October 5, 2024

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದಲ್ಲಿ ಫೆಬ್ರವರಿ 6 ರಂದು ಆಕಾಶ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ.

ಫೆಬ್ರವರಿ 6 ರ ಮಂಗಳವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಮಂಡ್ಯ ಜಿಲ್ಲಾ ವಿಜ್ಞಾನ ವೇದಿಕೆಯ ಲೋಕೇಶ ಎಸ್ ಮತ್ತು ನಂಜರಾಜು ಸಿ.ಎಲ್ ಅವರು ಸುಮಾರು 50 ಆಕಾಶಕಾಯಗಳ ಕುರಿತು ವರ್ಣಮಯ ಚಿತ್ರಪಟಗಳೊಂದಿಗೆ ವಿವರಣೆ ನೀಡಲಿದ್ದಾರೆ.

ಮೇಷ, ವೃಷಭ, ಮಿಥುನ, ಸಿಂಹ, ಮಹಾವ್ಯಾಧ, ವಿಜಯಸಾರಥಿ ನಕ್ಷತ್ರ ಪುಂಜಗಳನ್ನು, ಅರಿದ್ರ, ರಿಗಲ್, ಲುಬ್ದಕ ಅಥವಾ ಸಿರಿಯಸ್, ಬ್ರಹ್ಮಹೃದಯ ಅಥವಾ ಕಪೆಲ್ಲಾ, ರೋಹಿಣಿ ನಕ್ಷತ್ರಗಳು, ಏಡಿ ನಿಹಾರಿಕೆ ಮತ್ತು ಕೃತ್ತಿಕ ನಕ್ಷತ್ರ ಗುಚ್ಚಗಳನ್ನು ಬರಿಗಣ್ಣಿನಿಂದ ಗುರುತಿಸುವಿಕೆ ಮತ್ತು ದೂರದರ್ಶಕದ ಮೂಲಕ ಗುರು ಅಥವಾ ಜೂಪಿಟರ್ ಮತ್ತು ಭೂಮಿಯ ಉಪಗ್ರಹ ಚಂದ್ರನ ವೀಕ್ಷಣೆಯ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.

ಪ್ರವೇಶ ಉಚಿತವಾಗಿದ್ದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲು 08263200012, 9663098873 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ