October 5, 2024

ಚಿಕ್ಕಮಗಳೂರು ಶ್ರೀ ಪಾರ್ವತಿ ಮಹಿಳಾಮಂಡಳಿಯು 8ನೆಯ ವಾರ್ಷಿಕೋತ್ಸವ ಹಾಗೂ ಸಂಕ್ರಾಂತಿ ಸಂಭ್ರಮವನ್ನು ‘ಸುಗ್ಗಿ ಹಿಗ್ಗಿನೊಂದಿಗೆ ರಾಮ’ ಹಳ್ಳಿಯ ಸೊಗಡಿನಲ್ಲಿ ಶ್ರೀರಾಮನನ್ನು ಅನಾವರಣಗೊಳಿಸುವ ಮೂಲಕ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನಾ ಮಹೋತ್ಸವದ ಹಿನ್ನಲೆಯಲ್ಲಿ ಸುವರ್ಣಮಾಧ್ಯಮ ಭವನದಲ್ಲಿ ಆಯೋಜಿಸಿರುವ ನಾಲ್ಕುದಿನಗಳ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಶುಕ್ರವಾರ ಬೆಳಗಿನಿಂದಲೇ ಚಿಕ್ಕೊಳಲೆ ಸದಾಶಿವಾಶಾಸ್ತ್ರಿ ಸಭಾಂಗಣದಲ್ಲಿ ಸರ್ವಾಲಂಕೃತ ಮಹಿಳೆಯರ ತಂಡದ ಸಡಗರ. ಬಣ್ಣ ಬಣ್ಣದ ರಂಗವಲ್ಲಿಯ ಚಿತ್ತಾರ. ಹಳ್ಳಿಯ ಸೊಬಗನ್ನು ಬಿಂಬಿಸುವ ಕಬ್ಬಿನಜಲ್ಲೆ, ಮಾವು, ಬಾಳೆ, ಹೂ ಹಣ್ಣು, ತರಕಾರಿ ಗ್ರಾಮೀಣ ಪರಿಕರಗಳ ಜೊತೆಗೆ ಕಲಶಕನ್ನಡಿಯೊಂದಿಗೆ ಶ್ರೀರಾಮನ ಭಾವಚಿತ್ರವನ್ನು ಉತ್ಸವದಲ್ಲಿ ಕರೆತಂದು ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಕಾಫಿ ಹಣ್ಣು, ಭತ್ತ, ರಾಗಿ, ಹಸಿಶೇಂಗಾ, ರಾಶಿಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸೀತೆ, ಲಕ್ಷ್ಮಣ, ಆಂಜನೇಯ ಒಳಗೊಂಡ ಒಡ್ಡೊಲಗದಲ್ಲಿರುವ ಶ್ರೀರಾಮನೊಂದಿಗೆ ಆದಿಜಗದ್ಗುರು ಶ್ರೀರೇಣುಕಾಚಾರ್ಯರು, ಪ್ರಥಮಪೂಜಕ ವಿಘ್ನನೇಶ್ವರ, ಆದಿಮಾತೆ ಶ್ರೀದೇವಿ ಮತ್ತಿತರ ದೇವಾನುದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು. ಸಿದ್ಧಾಂತ ಶಿಖಾಮಣಿಯ ದೈವಾರಾಧನೆಯ ಐದುಶ್ಲೋಕಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು.
ಗೋಮಾತೆ, ಧಾನ್ಯಲಕ್ಷ್ಮಿ, ದೀಪಾಲಂಕಾರದೊಂದಿಗೆ ಭಾಗ್ಯಲಕ್ಷ್ಮಿಗೂ ವಿವಿಧರೀತಿಯ ಹೂವು, ಪತ್ರೆ, ವಿಳ್ಯದೆಲೆ ಅಡಿಕೆ ಬಾಳೆ, ಕಿತ್ತಲೆ ತೆಂಗಿನ ನ್ಯವೇದ್ಯದೊಂದಿಗೆ ಪೂಜೆ ಸಲ್ಲಿಸಲಾಯಿತು. ಎಳ್ಳುಬೆಲ್ಲ, ಕೊಬ್ಬರಿ, ಕಡ್ಲೆ ಪರಸ್ಪರ ವಿನಿಮಯಮಾಡಿಕೊಂಡು ಒಳ್ಳೆಯ ಮಾತನಾಡುವ ಸಂಕಲ್ಪ ಮಾಡಿ ಭವ್ಯರಾಮನ ಮಂದಿರದಲ್ಲಿ ‘ಬಾಲರಾಮಲಲ್ಲಾ’ ಪ್ರತಿಷ್ಠಾಪನೆಗೊಳ್ಳುತ್ತಿರುವ ಸಂತಸವನ್ನು ತಾಳ, ಮೇಳದೊಂದಿಗೆ ರಾಮಕೀರ್ತನೆ, ಕೋಲಾಟ ನೃತ್ಯಸೇವೆಯೊಂದಿಗೆ ಹಂಚಿಕೊಳ್ಳಲಾಯಿತು.

ಫಸಲಿನರಾಶಿಯ ಸುತ್ತ ಗೆಣಸು, ಅವರೇಕಾಯಿ, ಸಿಹಿಕುಂಬಳ, ತೆಂಗು, ದರ್ಬೆ, ಮೇವಿನ ಅಲಂಕೃತ ಜೋಡಣೆ. ಹಳ್ಳಿಯ ಸೊಬಗಿನ ಪ್ರತೀಕವಾದ ಒಲೆ ಮೇಲ್ಲೊಂದು ಮಣ್ಣಿನಹೆಂಚು, ಮಡಿಕೆ-ಕುಡಿಕೆ, ಬೀಸುವಕಲ್ಲು, ಒನಕೆ, ಕುಟ್ಟುವಕುಟ್ಟಣಿಕೆ, ಮರಗಿ-ಹುಟ್ಟು, ಕೇರುವಮೊರ, ಕೌಶಲ್ಯಭರಿತ ಮರದಸ್ಟ್ಯಾಂಡ್, ಚಿಬ್ಬಲು, ಚಕ್ಕಡಿ, ಕುಡುಗೋಲು, ಪಿಕಾಸಿ, ಕತ್ತಿ, ಕಡಗೋಲು ಡಬರಿ ಜೋಡಣೆ. ಅಳತೆಬದ್ದ ಹಿತ್ತಾಳೆ ಪಾತ್ರೆಗಳು-ದೀಪಗಳು, ಬೆಳ್ಳಿಯಕಳಸ ವಿವಿಧ ರೀತಿಯ ಹಣತೆಗಳು ವೈಭವವನ್ನು ಹೆಚ್ಚಿಸಿದ್ದವು. ಸಕ್ಕರೆಯಲ್ಲಿ ಎರಕಹೊಯ್ದ ಗೋಪುರ-ದೀಪ-ಕಳಸ-ಕಂಬ-ಅಚ್ಚುಗಳು ಅಂದಚಂದ ಹೆಚ್ಚಿಸಿದ್ದವು. ರಾಮತಾರಕ ಮಂತ್ರ, ಶ್ರೀರುದ್ರ ಸೂಕ್ತದೊಂದಿಗೆ ಸಾಮೂಹಿಕ ಅರ್ಚನೆ, ಗೀತಗಾಯನ, ಕೇಸರಿ ಶಲ್ಯಧಾರಿಯರ ಕೋಲಾಟ ನಡೆಯಿತು.

ಗೋಲ್ಡನ್‍ಸನ್‍ಶೈನ್‍ಶಾಲಾ ಮುಖ್ಯಸ್ಥೆ ಪೂರ್ಣಿಮಾಅರುಣ್ ಜ್ಯೋತಿಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ಹಬ್ಬ ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಂಸ್ಕøತಿಯನ್ನು ಮುನ್ನಡೆಸಬೇಕಾಗಿದೆ ಎಂದರು.

ಅಧ್ಯಕ್ಷತೆವಹಿಸಿದ ಶ್ರೀಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಸುಗ್ಗಿಯ ಹಬ್ಬ ಸಂಕ್ರಾಂತಿ ರೈತಾಪಿವರ್ಗದ ಸಂಭ್ರಮ. ಪಥ ಬದಲಿಸುವ ಸೂರ್ಯನ ಆರಾಧನೆ ಪ್ರಮುಖವಾಗಿದೆ. ಈ ಬಾರಿ ಶ್ರೀರಾಮನ ಭವ್ಯಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಸಡಗರವೂ ಸೇರಿದೆ. ಆಚಾರ್ಯಸಾಹಿತ್ಯದ ಪ್ರವರ್ಧನೆಗಾಗಿ ರಂಭಾಪುರಿ ಜಗದ್ಗುರುಗಳವರ ಆಶಯದಂತೆ ಆರಂಭಗೊಂಡಿರುವ ಮಂಡಳಿಯ 8ನೆಯ ವಾರ್ಷಿಕೋತ್ಸವವು ಹಿಗ್ಗು ತಂದಿದೆ ಎಂದರು.

ಕಾರ್ಯದರ್ಶಿ ಭವಾನಿವಿಜಯಾನಂದ ಪ್ರಾಸ್ತಾವಿಸಿ ಆದರ್ಶಪುರುಷೋತ್ತಮ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣದ ಶತಮಾನಗಳ ಜನರ ಆಶಯ ಸಾಕಾರಗೊಳ್ಳುತ್ತಿರುವ ಸಂದರ್ಭದಲ್ಲಿ 4ದಿನಗಳ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದರು.

ಜಯಮಾಲಾಚಂದ್ರು ಸ್ವಾಗತಿಸಿ, ಸುಮಾಮಹೇಶ್ ವಂದಿಸಿದರು. ಸಪ್ನಾಬಸವರಾಜ್ ನಿರೂಪಿಸಿದ್ದು, ಶೈಲಾಶಿವು ಅತಿಥಿ ಪರಿಚಯಿಸಿದ್ದು, ಶ್ಯಾಮಲಾ ಪ್ರಾರ್ಥಿಸಿದರು. ಶೈಲಾಬಸವರಾಜ ರೇಣುಕಗೀತೆ ಪ್ರಸ್ತುತ ಪಡಿಸಿದರು. ಪದಾಧಿಕಾರಿಗಳಾದ ಸೌಭಾಗ್ಯಜಯಣ್ಣ, ಮಂಜುಳಾಮಹೇಶ್, ಪಾರ್ವತಿ ಬಸವರಾಜ್ ನೇತೃತ್ವದಲ್ಲಿ ಕೌಶಲ್ಯದ ಸ್ಪರ್ಧೆ ನಡೆಯಿತು.

ಟೌನ್ ಮಹಿಳಾಸಮಾಜದ ಕಾರ್ಯದರ್ಶಿ ಅರ್ಪಿತಾನಿತಿನ್ ಬಹುಮಾನ ವಿತರಿಸಿದರು. ಅರಿಶಿಣ-ಕುಂಕುಮ, ಹೂವು ರವಿಕೆ ಖಣದೊಂದಿಗೆ ಉಡಿತುಂಬಲಾಯಿತು. ಎಳ್ಳುಬೆಲ್ಲ ಬೀರಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ