October 5, 2024

ಮೂಡಿಗೆರೆಯ ಎಂ.ಜಿ. ಎಂ.ಆಸ್ಪತ್ರೆಯ ಆವರಣದಲ್ಲಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ವತಿಯಿಂದ ನೀಡಿರುವ ಆಂಬ್ಯುಲೆನ್ಸ್ ಗೆ ಚಾಲನೆ ನೀಡಲಾಯಿತು.

ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅಂಬುಲೆನ್ಸ್ ಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಫೀಶ್  ಮೋಣು, ಅಬ್ದುಲ್ ರೆಹಮಾನ್,  ಮಾಜಿಸಚಿವ ಬಿ.ಬಿ. ನಿಂಗಯ್ಯ,  ಬಿ.ಎಸ್.ಪಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್, ಮಲೆನಾಡು ಮುಸ್ಲಿಂ ವೇದಿಕೆ ಅಧ್ಯಕ್ಷ ಅಬ್ರರ್ ಅಹಮ್ಮದ್, ಬ್ಯಾರಿ ಒಕ್ಕೂಟದ ಅಧ್ಯಕ್ಷ ಬಿ.ಹೆಚ್. ಮಹಮ್ಮದ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಸಿ. ಹೂವಪ್ಪ ಇತರರು ಪಾಲ್ಗೊಂಡಿದ್ದರು.

ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ ಮಾತನಾಡಿದ ಶಾಸಕಿ ನಯನ ಮೋಟಮ್ಮ ; ಮೂಡಿಗೆರೆ ಭಾಗದಲ್ಲಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯವರು ಜನರಿಗೆ, ನೊಂದವರಿಗೆ, ಅಪಘಾತಕ್ಕೆ ಈಡಾದವರಿಗೆ, ಅಪಾಯದಲ್ಲಿರುವ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅನೇಕ ಅಪಾಯಕಾರಿ ಸನ್ನಿವೇಶದಲ್ಲಿ ಜನರ ಜೀವ ಉಳಿಸಲು ಅವರು ಮುಂದೆ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆ ಮಾದರಿಯಾದುದಾಗಿದೆ. ಸಂಸ್ಥೆಯ ಸದಸ್ಯರು ಪ್ರಾರಂಭಿಸಿರುವ ನೂತನ ಅಂಬುಲೆನ್ಸ್ ಸೇವೆಯನ್ನು ಜನರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಫಿಶ್ ಮೋಣು ಅವರು ಪತ್ರಿಕೆಯೊಂದಿಗೆ ಮಾತನಾಡಿ ; ಹಲವು ವರ್ಷಗಳಿಂದ ಮಲೆನಾಡು ಭಾಗದಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿರುವ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಸದಸ್ಯರು ಮುತುವರ್ಜಿ ವಹಿಸಿ ಈ ಅಂಬುಲೆನ್ಸ್ ಸೇವೆ ಆರಂಭಿಸಿದ್ದೇವೆ. ಅಂಬುಲೆನ್ಸ್ ಗೆ ಸಾರ್ವಜನಿಕರು, ಸ್ನೇಹಿತರು ದೇಣಿಗೆ ನೀಡಿರುತ್ತಾರೆ. ಹಾಗಾಗಿ ಯಾವುದೇ ಲಾಭದ ಅಪೇಕ್ಷೆ ಇಲ್ಲದೆ ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಅಂಬುಲೆನ್ಸ್ ಸೇವೆ ಒದಗಿಸಿವುದು ನಮ್ಮ ದ್ಯೇಯವಾಗಿದೆ, ಯಾವುದೇ ಸಂದರ್ಭದಲ್ಲಿ ದಿನದ 24 ಗಂಟೆಯೂ ಅಂಬುಲೆನ್ಸ್ ಸಾರ್ವಜನಿಕ ಸೇವೆಗೆ ಸಿದ್ದವಿರುತ್ತದೆ ಎಂದು  ತಿಳಿಸಿದ್ದಾರೆ.

ಅಂಬುಲೆನ್ಸ್ ಸೇವೆ ಮಾಹಿತಿಗೆ ಫಿಶ್ ಮೋಣು ಅವರ ಸಂಪರ್ಕ ಸಂಖ್ಯೆಗಳು : 9008108347, 9449413587, 9632539249

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ