October 5, 2024

ಅರಿವಿನ ಮೂಲಕ ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಏಕಲವ್ಯ ವಸತಿ ಕಾಲೇಜಿನ ಪ್ರಾಂಶುಪಾಲ ಬಿ.ಟಿ.ವೆಂಕಟೇಶ್ ಹೇಳಿದರು.

ಕೊಟ್ಟಿಗೆಹಾರದ ಏಕಲವ್ಯ ಪದವಿ ಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಸ್ತು, ಸಮಯ ಪ್ರಜ್ಞೆ ಜೀವನದಲ್ಲಿ ಯಶಸ್ಸುಗೊಳಿಸಲು ಆತ್ಮ ವಿಶ್ವಾಸ ಬಹಳ ಪ್ರಮುಖವಾಗಿದೆ. ಮಕ್ಕಳು ಕಲಿತ ಶಾಲೆಯನ್ನು ಮರೆಯಬಾರದು. ಇತರರ ಸಂಕಷ್ಟಗಳಿಗೆ ಸ್ಪಂಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ವಸತಿ ನಿಲಯದ ಪಾಲಕರಾದ ಕೆ.ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳು ತಮಗೆ ಸಿಗುವ ವಿಪುಲ ಅವಕಾಶವನ್ನು ಶೃದ್ದೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರುವಂತಾಗಲಿ ಎಂದರು. ಶಾಲಾ ವಿದ್ಯಾರ್ಥಿನಿಯರಾದ ಮೋಹಿನಿ, ಶೃದ್ಧಾ,ಸವಿತ ಇತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಬೀಳ್ಕೊಡುಗೆ ಸಮಾರಂಭದಲ್ಲಿ ಹುಡುಗರು ಶಲ್ಯ ಹಾಗೂ ಪಂಚೆ,ಹುಡುಗಿಯರು ಸೀರೆ ಉಟ್ಟು ಪಾರಂಪರಿಕ ಉಡುಗೆಯಲ್ಲಿ ಮಿಂಚಿದರು.

ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮ ಪ್ರಸ್ತುತಿ ಪಡಿಸಿದರು. ಈ ಸಮಾರಂಭದಲ್ಲಿ ಶಿಕ್ಷಕರಾದ ವೀಣಾ, ಶಶಿಕುಮಾರ್, ಸುಶ್ಮೀತಾ, ಕಲ್ಲೇಶ್, ಶರತ್, ದೀಪ, ರವಿ, ಮಾನಸ, ಸುಶ್ಮಿತ, ಜೇಸಿನ್, ಚೇತನ್, ಲತ, ಸಾಧನಾ, ನಾಹೀರಾಭೇಗಂ, ಭೀಮ್ ರಾಯ್, ರಮ್ಯ, ಸುಮಿತ್ರ, ಮಂಜುಳ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ