ದು ಈಗ ಕಾಫಿ ಮಂಡಳಿ ಸಹಯೋಗದೊಂದಿಗೆ ಎರಡು ಯೋಜನೆಗಳನ್ನು ಕಾಫಿ ತೋಟದ ಕಾರ್ಮಿಕರಿಗೆ ತಲುಪಿಸಲು ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ಡಾ.ಮೋಹನ್‌ಕುಮಾರ್ ಅಧ್ಯಕ್ಷರು, ಕರ್ನಾಟಕ ಬೆಳೆಗಾರರ ಒಕ್ಕೂಟ,  ಶ್ರೀಯುತ ಕೆ.ಜಿ.ರಾಜೀವ್ ಅಧ್ಯಕ್ಷರು, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಎ.ಎಸ್‌.ಪರಮೇಶ್ ಅಧ್ಯಕ್ಷರು ಹಾಸನ ಜಿಲ್ಲಾ ಬೆಳೆಗಾರರ ಸಂಘ, ಹಾಗೂ ಕಾಫಿ ಮಂಡಳಿ ಸದಸ್ಯರು ಸೇರಿದಂತೆ ಎಲ್ಲ ತಾಲೂಕು ಮತ್ತು ಹೋಬಳಿ ಮಟ್ಟದ ಬೆಳೆಗಾರ ಸಂಘದ ಅಧ್ಯಕ್ಷರುಗಳು  ಉಪಸ್ಥಿತರಿದ್ದರು.  ಬಿ ಪಾಶ್ವನಾಥ, ಉಪ ಪ್ರಬಂಧಕರು, ಕೆನರಾ ಬ್ಯಾಂಕ್ ಇವರು ವಂದನಾರ್ಪಣೆ ಮಾಡಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ