October 5, 2024

ಮೂಡಿಗೆರೆ ರೋಟರಿ ಸಂಸ್ಥೆಯಿಂದ ಜನವರಿ 6 ರಂದು ಮೂಡಿಗೆರೆಯ ಜೇಸಿ ಭವನದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಮೂಡಿಗೆರೆ ತಾಲೂಕಿನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ತರಬೇತಿ ಕಾರ್ಯಗಾರವನ್ನು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಅವರು ಉದ್ಘಾಟಿಸಿ ಸಮಾಜದಲ್ಲಿ ಶಿಕ್ಷಕರ ಪಾತ್ರ  ಬಹಳ ಮುಖ್ಯವಾದುದು ಹಾಗಾಗಿ ಶಿಕ್ಷಕರಿಗೆ ಮೌಲ್ಯ ಶಿಕ್ಷಣದ ಅರಿವು ಬಹಳ ಅಗತ್ಯ, ಮೌಲ್ಯಗಳನ್ನ ಶಿಕ್ಷಕರು ಮುಂದಿನ ಪೀಳಿಗೆಗೆ ಹೇಳಿಕೊಡುವಂತಾಗಬೇಕು ಆದರಿಂದ ಶಿಕ್ಷಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆಯಬೇಕೆಂದು ಹೇಳಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲ ಡಿ.ಎಸ್. ರವಿ ಅವರು ಮಾತನಾಡಿ ರೋಟರಿಯ ಕಾರ್ಯ ಚಟುವಟಿಕೆಗಳ ಮಾತನಾಡಿ ಮೌಲ್ಯ ಶಿಕ್ಷಣದ ಬಗ್ಗೆ ಅರಿವನ್ನು ಮೂಡಿಸಿದರು.

ತರಬೇತುದಾರರಾದ ಮೈಸೂರಿನ ಭೀಮೇಶ್, ಭಾನುಚಂದ್ರ ಮತ್ತು ಗೋಪಿನಾಥ್ ಅವರುಗಳು ಶಿಕ್ಷಕರಿಗೆ ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ತರಬೇತಿ ನೀಡಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಅಸಿಸ್ಟಂಟ್ ಗವರ್ನರ್ ವಿನೋದ್ ಕುಮಾರ್ ಮತ್ತು ಶ್ರೀಮತಿ ಮೈಥಿಲಿ ರವಿ ಅವರು ಉಪಸ್ಥಿತರಿದ್ದರು.

ತಾಲೂಕಿನ 120 ಶಿಕ್ಷಕರು ಅರಿವು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

*********************

ಅದೇ ದಿನ ಮೂಡಿಗೆರೆ ಸೈಂಟ್ ಮಾರ್ಥಾಸ್ ಶಾಲೆಯಲ್ಲಿ ದಿವಂಗತ ಜಯರಾಂ ಅಡ್ಯಂತಾಯ ಮತ್ತು ದಿವಂಗತ ರೀತೇಶ್ ಅಡ್ಯಂತಾಯ ನೆನಪಿನಾರ್ಥವಾಗಿ ಇತ್ತೀಚೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಹಾಗೂ ಎಸ್‍ಎಸ್‍ಎಲ್‍ಸಿಯ ನಂತರ ಮುಂದಿನ ಆಯ್ಕೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಡಿ.ಎಸ್.ರವಿ ಅವರು ಉದ್ಘಾಟಿಸಿ ಮಾತನಾಡಿ, ರೋಟರಿ ಸಂಸ್ಥೆಯಿಂದ ಅನೇಕ ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪೂರ್ವ ಕಾರ್ಯಕ್ರಮವನ್ನು ಆಯೋಜಸಲಾಗುತ್ತಿದ್ದು, ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶೆರ್ಲೊಟ್ ರೋಡ್ರಿಗಸ್ ಮಾತನಾಡಿ, ಮಕ್ಕಳಿಗೆ ಗುರಿಯ ಜೊತೆಗೆ ಮಾರ್ಗದರ್ಶನದ ಅರಿವಿದ್ದರೆ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಹೇಳಿದರು.

ತರಬೇತುದಾರರಾದ ಭೀಮೇಶ್ ಮತ್ತು ಭಾನುಚಂದ್ರ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಮತ್ತು ಎಸ್.ಎಸ್.ಎಲ್.ಸಿ. ನಂತರ ಮುಂದೇನು ? ಎಂಬ ವಿಷಯಗಳ ಬಗ್ಗೆ ತರಬೇತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಅಧ್ಯಕ್ಷ ತೇಜಸ್ವಿ ವಹಿಸಿದ್ದರು. ಅಸಿಸ್ಟಂಟ್ ಗವರ್ನರ್ ವಿನೋದ್ ಕುಮಾರ್,  ಮೈಥಿಲಿ ರವಿ, ಶೈಲೇಂದ್ರ, ಪ್ರಸಾದ್,  ಪ್ರದೀಪ್ ಕುಮಾರ್, ವಿವೇಕ್ ಪುಣ್ಯಮೂರ್ತಿ, ನರೇಂದ್ರ ಶೆಟ್ಟಿ, ವರುಣ್, ಜೀವನ್ ಮತ್ತಿತರರಿದ್ದರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ