October 5, 2024

ಮೂಡಿಗೆರೆ ತಾಲ್ಲೂಕಿನ ಬಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಮಕ್ಕಳಿಗೆ ಶನಿವಾರ ಮಕ್ಕಳು ವಿಭಿನ್ನ ರೀತಿಯ ತಿನಿಸು, ಫಲಹಾರ , ತಂಫುಪಾನೀಯ ಮತ್ತಿತರ ಆಹಾರ ತಿನಿಸುಗಳ ಜಾತ್ರೆ  ಭರ್ಜರಿಯಾಗಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಮಿತಿಯ ಅಧ್ಯಕ್ಷ ಮಹಮ್ಮದ್ ಇದ್ರೀಸ್  ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿ ‘ಶಾಲೆಯ ಮಕ್ಕಳು ಮನೋರಂಜನೆ  ಹಾಗೂ ವ್ಯವಹಾರದ ಜ್ಞಾನದ ದೃಷ್ಟಿಯಿಂದ ಮಕ್ಕಳಿಗೆ ಫನ್ ಫೇರ್ ಕಾರ್ಯಕ್ರಮ ಆಯೋಜಿಸಿದ್ದೇವೆ. ಮಕ್ಕಳು ಹಾಗೂ ಪೋಷಕರು  ತಿಂಡಿ,ತಿನಿಸು ಹಾಗೂ ಫಲಹಾರಗಳ ಮಾರುವುದರಲ್ಲಿ ಉತ್ಸಾಹಕತೆ ತೋರುತ್ತಿದ್ದಾರೆ’ ಇದೊಂದು ಅನನ್ಯ ಅನುಭವ ಮಕ್ಕಳಲ್ಲಿ ಮೂಡಿದೆ’ ಎಂದರು.

ತಿನಿಸುಗಳ ಜಾತ್ರೆಯಲ್ಲಿ  ಮಕ್ಕಳ ಪೋಷಕರು ಸೇರಿ ಸಂಭ್ರಮದಿಂದ ಗ್ರಾಹಕರನ್ನು ಸೆಳೆದು ತಮ್ಮ ವಿವಿಧ  ತಿನಿಸುಗಳನ್ನು ಮಾರಾಟ ಮಾಡಿದರು.

ಈ ಸಂದರ್ಭದಲ್ಲಿ ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಅತಿಕಾಭಾನು,ಸದಸ್ಯ ಇರ್ಫಾನ್,ಸಿರಾಜ್ಜುದ್ದೀನ್,ಮುಖ್ಯ ಶಿಕ್ಷಕಿ ರೇಷ್ಮಾ,ಶಿಕ್ಷಕರಾದ ಹಾಜಿರಾಕಾತುನ್, ಸೆಲಿನಾ,ಫಾತೀಮಾ,ಹೀನಾ, ಮುತಾಹೀರಾ,ರೂಹಿ ಮತ್ತಿತರರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ