October 5, 2024

ಶ್ರೀ ಧರ್ಮಸ್ಥಳ ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್ ಉಜಿರೆ ಇದರಿಂದ ಭಾನುವಾರ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ  ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಧರ್ಮೋತ್ತಾನ ಟ್ರಸ್ಟ್ ನಾ ಟ್ರಸ್ಟಿಯಾದ ಪ್ರಶಾಂತ್ ಚಿಪ್ರಗುತ್ತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ನಮ್ಮಲ್ಲಿ ಹಲವಾರು ಬಗೆಯ ಸಂಪತ್ತುಗಳಿದೆ ಆದರೆ ಮನುಷ್ಯರು ಹೆಚ್ಚಾಗಿ ಹಣದ  ಸಂಪತ್ತಿನಲ್ಲಿ ಶ್ರೀಮಂತರಾಗಬೇಕೆಂದು ಬಯಸುತ್ತಾರೆ. ಆದರೆ ಆರೋಗ್ಯದ ಸಂಪತ್ತಿನಲ್ಲಿ ನಮ್ಮ ಜನರು ಕಡುಬಡವರಾಗಿದ್ದಾರೆ. ಹಣದ ಸಂಪತ್ತಿನಲ್ಲಿ ನಾವು ಹೇಗೆ ಸೀಮಂತರಾಗುತ್ತೇವೆ  ಹಾಗೆಯೇ ಆರೋಗ್ಯದ ಸಂಪತ್ತಿನಲ್ಲೂ ಶ್ರೀಮಂತರಾಗಬೇಕು.

ನಿಮಗೆ ಹಣದ ಸಂಪತ್ತು ಅಥವಾ ಇನ್ನಿತರ ಯಾವುದೇ ಸಂಪತ್ತು ಎಷ್ಟೇ ಇದ್ದರೂ ಕೂಡ ಅದನ್ನು ಅನುಭವಿಸಲು ನಿಮಗೆ ಆರೋಗ್ಯದ ಅವಶ್ಯಕತೆ ಇರುತ್ತದೆ. ಆರೋಗ್ಯವೇ ಸರಿ ಇಲ್ಲ ಅಂದಮೇಲೆ ಯಾವುದೇ ಸಂಪತ್ತನ್ನು  ಸರಿಯಾಗಿ ಅನುಭವಿಸಲು ಆಗುವುದಿಲ್ಲ. ಹಾಗಾಗಿ ಆರೋಗ್ಯದ ಸಮಾಜವನ್ನು ನಿರ್ಮಾಣ ಮಾಡಲು ನಾವೆಲ್ಲರೂ ಯೋಚಿಸಬೇಕು. ಈ ನಿಟ್ಟಿನಲ್ಲಿ ಪರಮಪೂಜ್ಯನೀಯ ಡಾ. ಡಿ ವೀರೇಂದ್ರ ಹೆಗಡೆಯವರು ಹಳ್ಳಿ ಹಳ್ಳಿಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು  ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಉಚಿತ ಔಷಧಿಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಶ್ರೀ ಧರ್ಮಸ್ಥಳ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಿರ್ದೇಶಕರಾದ ಶ್ರೀ ಜನಾರ್ದನ್ ರವರು ಮಾತನಾಡಿ ಶ್ರೀ ವೀರೇಂದ್ರ ಹೆಗ್ಗಡೆಯವರು ಲಕ್ಷಾಂತರ ಜನರಿಗೆ ಈ ರೀತಿಯಾಗಿ ಉಚಿತ ಆರೋಗ್ಯ ಶಿಬಿರಗಳನ್ನು ನೀಡುತ್ತಿದ್ದು ಲಕ್ಷಾಂತರ ಜನ ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಕ್ರಂ, ನೆಹರು ಯುವ  ಸಂಘದ ಅಧ್ಯಕ್ಷರಾದ ದಿನೇಶ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಿವಾನಂದ್, ರೈತ ಸಂಘದ ತಾಲೂಕ ಅಧ್ಯಕ್ಷ ಪುಟ್ಟಸ್ವಾಮಿಗೌಡ, ರವಿಗೌಡ ಹಾಗೂ ಇತರರು ಹಾಜರಿದ್ದರು.

ದಾರದಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ವಿವಿಧ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಸಲಹೆಗಳನ್ನು ಪಡೆದುಕೊಂಡರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ