October 5, 2024

ಕಾಫಿಬೆಳೆಯುವ ಪ್ರದೇಶಗಳ ರೈತರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾಡಾನೆ ಕಾಡುಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತಾಪಿ ವರ್ಗಕ್ಕೆ ಈಗ ಹೊಸದೊಂದು ಸಮಸ್ಯೆ ಕಾಡಲು ಪ್ರಾರಂಭಿಸಿದೆ.

ಕಾಫಿ ತೋಟದಲ್ಲಿ ಮರಗಳಿಗೆ ಹಬ್ಬಿ ಬೆಳೆಯುವ ಕಾಳುಮೆಣಸು ಬಳ್ಳಿಗಳಿಗೆ ಈಗ ಮುಳ್ಳುಹಂದಿ ಮಾರಕವಾಗಿ ಪರಿಣಮಿಸುತ್ತಿವೆ. ಕಾಳುಮೆಣಸು ಬಳ್ಳಿಯ ಬುಡವನ್ನು ಮುಳ್ಳುಹಂದಿಗಳು ಕತ್ತರಿಸುತ್ತಿದ್ದು ಇದು ಕಾಳುಮೆಣಸು ಬೆಳೆಗಾರರನ್ನು ತತ್ತರಿಸುವಂತೆ ಮಾಡುತ್ತಿದೆ.

ಈಗಾಗಲೇ ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಅನೇಕ ಕಡೆ ಈ ಸಮಸ್ಯೆ ತಲೆದೋರಿದೆ. ಕಾಳುಮೆಣಸಿನ ಬಳ್ಳಿಯ ಬುಡವನ್ನು ಕತ್ತರಿಸಿ ಬಳ್ಳಿಯ ರಸವನ್ನು ಹೀರುವ ಪ್ರವೃತ್ತಿಯನ್ನು ಮುಳ್ಳುಹಂದಿಗಳು ಬೆಳೆಸಿಕೊಂಡಿದ್ದು, ಇದು ಕಾಳುಮೆಣಸು ಬಳ್ಳಿ ಬೆಳೆದವರಿಗೆ ದೊಡ್ಡ ಸಂದಿಗ್ದ ಪರಿಸ್ಥಿತಿ ತಂದೊಡ್ಡಿದೆ.

ಕಾಫಿತೋಟದಲ್ಲಿ ಕಾಳುಮೆಣಸು ಬೆಳೆದರೆ ಅದರಿಂದ ರೈತರಿಗೆ ಕೊಂಚ ಲಾಭಾಂಶ ದೊರಕುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾಳುಮೆಣಸು ಬಳ್ಳಿಗೆ ವಿವಿಧ ರೋಗ ಹಾಗೂ ಕೀಟಬಾಧೆಗಳಿಂದಾಗಿ ಕಾಳುಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಫಸಲಿಗೆ ಬಂದ ಕಾಳುಮೆಣಸು ಬಳ್ಳಿಗಳು ರೋಗಬಾಧೆಯಿಂದ ನಶಿಸಿ ಹೋಗುತ್ತಿರುವುದು ಸಾಮಾನ್ಯವಾಗಿದೆ.

ಒಂದು ಕಾಳುಮೆಣಸು ಬಳ್ಳಿ ಉತ್ತಮವಾಗಿ ಫಸಲು ಕೊಡುವುದಕ್ಕೆ ಅದನ್ನು ನೆಟ್ಟು ಎಂಟತ್ತು ವರ್ಷಗಳು ಬೇಕು. ಅಷ್ಟು ವರ್ಷ ಜತನದಿಂದ ಬೆಳೆಸಿದ್ದ ಕಾಳುಮೆಣಸು ಬಳ್ಳಿಗಳನ್ನು ಈಗ ಮುಳ್ಳುಹಂದಿಗಳು ಕಡಿದು ನಾಶಪಡಿಸುತ್ತಿವೆ. ಇದರ ನಿಯಂತ್ರಣ ಬಹಳ ಕಷ್ಟವಾಗಿದೆ. ಸಾಮಾನ್ಯವಾಗಿ ರಾತ್ರಿವೇಳೆಯೇ ತೋಟಗಳಿಗೆ ದಾಳಿ ಇಟ್ಟು ಬಳ್ಳಿಗಳನ್ನು ಕಡಿಯುವುದರಿಂದ ರೈತರು ಇದರ ನಿಯಂತ್ರಣಕ್ಕೆ ಮಾಡುತ್ತಿರುವ ಪ್ರಯತ್ನಗಳೆಲ್ಲಾ ವ್ಯರ್ಥವಾಗುತ್ತಿವೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ, ಚಿಕ್ಕಮಗಳೂರು ತಾಲ್ಲೂಕಿನ ಅನೇಕ ಭಾಗಗಳಲ್ಲಿ ಈಗಾಗಲೇ ಅನೇಕ ಬೆಳೆಗಾರರು ಮುಳ್ಳುಹಂದಿ ಕಾಟದಿಂದ ತಮ್ಮ ತೋಟದಲ್ಲಿ ಬೆಳೆದಿದ್ದ ಕಾಳುಮೆಣಸು ಬಳ್ಳಿಗಳನ್ನು ಕಳೆದುಕೊಂಡು ತುಂಬಾ ನಷ್ಟ ಅನುಭವಿಸಿದ್ದಾರೆ.

ಬಳ್ಳಿಯ ಸುತ್ತ ಪ್ಲಾಸ್ಟಿಲ್ ಸುತ್ತಿ ಮುಳ್ಳುಹಂದಿಯಿಂದ ರಕ್ಷಣೆ ನೀಡುವ ಪ್ರಯತ್ನವನ್ನು ಅನೇಕರು ನಡೆಸಿದ್ದಾರೆ. ಆದರೆ ಮುಳ್ಳುಹಂದಿಗಳು ಪ್ಲಾಸ್ಟಿಕ್ ಅನ್ನು ಸರಿಸಿ ಬಳ್ಳಿಗಳನ್ನು ತುಂಡರಿಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೆ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕೊಡಲು ಬರುವುದಿಲ್ಲ ಎನ್ನುತ್ತಿದ್ದಾರೆ. ಹಸನಾಗಿ ಬೆಳೆದ ಕಾಳುಮೆಣಸು ಬಳ್ಳಿಯಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುವ ಫಸಲು ಇರುತ್ತದೆ. ಬಳ್ಳಿ ತುಂಡರಿಸಿದರೆ ಶಾಶ್ವತವಾಗಿ ಅದರಿಂದ ಬರುವ ಆದಾಯ ನಿಂತುಹೋಗುತ್ತದೆ.

ಮುಳ್ಳುಹಂದಿ ನಿಯಂತ್ರಣಕ್ಕೆ ತಜ್ಞರು ಏನಾದರೂ ಪರಿಹಾರ ಕಂಡುಹಿಡಿಯಬೇಕು. ಜೊತೆಗೆ ಅರಣ್ಯ ಇಲಾಖೆಯೂ ರೈತರಿಗೆ ಆಗುತ್ತಿರುವ ನಷ್ಟಕ್ಕೆ ಪರಿಹಾರ ನೀಡುವ ಬಗ್ಗೆ ಕ್ರಮ ವಹಿಸಬೇಕಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ