October 5, 2024

ಮೂಡಿಗೆರೆ ವಿವಿದೋದ್ದೇಶ ಮಹಿಳಾ ಸಹಕಾರ ಸಂಘಕ್ಕೆ ಇತ್ತೀಚಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ವಿಜೇತರಾದ ನಿರ್ದೇಶಕರುಗಳಿಗೆ ಪಟ್ಟಣದ ಬಿ.ಜೆ.ಪಿ. ಕಛೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಸಂಘದ ಎಲ್ಲಾ 14 ಸ್ಥಾನಗಳಿಗೆ ಬಿ.ಜೆ.ಪಿ. ಬೆಂಬಲಿತ ನಿರ್ದೇಶಕರುಗಳು ಆಯ್ಕೆಯಾಗಿದ್ದರು. ಸಂಘದ ಎಲ್ಲಾ ನಿರ್ದೇಶಕರುಗಳಿಗೆ ಭಾನುವಾರ ಬಿ.ಜೆ.ಪಿ. ಕಛೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ನೂತನ ನಿರ್ದೇಶಕರುಗಳಿಗೆ ಸನ್ಮಾನಿಸಿ ಮಾತನಾಡಿದ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ; ಮಹಿಳೆಯವರು ಸಹಕಾರ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ, ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿರುವ ಮಹಿಳೆಯರು ಸಹಕಾರ ಕ್ಷೇತ್ರದಲ್ಲಿಯೂ ಇತ್ತೀಚೆಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಇದು ಸಹಕಾರ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ, ಸಹಕಾರ ಕ್ಷೇತ್ರದಲ್ಲಿ ನಂಬಿಕೆ, ಪಾರದರ್ಶಕತೆಯೇ ಪ್ರಮುಖವಾಗಿದೆ. ಜನರ ಸಹಭಾಗಿತ್ವದಿಂದ ಮಾತ್ರ ಸಹಕಾರ ಕ್ಷೇತ್ರ ಉನ್ನತಿ ಸಾಧಿಸಲು ಸಾಧ್ಯ ಈ ನಿಟ್ಟಿನಲ್ಲಿ ಮೂಡಿಗೆರೆ ಮಹಿಳಾ ವಿವಿದೋದ್ದೇಶ ಸಹಕಾರ ಸಂಘವು ನೂತನ ಆಡಳಿತ ಮಂಡಳಿ ಅಡಿಯಲ್ಲಿ ಸದಸ್ಯರಿಗೆ ಉತ್ತಮ ಸೇವೆ ನೀಡಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ. ಮುಖಂಡರುಗಳಾದ ದೀಪಕ್ ದೊಡ್ಡಯ್ಯ, ಬಿ.ಎನ್. ಜಯಂತ್, ಎಂ.ಎಲ್. ಕಲ್ಲೇಶ್, ಹೆಚ್.ಆರ್. ಪ್ರಮೋದ್ ಕುಮಾರ್, ಕೆ.ಸಿ.ರತನ್, ಟಿ.ಎಂ. ಗಜೇಂದ್ರ, ಪಂಚಾಕ್ಷರಿ, ಜೆ.ಜಿ. ಶಶಿಧರ್, ಶರತ್ ಬಿ.ಹೊಸಳ್ಳಿ, ಯೋಗೇಶ್, ಸುಧಾ ಯೋಗೇಶ್ ಮುಂತಾದವರು ಉಪಸ್ಥಿತರಿದ್ದರು.

ಬಿ.ಜೆ.ಪಿ. ತಾಲ್ಲೂಕು ಅಧ್ಯಕ್ಷ ಜೆ.ಎಸ್. ರಘು ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಸಹಕಾರ ಸಂಘದ ನೂತನ ನಿರ್ದೇಶಕರುಗಳಾದ  ಜಯಲಕ್ಷ್ಮೀ ರಾಮೇಗೌಡ ಮೂಡಿಗೆರೆ, ಶಾಂತಲ ನಾಗೇಶ್ ಕೊಟ್ರಕೆರೆ, ಭಾರತಿ ರವೀಂದ್ರ ಸುಂಕಸಾಲೆ, ಅಶ್ವಿನ್ ಶರತ್ ಪಲ್ಗುಣಿ, ನಾಟ್ಯ ರಂಜಿತ್ ಕನ್ನಗೆರೆ, ಸುಶೀಲ ಮೂಡಿಗೆರೆ, ಪುಟ್ಟಮ್ಮ ಚಂದ್ರೇಗೌಡ ಕುನ್ನಹಳ್ಳಿ, ರೇಖಾ ಅಶೋಕ್ ಕುನ್ನಹಳ್ಳಿ, ಮಧುರಾ ಕವೀಶ್ ಬಗ್ಗಸಗೋಡು, ಚಾಂದಿನಿ ಶಿವಾನಂದ್ ಕುನ್ನಹಳ್ಳಿ, ದೀಪ್ತಿ ರಾಧಾಕೃಷ್ಣ ಬಿದರಹಳ್ಳಿ, ರೂಪ ಪ್ರಶಾಂತ್ ಬಿದರಹಳ್ಳಿ, ಸುಷ್ಮಾ ಯೋಗೇಶ್ ಬಿಳಗುಳ, ಶೋಭಾ ಹಳಸೆ ಇವರುಗಳನ್ನು ಅಭಿನಂದಿಸಲಾಯಿತು.

ಮೂಡಿಗೆರೆ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ; ಎಲ್ಲಾ ಸ್ಥಾನಗಳಲ್ಲಿ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳ ಗೆಲುವು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ