October 5, 2024

ಮಣ್ಣು ಪರಿಕ್ಷೆಯಿಂದ ಮಣ್ಣಿನ ರಸಸಾರ (ಪಿ.ಹೆಚ್.) ಮೌಲ್ಯ ತಿಳಿಯುತ್ತದೆ ಮತ್ತು ಮಣ್ಣಿನಲ್ಲಿರುವ ವಿವಿಧ ಪೋಷಕಾಂಶಗಳ ಪ್ರಮಾಣ ತಿಳಿಯಲು ಸಹಾಯಕವಾಗುತ್ತದೆ. ಆಗ ಮಣ್ಣಿನ ಗುಣಲಕ್ಷಣಗಳಿಗನುಗುಣವಾಗಿ ಸುಣ್ಣ ಮತ್ತು ರಾಸಾಯನಿಕ ಗೊಬ್ಬರುಗಳು, ಕೊಟ್ಟಿಗೆ ಗೊಬ್ಬರ, ಲಘುಪೋಶಕಾಂಶಗಳನ್ನು ನೀಡಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿ ಹರೀಶ್ ಅವರು ತಿಳಿಸಿದ್ದಾರೆ.

ಅವರು ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮೂಡಿಗೆರೆ ಕಾಫಿ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಮಣ್ಣು ಪರೀಕ್ಷೆ ಅಭಿಯಾನ ಮತ್ತು ಕಾಫಿ ಕೃಷಿ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಬಹುತೇಕ ರೈತರು ಮಣ್ಣು ಪರೀಕ್ಷೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಕಾಫಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಮಣ್ಣು ಪರೀಕ್ಷೆ ಮಾಡಿಕೊಡಲಾಗುತ್ತದೆ. ಕನಿಷ್ಠ ಎರಡು ವರ್ಷಗಳಿಗೊಮ್ಮೆ ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿದರೆ ಅದರಿಂದ ಬಹಳಷ್ಟು ಅನುಕೂಲಗಳನ್ನು ಪಡೆಯಬಹುದು.

ಪ್ರಮುಖವಾಗಿ ಮಣ್ಣಿನ ಪಿ.ಹೆಚ್. ಮೌಲ್ಯ ನಿಗದಿತ ಪ್ರಮಾಣದಲ್ಲಿ ಇಲ್ಲದೇ ಇದ್ದಾಗ ನಾವು ಮಣ್ಣಿಗೆ ಹಾಕುವ ರಸಗೊಬ್ಬರವನ್ನು ಗಿಡಗಳು ಬಳಸಿಕೊಳ್ಳುವುದಿಲ್ಲ. ಇದರಿಂದ ರಸಗೊಬ್ಬರ ವ್ಯರ್ಥವಾಗುತ್ತದೆ. ಪಿ.ಹೆಚ್. ಮೌಲ್ಯಕ್ಕೆ ಅನುಗುಣವಾಗಿ ಮಣ್ಣಿಗೆ ಸುಣ್ಣವನ್ನು ಹಾಕಿದಾಗ ಮಣ್ಣಿನ ರಸಸಾರವನ್ನು ಸಮತೋಲನದಲ್ಲಿ ಇಡಬಹುದು, ಹಾಗೆಯೇ ಮಣ್ಣು ಪರೀಕ್ಷೆಗೆ ಅನುಗುಣವಾಗಿ ಗೊಬ್ಬರ ಮತ್ತು ಪೋಷಕಾಂಶಗಳನ್ನು ನೀಡಿದರೆ ನಾವು ಹಾಕಿದ ಗೊಬ್ಬರವನ್ನು ಗಿಡಗಳು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಬೆಳವಣಿಗೆ ಹೊಂದಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದರು.

ಮೂಡಿಗೆರೆ ಕಾಫಿ ಮಂಡಳಿ ಅಧಿಕಾರಿ ವಿಶ್ವನಾಥ್ ರವರು ಮಾತನಾಡಿ ಕಾಫಿ ಮಂಡಳಿಯಿಂದ ರೈತರಿಗೆ ಸಾಕಷ್ಟು ಸಹಾಯಧನ ಯೋಜನೆಗಳು ಇದ್ದು, ಅವುಗಳ ಬಗ್ಗೆ ಸಾಕಷ್ಟು ಪ್ರಚಾರವನ್ನು ಕೈಗೊಂಡಿರುತ್ತೇವೆ. ರೈತರು ಕಾಫಿ ಮಂಡಳಿ ಕಛೇರಿಗೆ ಭೇಟಿ ನೀಡಿ ಇಲಾಖೆಯಿಂದ ಇರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಾಫಿ ಮಂಡಳಿಯಿಂದ ತಾಲ್ಲೂಕಿನ ಅನೇಕ ಕಡೆ ಮಣ್ಣುಪರೀಕ್ಷೆ ಅಭಿಯಾನ ಮಾಡಲಾಗುತ್ತಿದೆ. ರೈತರು ತಮ್ಮ ಜಮೀನಿನ ಮಣ್ಣನ್ನು ನಿಗದಿತ ವಿಧಾನದಲ್ಲಿ ತೆಗೆದು ತಂದು ಮಣ್ಣು ಪರೀಕ್ಷೆ ಮಾಡಿಸಿಕೊಂಡು, ಶಿಪಾರಸ್ಸು ಮಾಡಿದ ಪ್ರಮಾಣದಲ್ಲಿ ಸುಣ್ಣ, ಗೊಬ್ಬರ, ಪೋಷಕಾಂಶಗಳನ್ನು ನೀಡುವ ಮೂಲಕ ರೈತರು ಹೆಚ್ಚಿನ ಲಾಭ ಗಳಿಸಬಹುದು ಎಂದರು.

ಈ ಸಂದರ್ಭದಲ್ಲಿ ಊರುಬಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜು, ಸದಸ್ಯರಾದ ಕೆ.ಪಿ.. ಭಾರತಿ, ಪಿ.ಡಿ.ಓ. ಇಂತೇಶ್ ಜೆ.ಎಂ, ಕಾಫಿ ಮಂಡಳಿ ಅಧಿಕಾರಿಗಳು, ಸಿಬ್ಬಂದಿಗಳು, ಊರುಬಗೆ ಸುತ್ತಮುತ್ತಲ ನೂರಾರು ರೈತರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ