October 5, 2024

ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಹೋಂ ಸ್ಟೇ ಒಂದಕ್ಕೆ 37.5 ಲಕ್ಷ ರೂ ದಂಡ ವಿಧಿಸಲಾಗಿದ್ದು, ಮಾತ್ರವಲ್ಲದೇ ಮೃತರ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ 2 ಲಕ್ಷ ರೂ.ಗಳ ಹೆಚ್ಚುವರಿ ದಂಡ ಕೂಡ ಹೇರಲಾಗಿದೆ.

ಅಕ್ಟೋಬರ್ 2021 ರಲ್ಲಿ, ಮುಂಬೈನಿಂದ ಮೂವರು ಯುವತಿಯರು ದಸರಾ ರಜೆಗಾಗಿ ಕೊಡಗಿಗೆ ಭೇಟಿ ನೀಡಿದ್ದರು. ಎಂಬಿಎ ಪದವೀಧರರಾದ ವಿಘ್ನೇಶ್ವರಿ ಈಶ್ವರನ್ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಡಿಕೇರಿಯಲ್ಲಿ ಕೂರ್ಗ್ ವ್ಯಾಲಿ ಹೋಂಸ್ಟೇ ಬುಕ್ ಮಾಡಿದ್ದಾರೆ. 2021 ರ ಅಕ್ಟೋಬರ್ 23 ರಿಂದ ಮೂರು ದಿನಗಳವರೆಗೆ ರೂಂ ಬುಕ್ ಆಗಿತ್ತು. ಅಕ್ಟೋಬರ್ 24, 2021 ರಂದು, ವಿಘ್ನೇಶ್ವರಿ ಹೋಂಸ್ಟೇನ ಸ್ನಾನಗೃಹದೊಳಗೆ ಕುಸಿದು ಸಾವನ್ನಪ್ಪಿದ್ದರು.

ಈ ವೇಳೆ ಮೃತದೇಹ ಪರೀಕ್ಷೆ ನಡೆಸಿದ್ದ ಮಡಿಕೇರಿಯ ಆಸ್ಪತ್ರೆಯ ವೈಧ್ಯಾಧಿಕಾರಿಗಳು ಆಕೆಯನ್ನು ‘ಸತ್ತಿದ್ದಾಳೆ’ ಎಂದು ಘೋಷಿಸಿದ್ದರು. ಹೋಂಸ್ಟೇ ಬಾತ್ ರೂಂ ಒಳಗೆ ಅಳವಡಿಸಿದ್ದ ಗ್ಯಾಸ್ ಗೀಸರ್ ಸೋರಿಕೆಯಿಂದ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಳು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಮೃತ ಬಾಲಕಿಯ ತಂದೆ ಈಶ್ವರನ್ ಎಂಬುವರು ಪ್ರಕರಣ ದಾಖಲಿಸಿದ್ದು, ಹೋಂಸ್ಟೇನಲ್ಲಿ ಸ್ನಾನಗೃಹದೊಳಗೆ ಸುರಕ್ಷತಾ ಕ್ರಮಗಳಿಲ್ಲದ ಕಾರಣ ತನ್ನ ಮಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.

ಗ್ಯಾಸ್ ಗೀಸರ್ ಅಳವಡಿಸಲಾಗಿದ್ದ ಹೋಂಸ್ಟೇ ಬಾತ್ ರೂಂನಲ್ಲಿ ವೆಂಟಿಲೇಷನ್ ಇಲ್ಲದೇ ಇರುವುದು ಘಟನೆಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಇದಲ್ಲದೆ, ವಿಘ್ನೇಶ್ವರಿ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ.

ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದರೆ, ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲೂ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಹೋಂಸ್ಟೇ ಮಾಲೀಕ ಶೇಖ್ ಮೊಹಮ್ಮದ್ ಮತ್ತು ಮ್ಯಾನೇಜರ್ ಮುಕ್ತಾರ್ ಮೊಹಮ್ಮದ್ ಅವರಿಗೆ 37.5 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರವಾಗಿ ಪಾವತಿಸಬೇಕು. ಇಬ್ಬರು ಆರೋಪಿಗಳಿಗೆ ಮಾನಸಿಕ ಹಿಂಸೆ ನೀಡಿದ ಕಾರಣ ಮೇರೆಗೆ ಕುಟುಂಬಕ್ಕೆ ಶೇ.6ರ ಬಡ್ಡಿ ಸಹಿತ 2 ಲಕ್ಷ ರೂ ಹೆಚ್ಚುವರಿ ಪರಿಹಾರ ನೀಡುವಂತೆ ಆಯೋಗ ಆದೇಶಿಸಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ