October 5, 2024

ಪೋಷಕರು ಮಕ್ಕಳನ್ನು ಗುಣಾತ್ಮಕ ಮೌಲ್ಯಗಳಿಂದ ಬೆಳೆಸಬೇಕು ಎಂದು ವಾಗ್ಮಿ, ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಮೂಡಿಗೆರೆ ತಾಲ್ಲೂಕು ಬಣಕಲ್ ಪ್ರೌಢಶಾಲೆಯ ಮೈದಾನದಲ್ಲಿ ರಿವರ್ ವ್ಯೂವ್ ಶಾಲೆಯ  ಸಾಂಸ್ಕೃತಿಕ ಹಬ್ಬದ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದರು.

ಮಕ್ಕಳು ಮೊಬೈಲ್ , ಜಾಲತಾಣಗಳಿಂದ ವಾಸ್ತವ ಆರಿಯದೇ ಅಸೂಕ್ಷ್ಮತೆಯತ್ತ ಸಾಗುತ್ತಿದ್ದಾರೆ. ಪೋಷಕರು ಮಕ್ಕಳನ್ನು ಉತ್ತಮ ದಾರಿಯಲ್ಲಿ ಸುಸಂಸ್ಕೃತರಾಗಿ ನಡೆಸಿ  ಪ್ರೇರಣೆಯಾಗಬೇಕು. ನಾವು ದೇಶದಲ್ಲಿ ನಿರ್ಭೀತರಾಗಿ ಸ್ವತಂತ್ರರಾಗಿ ಬದುಕುತ್ತಿದ್ದೇವೆ ಅಂದರೆ ಅದಕ್ಕೆ ಕಾರಣರಾಗಿರುವುದು ಮಹಾತ್ಮಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಸಾಧ್ಯವಾಗಿದೆ. ಗಾಂಧೀಜಿಯವರು ಸ್ವಾತಂತ್ರ್ಯ ತಂದು ಕೊಡದೇ ಹೋಗಿದ್ದರೆ, ಅಂಬೇಡ್ಕರ್ ಸಂವಿಧಾನ ರಚಿಸದೇ ಹೋಗಿದ್ದರೆ ನಾವು ಸ್ವತಂತ್ರರಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಪೋಷಕರು ಮನೆಗಳಲ್ಲಿ ಮಕ್ಕಳಿಗೆ ಪೋಷಕರು ಜಾತಿ, ಧರ್ಮದ ಅಹಂಕಾರಗಳ ಬೀಜ ಬಿತ್ತಿದರೆ ಭವಿಷ್ಯದಲ್ಲಿ ಮಕ್ಕಳು ಭಯೋತ್ಪಾದಕರು, ಕೋಮುವಾದಿಗಳನ್ನಾಗಿ ನಿರ್ಮಾಣ ಮಾಡುವುದರಲ್ಲಿ ಸಂದೇಹವಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.ಮಕ್ಕಳು ಮನುಷ್ಯರಾಗಬೇಕಾದರೆ ಮಾನವೀಯ ಮೌಲ್ಯಗಳನ್ನು, ಮಹಾವ್ಯಕ್ತಿಗಳ ಆದರ್ಶವನ್ನು ಅವರ ಮನಸ್ಸಲ್ಲಿ ತುಂಬಬೇಕು.ಪೋಷಕರು ಮಕ್ಕಳು ದೇಶದ ಅತ್ಯುತ್ತಮ ಪ್ರಜೆಯಾಗಿ ಕುಟುಂಬಕ್ಕೆ ಕೀರ್ತಿ ತರಲೆಂದು ಅವರನ್ನು ಪೋಷಿಸುತ್ತಾರೆ.ಮಕ್ಕಳು ಹಾಳಾಗುವುದನ್ನು ಯಾರೂ ಬಯಸುವುದಿಲ್ಲ.ದೇಶದ ಸಂವಿಧಾನವು ಜಾತಿ,ಮತ ಭೇದ ಮಾಡದೇ ಪ್ರತಿಯೊಂದು ವ್ಯಕ್ತಿಯೂ ಉನ್ನತ ಸ್ಥಾನವನ್ನು ಏರಲು ಸಾಧ್ಯ.ಸಮಾಜದಲ್ಲಿ ಉತ್ತಮ ಮಾನವ ಧರ್ಮದಲ್ಲಿ ನಡೆಯಬೇಕು.ಕತ್ತಲಿನ ಸಾಗದೇ ಬೆಳಕಿನೆಡೆಗೆ ಸಾಗುವ ಮನೋಧರ್ಮ ನಮ್ಮದಾಗಬೇಕು.ಸಮಾಜದಲ್ಲಿ ನಾವು ಮಾನವೀಯತೆಯಿಂದ ಯಾವುದೇ ಧರ್ಮ, ಜಾತಿಯ ಮದದಲ್ಲಿ ನಡೆಯದೇ ಮಾನವರಂತೆ ನಡೆಯಬೇಕು’ ಎಂದರು.

ಶಾಲೆಯ ಹಿತಚಿಂತಕ ಬಿ.ಕೆ.ಪ್ರಥ್ವಿ ಮಾತನಾಡಿ’ ಶಾಲೆಯ ಸ್ಥಾಪಕ ಎ.ಸಿ.ಮಹಮ್ಮದ್ ವ್ಯಾಪಾರ ವಾಣಿಜ್ಯ ಕ್ಷೇತ್ರಕ್ಕೆ ಇಳಿದು ಲಾಭ ಮಾಡದೇ ಶಿಕ್ಷಣ ಕ್ಷೇತ್ರವನ್ನು ಆರಿಸಿ ಸಂಸ್ಥೆ ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿ ಮಾದರಿಯಾಗಿದ್ದಾರೆ’ಎಂದರು.

ಬಣಕಲ್ ಗ್ರಾ.ಪಂ.ಪಿಡಿಒ ಕೃಷ್ಣಪ್ಪ ಮಾತನಾಡಿ ‘ ಬಣಕಲ್ ನಲ್ಲಿ ಶಾಲೆಗಳು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪೈಪೋಟಿಯಲ್ಲಿ ಸಾಗುತ್ತಿವೆ ಎನ್ನುವುದು ಗ್ರಾಮ ಪಂಚಾಯಿತಿಯ ಹೆಮ್ಮೆಗೆ ಕಾರಣವಾಗಿದೆ’ಎಂದರು.

ಸಮಾರಂಭದಲ್ಲಿ ಸ್ಥಳೀಯ ಮಾಜಿ ಯೋಧ ಹಿಲಾರಿ ಗಾಮ, ಹಳೇ ವಿದ್ಯಾರ್ಥಿ ಗಣಪತಿ, ಕ್ರೀಡೆಯಲ್ಲಿ ಅತ್ಯುತ್ತಮ ಓಟಗಾರ್ತಿ ಸಿ.ಕೆ.ದೀಪ್ತಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹರೀಶ್, ಯ್ಯೂಟೂಬರ್ ಬ್ಲಾಗರ್ ಮೂಡಿಗೆರೆಯ ವಿವೇಕ್ ವಿಶ್ವಕರ್ಮ ಅವರನ್ನು ಗಣ್ಯರು ಸನ್ಮಾನಿಸಿದರು. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮೊಹಮ್ಮದ್ ಇಮ್ರಾನ್, ಅಹಮ್ಮದ್ ಬಾವಾ, ಬಿ.ಸಿ.ಪ್ರವೀಣ್, ಪಿ.ವಾಸುದೇವ್, ದಾನಿ ದಿನೇಶ್ ಶೆಟ್ಟಿ, ಅಸೀಪ್, ಶಿಕ್ಷಕ ಮನಮೋಹನ್,ರಶೀದ್,ಅರುಣ್ ಪೂಜಾರಿ, ಮತ್ತಿತರರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ