October 5, 2024

ಬುಧವಾರ ಮೂಡಿಗೆರೆ ಪಟ್ಟಣ ಪಂಚಾಯ್ತಿ ಯ ಬಜೆಟ್ ಪೂರ್ವಭಾವಿ ಸಭೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪಟ್ಟಣ ಪಂಚಾಯಿತಿ ಮುಂದಿನ ಆರ್ಥಿಕ ವರ್ಷದ ಬಜೆಟ್ ತಯಾರಿಗೆ ಈ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಸಚೇತನ ಯುವ ಸಂಘದ ಸದಸ್ಯರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ  ಅಧಿಕಾರಿಗಳ ಗಮನ ಸೆಳೆದರು. ಮೂಡಿಗೆರೆ ಪಟ್ಟಣದ ಹಲವು ಸಮಸ್ಯೆಗಳನ್ನು ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೀದಿದೀಪಗಳು ಸಂಪೂರ್ಣ ಹಾಳಾಗಿದೆ. ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗುತ್ತಿದೆ. ಅನೇಕ ರಸ್ತೆಗಳು ಗುಂಡಿಬಿದ್ದಿವೆ, ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಾಗಿದೆ.  ಬೀಜುವಳ್ಳಿ ರಸ್ತೆಯಲ್ಲಿ ಕಸ ಸುರಿಯುತ್ತಿದ್ದು ಇದರಿಂದ ಪಟ್ಟಣದ ಜನತೆಗೆ ರೋಗರುಜಿನಗಳಿಗೆ ಕಾರಣವಾಗುತ್ತಿದೆ..ಹೀಗೆ ವಿವಿಧ ವಿಷಯಗಳ ಬಗ್ಗೆ ಗಮನ ಸೆಳೆಯಲಾಯಿತು.

ಈ ಹಿಂದೆ ಆಗಸ್ಟ್ 2023 ರಲ್ಲಿ ಸಚೇತನ ಸಂಘವು ಮೂಡಿಗೆರೆ ಎಸ್.ಬಿ.ಐ. ಬ್ಯಾಂಕ್  ರಸ್ತೆ ಸೇರಿಂದತೆ ವಿವಿಧ ರಸ್ತೆಗಳ ದುರಸ್ತಿ ಬಗ್ಗೆ ಹೋರಾಟ ನಡೆಸಿದ್ದು ಇದರ ಬಗ್ಗೆ ಇದೂವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಭೆಯಲ್ಲಿಯೇ ಸಚೇತನ ಸಂಘದ ಅಧ್ಯಕ್ಷ ರವಿ ರಾಜ್ ಅರಸ್. ಸದಸ್ಯರಾದ ನಿಶ್ಚಲ್. ಪ್ರವೀಣ್ ಜೈನ್.  ಟಿ. ಹರೀಶ್. ಫ್ರಾನ್ಸಿಸ್, ವಿವೇಕಾನಂದ ನಾಯಕ್ ಮತ್ತಿತರರು ಧರಣಿ ನಡೆಸಿದರು.

ಈ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ ಗಳು ಜನವರಿ 20 ರ ಒಳಗೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದರು. ಜನವರಿ 20 ರ ಒಳಗೆ ರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ಮತ್ತೆ ಹೋರಾಟ ಮಾಡುವುದಾಗಿ ಸಂಘದ ಸದಸ್ಯರು ತಿಳಿಸಿದರು.

ಸಭೆಗೆ ಸದಸ್ಯರ ಗೈರು : ಇಂದು ಪಟ್ಟಣ ಪಂಚಾಯಿತಿಯವರು ನಡೆಸಿದ ಬಜೆಟ್ ಪೂರ್ವಭಾವಿ ಸಭೆಯು ನಾಮಕವಾಸ್ಥೆಗೆ ನಡೆದಂತಿತ್ತು. ಸಭೆಯಲ್ಲಿ ಇಬ್ಬರು ಪಟ್ಟಣ ಪಂಚಾಯತಿ ಸದಸ್ಯರು ಹೊರತುಪಡಿಸಿ ಉಳಿದ ಸದಸ್ಯರು ಗೈರು ಹಾಜರಾಗಿದ್ದರು. ಸಂಘಸಂಸ್ಥೆಗಳ ಪ್ರತಿನಿಧಿಗಳು ಸಹ ಇರಲಿಲ್ಲ. ಈ ಬಗ್ಗೆಯೂ ಸಚೇತನ ಯುವ ಸಂಘದ ಸದಸ್ಯರು ತಮ್ಮ ಅಸಮದಾನ ವ್ಯಕ್ತಪಡಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ