October 5, 2024

ಅಯೋಧ್ಯೆಯಲ್ಲಿ  ಶ್ರೀ ಸೀತಾ ರಾಮರ ಮಂದಿರ ಉದ್ಘಾಟನೆಯ ದಿನ(ಜನವರಿ 22) ಶ್ರೀ ಕ್ಷೇತ್ರ ದೇವರುಂದದಲ್ಲಿ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ನೆರವೇರಿಸಲಾಗುವುದು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು ಅಯೋಧ್ಯೆಯಲ್ಲಿ ಶ್ರೀ ಸೀತಾರಾಮರ ಮಂದಿರ ನಿರ್ಮಾಣ ಆಗುವ ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ದೇವವೃಂದಕ್ಕು ಅಯೋಧ್ಯೆಯ ಸೀತಾರಾಮರಿಗೂ ಇರುವ ಸಂಬಂಧಗಳನ್ನು ನಾವು ನೆನಪುಮಾಡಿಕೊಳ್ಳಬೇಕಾಗಿದೆ.  ಶ್ರೀಸೀತಾರಾಮರು ವನವಾಸದ ಸಂದರ್ಭದಲ್ಲಿ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಬರುವ ಸಂದರ್ಭದಲ್ಲಿ ಹಲವಾರು ಜಾಗಗಳಲ್ಲಿ ಅವರು ತಂಗುತ್ತಾರೆ. ಅದರಲ್ಲಿ ಈಗ ಮೂಡಿಗೆರೆ ತಾಲ್ಲೂಕಿನಲ್ಲಿ  ಇರುವ  ಶ್ರೀ ದೇವವೃಂದ  ಅಂದಿನ ಸುವರ್ಣ ಕದಲಿವನ ಶ್ರೀ ಪ್ರಸನ್ನ ರಾಮೇಶ್ವರ ದೇವಸ್ಥಾನದ ಜಾಗವು ಕೂಡ ಒಂದು. ಇಲ್ಲಿ ಶ್ರೀ ಸೀತಾರಾಮರು ವನವಾಸದ ಸಂದರ್ಭದಲ್ಲಿ ಶ್ರೀ ಲಕ್ಷ್ಮಣನ ಒಳಗೋಡಿ ಇಲ್ಲಿ ಇದ್ದಂತ ಉದ್ಭವ ಲಿಂಗಕ್ಕೆ ಅಭಿಷೇಕ ಮಾಡಿ ಪೂಜೆಯನ್ನ ಸಲ್ಲಿಸುತ್ತಾರೆ. ಆಗ  ಶ್ರೀ ಈಶ್ವರನು ಪ್ರಸನ್ನನಾಗಿ ಪ್ರತ್ಯಕ್ಷನಾಗುತ್ತಾನೆ. ಶ್ರೀ ಈಶ್ವರ ದೇವರು ಪ್ರಸನ್ನನಾದರಿಂದ ಪ್ರಸನ್ನ ಅಂತಲೂ ಹಾಗೂ ಶ್ರೀ ಈಶ್ವರನನ್ನು  ಶ್ರೀರಾಮ ಪೂಜೆ ಮಾಡಿದ್ದರಿಂದ ರಾಮೇಶ್ವರ  ಅಥವಾ ಶ್ರೀ ಪ್ರಸನ್ನ ರಾಮನಾಥೇಶ್ವರ ಅಂತಲೂ ಎಲ್ಲ ಸೇರಿ ಒಟ್ಟು ಶ್ರೀ ಪ್ರಸನ್ನ ರಾಮೇಶ್ವರ  ಅಂತಲೂ ಕರೆಯಲ್ಪಟ್ಟಿತು. ಅಂದಿನಿಂದ ಶ್ರೀ ದೇವವೃಂದದ ಈ ಲಿಂಗಕ್ಕೆ ಶ್ರೀ ಪ್ರಸನ್ನ ರಾಮೇಶ್ವರ ಅಥವಾ ಶ್ರೀ ಪ್ರಸನ್ನ ರಾಮನಾಥೇಶ್ವರ ಎಂದು ಕರೆಯಲ್ಪಟ್ಟಿದೆ.

ರಾಮಾಯಣ ನಡೆದು ಸುಮಾರು 5,000 ದಿಂದ ರೂ.7000 ವರ್ಷ ಆಯಿತೆಂದು ಇತಿಹಾಸಕಾರರು ಅಂದಾಜಿಸುತ್ತಾರೆ. ಅಂದಮೇಲೆ ನಮ್ಮ ಶ್ರೀ ದೇವವೃಂದದ ಈ ಉದ್ಭವ ಲಿಂಗಕ್ಕೆ ಸುಮಾರು ರೂ.7000 ವರ್ಷಗಳಿಗೂ ಮಿಗಿಲಾದ ಇತಿಹಾಸ ಇದೆ. ಆದ್ದರಿಂದ ಅಯೋಧ್ಯ ಶ್ರೀ ಸೀತಾರಾಮರ ಮಂದಿರದ ಉದ್ಘಾಟನೆಯ ದಿನ 22 ಜನವರಿ ರಂದು ಶ್ರೀ ಕ್ಷೇತ್ರದಲ್ಲಿ ಶ್ರೀ ಸೀತಾರಾಮರು ಶ್ರೀ ಪ್ರಸನ್ನ ರಾಮೇಶ್ವರನಿಗೆ ಅಭಿಷೇಕ ಮಾಡಿದ ರೀತಿಯಲ್ಲೇ ಅಭಿಷೇಕವು ನೆರವೇರಲಿದೆ. ಅಂದು ಯಾರಾದರೂ ಭಕ್ತಾದಿಗಳು ರುದ್ರಾಭಿಷೇಕ ಮಾಡಿಸುವವರು ಮಾಡಿಸಬಹುದು. ಮುಂಚಿತವಾಗಿ ತಮ್ಮ ಹೆಸರು ರಾಶಿ ನಕ್ಷತ್ರವನ್ನು ತಿಳಿಸತಕ್ಕದ್ದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಅಧ್ಯಕ್ಷರು:6361634391

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ