October 5, 2024

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಹಿನ್ನಲೆಯಲ್ಲಿ ಬಣಕಲ್, ಕೊಟ್ಟಿಗೆಹಾರ, ಜಾವಳಿ, ನಿಡುವಾಳೆ ಸುತ್ತಮುತ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.

ಕೊಟ್ಟಿಗೆಹಾರದ ಶ್ರೀಸೀತಾರಾಮ ದೇವಸ್ಥಾನದಲ್ಲಿ ಒಂದು ಲಕ್ಷ ರಾಮತಾರಕ ಪಠನೆ ನಡೆಯಿತು. 1990ರಲ್ಲಿ ಕರಸೇವಕರಾಗಿದ್ದ ಟಿ.ಎಂ ಗಜೇಂದ್ರ, ರಾಮಕೃಷ್ಣ ಕಾರಂತ, ಪಿ.ಜಿ ಪ್ರವೀಣ್ ಅವರನ್ನು ಶ್ರೀಸೀತಾರಾಮ ದೇವಸ್ಥಾನ ಸಮಿತಿ ಮತ್ತು ಮೂಡಿಗೆರೆ ತಾಲ್ಲೂಕಿನ ಸಂಘ ಪರಿವಾರದ ವತಿಯಿಂದ ಸನ್ಮಾನಿಸಲಾಯಿತು.

ಬಿಜೆಪಿ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಜೆ.ಎಸ್ ರಘು, ಮುಖಂಡರಾದ ಅನೂಪ್ ಕುಮಾರ್, ಕೆ.ಸಿ. ರತನ್, ಬಿ.ಎಂ ಭರತ್, ಸಂಜಯಗೌಡ, ಗ್ರಾಮದ ಪ್ರಮುಖ ಮುಖಂಡರು ಇದ್ದರು.

ಕೊಟ್ಟಿಗೆಹಾರದ ದುರ್ಗಾಂಭ ಪೆಟ್ರೋಲ್ ಬಂಕ್‍ನ ವ್ಯವಸ್ಥಾಪಕ ಶರತ್ ಅವರು ಸಾರ್ವಜನಿಕರಿಗೆ ಸಿಹಿ ಹಂಚಿದರು.

ಬಣಕಲ್ ನ ಶ್ರೀ ಮಾಹಮ್ಮಾಯಿ ದೇವಸ್ಥಾನದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ, ದೀಪೋತ್ಸವ ನಡೆಯಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರು ಪೂಜೆಯಲ್ಲಿ ಪಾಲ್ಗೊಂಡರು.

ನಿಡುವಾಳೆಯ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ರಾಮತಾರಕ ಹೋಮ ಹಾಗೂ ವಿವಿಧ ಪೂಜಾ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆಯಿತು.

ಹಳೇಹಳ್ಳಿಯ ಬ್ರಹ್ಮೇಶ್ವರ, ಕುಮಾರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಸಂಘ ಪರಿವಾರದ ರತೀಶ್, ಶಶಿ ಕನ್ನಗೆರೆ, ಚಮ್ಮಿನ್ ಬೆಳಗೋಡು, ರವಿಶಂಕರ್ ಕನ್ನಗೆರೆ, ಶ್ರೇಯಸ್ ಹೊಸಹಳ್ಳಿ ಮುಂತಾದವರು ಇದ್ದರು.

ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಟೆಯ ನೇರ ಪ್ರಸಾರವನ್ನು ಎಲ್‍ಇಡಿ ಪರದೆಯಲ್ಲಿ ಭಕ್ತಾಧಿಗಳು ವೀಕ್ಷಿಸಿದರು. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಜಾವಳಿಯ ಶ್ರೀಬೂತಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆದಿದ್ದು ದೀಪಕ್ ದೊಡ್ಡಯ್ಯ, ಪರೀಕ್ಷಿತ್ ಜಾವಳಿ, ಕೃಷ್ಣ ಟೈಲರ್, ಶಶಿಕುಮಾರ್, ಸಮಪತ್, ಜಾವಳಿ ಗ್ರಾ.ಪಂ ಅಧ್ಯಕ್ಷ ಪ್ರದೀಪ್, ಉಪಾಧ್ಯಕ್ಷ ಮನೋಹರ, ಸದಸ್ಯರಾದ ಪ್ರತೀಶ್, ಜಯಂತ್, ಮಧು,ಮಂಜುನಾಥ್, ಅಶೋಕ್, ಚಿದಂಬರ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ