October 5, 2024

ನಿವೃತ್ತ ಮುಖ್ಯ ಶಿಕ್ಷಕನಿಂದ ಲಂಚ ಪಡೆಯುತ್ತಿದ್ದ ವೇಳೆ ಬೀರೂರು ಬಿಇಓ ಕಚೇರಿ ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ತರೀಕೆರೆ ತಾಲೂಕು ಹೊಸಗಂಗೂರು ಶಾಲೆಯಲ್ಲಿ ಶಿಕ್ಷಕರಾಗಿ ನಿತೃತ್ತಿ ಹೊಂದಿದ, ಎನ್.ಪರಮೇಶ್ ತಮ್ಮ ನಿವೃತ್ತಿ ನಂತರ ಸರ್ಕಾರದಿಂದ ಬರಬೇಕಾದ ಜಿ.ಪಿ.ಎಫ್, ಜಿಐಎಸ್ ಪಡೆದುಕೊಳ್ಳಲು ಬಿಇಓ ಕಚೇರಿಗೆ ತೆರಳಿದ ವೇಳೆ ಚಂದ್ರಶೇಖರ್ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ನೀವು ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಉಳಿಸಿಕೊಂಡಿದ್ದೀರಿ ಅದರ ಬಾಕಿ ಇದೆ. ಅದನ್ನು ಸರಿ ಮಾಡಿಕೊಡುತ್ತೇನೆ. ಬಂದ ಹಣದಲ್ಲಿ ಅರ್ಧಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ದ್ವಿತಿಯ ದರ್ಜೆ ಸಹಾಯಕ ಚಂದ್ರಶೇಖರ ಮುಖ್ಯ ಶಿಕ್ಷಕನಿಂದ 40ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಇನ್ಸ್ ಪೇಕ್ಟರ್ ಅನಿಲ್ ರಾಥೋಡ್ ನೇತೃತ್ವದ ಸಿಬ್ಬಂದಿಗಳ ತಂಡ ದಾಳಿ ನಡೆಸಿ ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ನನ್ನು ಬಂಧಿಸಿದ್ದಾರೆ.

ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಮುಂದುವರಿದ ಲಂಚಾವತಾರ

ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಣ ಇಲಾಖೆ ಕಳೆದ ಕೆಲ ತಿಂಗಳಿಂದ ಲಂಚಾವತಾರಕ್ಕಾಗಿ ಕುಖ್ಯಾತಿ ಪಡೆಯುತ್ತಿದೆ. ಇಲಾಖೆ ಹಲವು ಗೊಂದಲಗಳ ಗೂಡಾಗಿದೆ. ಸ್ವತಃ ಜಿಲ್ಲಾ ಶಿಕ್ಷಣಾಧಿಕಾರಿಗಳೇ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಘಟನೆ ಮಾಸುವ ಮುನ್ನ, ಮೂಡಿಗೆರೆ ಬಿ.ಇ.ಓ. ಅವರು ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಮೂಡಿಗೆರೆ ಬಿ.ಇ.ಓ. ಕಛೇರಿಯ ನೌಕರರೊಬ್ಬರು ಕಛೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಬೀರೂರು ಬಿ.ಇ.ಓ. ಕಛೇರಿ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಟ್ಟಾರೆ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕಾದ ಇಲಾಖೆಯಲ್ಲಿ  ಇಂತಹ ಘಟನೆಗಳು ನಡೆಯುತ್ತಿರುವುದು ಶೋಚನೀಯವಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ