October 5, 2024

ಚಿಕ್ಕಮಗಳೂರು ನಗರದ ವ್ಯಕ್ತಿಯೊಬ್ಬರಿಗೆ ಹರ್ಬಲ್ ಉತ್ಪನ್ನ ರಫ್ತು ಆಮೀಷ ಒಡ್ಡಿ 10.35 ಲಕ್ಷ ಹಣ ವಂಚಿಸಿರುವ ಘಟನೆ ನಡೆದಿದೆ. ಅಪರಿಚಿತರಿಂದ ಬಂದ ಈ ಮೇಲ್ ಸಂದೇಶ ನಂಬಿ ನಗರದ ವ್ಯಕ್ತಿಯೊಬ್ಬರು ರೂ. 10.35 ಲಕ್ಷ ಕಳೆದುಕೊಂಡಿದ್ದಾರೆ.

ಮೊಬೈಲ್ ಗೆ  ಉತ್ತರ ಪ್ರದೇಶದಲ್ಲಿ ಇರುವ  RAM TRADERS ನ HERBAL EXTRACT COMPANY ಯಲ್ಲಿ Reasonable rate ಗೆ Hydrobalum product ನ್ನು ಖರೀದಿಸಿ  ಹೊರದೇಶಕ್ಕೆ  export ಮಾಡಿ ಹೆಚ್ಚು ಹಣ ಗಳಿಸಬಹುದು ಎಂದು ಇದ್ದ ಅನಾಮದೇಯ ಮೇಲ್ ಬಂದಿದೆ.
ಇದನ್ನು ನಂಬಿ  ಮೇಲ್ ನಲ್ಲಿದ್ದ ಮೊಬೈಲ್ ನಂಬರ್ ಗೆ ಕರೆಮಾಡಿ ಈ ವ್ಯವಹಾರದ ಬಗ್ಗೆ ವ್ಯಕ್ತಿ ಆಸಕ್ತಿ ತೋರಿದ್ದಾರೆ. ನಂತರ  ಅವರು ನೀಡಿದ AXIS BANK ಖಾತೆಗೆ ನೆಟ್ ಬ್ಯಾಂಕಿಂಗ್ ಮುಖಾಂತರ ದಿನಾಂಕ:22/11/2023 ರಿಂದ ದಿನಾಂಕ:27/11/2023 ರ ವರೆಗೆ ಹಂತ ಹಂತವಾಗಿ  ಒಟ್ಟು 10,35,000/- ರೂ ಗಳನ್ನು ಪಾವತಿಸಿದ್ದಾರೆ.

ಹಲವು ದಿನ ಕಳೆದರು ಯಾವುದೇ Hydrobalum product ಆಗಲಿ  ಹಣವಾಗಲಿ ವಾಪಸ್ ಬಾರದೇ ಇದ್ದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.
ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಾರ್ವಜನಿಕರು ಇಂತಹ ಫೇಕ್ ಮೇಲ್ , ವಾಟ್ಸಪ್ ಮೇಸೆಜ್ , ದೂರವಾಣಿ ಕರೆ ನಂಬಿ ಹಣವನ್ನು ಕಳೆದುಕೊಳ್ಳಬಾರದಾಗಿ   ಪೊಲೀಸ್  ಇಲಾಖೆ ಎಚ್ಚರಿಕೆ ನೀಡಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ