October 5, 2024

ರಸ್ತೆಗೆ ಅಡ್ಡಬಂದ ಕಾಡುಹಂದಿಗಳ ಗುಂಪಿಗೆ ಆಟೋ ಡಿಕ್ಕಿ ಹೊಡೆದು ಪಲ್ಟಿಯಾದ ಕಾರಣದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಸಮೀಪ ಈ ಘಟನೆ ನಡೆದಿದೆ. ಲಿಂಗದಹಳ್ಳಿ ತರೀಕೆರೆ ರಸ್ತೆಯ ನಡುವೆ ಈ ದುರ್ಘಟನೆ ಸಂಭವಿಸಿದೆ. ಆಟೋ ಚಲಾಯಿಸುತ್ತಿದ್ದ ಬಳ್ಳಾವರ ಗ್ರಾಮದ ನಾಗೇಶ್ ಎಂಬುವವರು ಮೃತಪಟ್ಟಿದ್ದಾರೆ.

ಬುಧವಾರ ಮುಂಜಾನೆ ಸುಮಾರು 6 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ತರೀಕೆರೆಯಿಂದ ತರಕಾರಿ ತರಲೆಂದು ಆಟೋದಲ್ಲಿ ಸಾಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತರೀಕೆರೆಯಿಂದ ತರಕಾರಿ ತುಂಬಿಕೊಂಡು ಲಿಂಗದಹಳ್ಳಿ ಕಡೆಗೆ ಬರುತ್ತಿದ್ದಾಗ ಮುಂಜಾನೆ 6 ಗಂಟೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ದಟ್ಟ ಮಂಜು ಕವಿದಿದ್ದ ಸಂದರ್ಭದಲ್ಲಿ ಏಕಾಏಕಿ ರಸ್ತೆಗೆ ಅಡ್ಡಬಂದ ಕಾಡುಹಂದಿಗಳ ಗುಂಪೊಂದಕ್ಕೆ ಆಟೋ ಡಿಕ್ಕಿ ಹೊಡೆದಿದೆ. ಹಂದಿಯೊಂದಕ್ಕೆ ಡಿಕ್ಕಿ ಹೊಡದ ಪರಿಣಾಮ ಆಟೋ ಪಲ್ಟಿಯಾಗಿ ಬಿದ್ದಿದೆ. ಆಟೋ ಚಲಾಯಿಸುತ್ತಿದ್ದ ನಾಗೇಶ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ಡಿಕ್ಕಿ ಹೊಡೆದ ರಭಸಕ್ಕೆ ಕಾಡುಹಂದಿಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ.

ಸಾಂದರ್ಭಿಕ ಚಿತ್ರ

ಈ ಬಗ್ಗೆ ಲಿಂದದಹಳ್ಳಿ ಠಾಣೆಗೆ ಮೃತ ನಾಗೇಶ್ ಅವರ ಮಗ ವಿನಂತ್ ಕುಮಾರ್ ನೀಡಿರುವ ದೂರು :ದಿನಾಂಕ;21/02/2023 ರಂದು  ಬೆಳಿಗ್ಗೆ ನನ್ನ ತಂದೆ ನಾಗೇಶ್  ರವರು ತರಕಾರಿ ತರಲು ತರೀಕೆರೆಗೆ ಹೋಗಿ ವಾಪಾಸ್ಸು ಬಳ್ಳಾವರಕ್ಕೆ ಬರುತ್ತಿರುವಾಗ ಲಿಂಗದಹಳ್ಳಿ  ಬಳಿ ಹೆಚ್.ಪಿ. ಪೆಟ್ರೋಲ್  ಬಂಕ್ ಹತ್ತಿರ ಹಾದು ಹೋಗಿರುವ ತರೀಕೆರೆ-ಚಿಕ್ಕಮಗಳೂರು ರಸ್ತೆಯಲ್ಲಿ ಕೆಎ-18-ಎ-8501 ಅಟೋವನ್ನು ಚಾಲನೆ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಅಮೃತ ಮಹಲ್ ಕಾವಲಿನ ಕಡೆಯಿಂದ ರಸ್ತೆಗೆ ಹಂದಿಗಳ ಗುಂಪು ಬಂದು ಅಟೋಗೆ ಗುದ್ದಿದ ಪರಿಣಾಮ ಅಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು,  ಚಾಲನೆ ಮಾಡುತ್ತಿದ್ದ ನನ್ನ ತಂದೆ ಮೃತಪಟ್ಟಿದ್ದು ಒಂದು ಹಂದಿಯು ಸಹ ಮೃತಪಟ್ಟಿದೆ ಮುಂದಿನ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.

ಮೃತ ನಾಗೇಶ್ ಅವರು ಸಂಬಂಧಿಕರೊಬ್ಬರ ಮಧುವೆ ಆರತಕ್ಷತೆಗೆ ತರಕಾರಿ ತರಲೆಂದು ತಮ್ಮ ಆಟೋದಲ್ಲಿ ತರೀಕೆರೆಗೆ ತೆರಳಿದ್ದರು. ತರಕಾರಿ ತುಂಬಿಕೊಂಡು ವಾಪಾಸ್ಸು ಬರುವಾಗ ದುರ್ಘಟನೆ ನಡೆದಿದೆ. ಕಾಡುಹಂದಿಯೊಂದು ಆಟೋ ಚಕ್ರಕ್ಕೆ ಸಿಲುಕಿದ್ದು, ನಿಯಂತ್ರಣ ಕಳೆದುಕೊಂಡ ಆಟೋ ಪಲ್ಟಿಯಾಗಿದ್ದು, ರಸ್ತೆಗೆ ಬಿದ್ದ ನಾಗೇಶ್ ಅವರ ಮೇಲೆ ಆಟೋ ತರಕಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃಪಟ್ಟಿದ್ದಾರೆ. ಈ ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಮೃತ ನಾಗೇಶ್ ಅವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ