October 5, 2024

ಪರಿಶ್ರಮದಿಂದ ಮುಂದೆ ಸಾಗಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂಬುದಕ್ಕೆ ಕರ್ಪೂರಿ ಠಾಕೂರ್ ಅವರೆ ಸಾಕ್ಷಿಯಾಗಿದ್ದಾರೆಂದು ಮೂಡಿಗೆರೆ ಭಂಡಾರಿ ಸಮಾಜದ ಅಧ್ಯಕ್ಷ ಎಂ.ಕೆ.ಷಣ್ಮುಖಾನಂದ ಹೇಳಿದರು.

ಅವರು ಗುರುವಾರ ಮೂಡಿಗೆರೆ ಪಟ್ಟಣದಲ್ಲಿ ಭಂಡಾರಿ ಸಮಾಜದಿಂದ ಏರ್ಪಡಿಸಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ, ಭಾರತ ರತ್ನ ಪುರಸ್ಕøತ ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದುಳಿದ ಸವಿತಾ ಸಮಾಜಕ್ಕೆ ಸೇರಿರುವ ಕರ್ಪೂರಿ ಠಾಕೂರ್ ಅವರು ಜಾತಿಗ್ರಸ್ತ ಬಿಹಾರ ರಾಜ್ಯದಲ್ಲಿ ತಮ್ಮ ಜನಪ್ರಿಯತೆಯಿಂದ 2 ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿರುವುದು ಸಮುದಾಯಕ್ಕೆ ಸಂತಸ ತರುವ ವಿಚಾರ ಎಂದು ಹೇಳಿದರು.
ಮೆಸ್ಕಾಂ ಅಧಿಕಾರಿ ರವಿಕುಮಾರ್ ಮಾತನಾಡಿ, 70ರ ದಶಕದಲ್ಲಿಯೇ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿಕೊಟ್ಟ ಕರ್ಪೂರಿ ಠಾಕೂರ್ ಅವರು ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ. ಅವರ ಆದರ್ಶವನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಕಾರ್ಯದರ್ಶಿ ಸತಿಶ್ ಭಂಡಾರಿ, ಗೌರವಾಧ್ಯಕ್ಷ ಲೋಕೇಶ್ ಭಂಡಾರಿ, ನಾಗೇಶ್ ಭಂಡಾರಿ, ಮಹೇಶ್ ಭಂಡಾರಿ, ಮಹಿಳಾ ಘಟಕದ ವನಿತಾ ಎಸ್. ಭಂಡಾರಿ, ಕವಿತಾ, ರಾಜೇಶ್ವರಿ, ವಿದ್ಯಾ, ವಿದ್ಯಾರ್ಥಿಗಳಾದ ಸನತ್, ಸೃಜನ್, ಕೀರ್ತನ್, ಸಿಂಚನ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ