October 5, 2024

ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿಯ ಬಿ.ಹೊಸಳ್ಳಿ ದುಗ್ಗಿನಮಕ್ಕಿ ಗ್ರಾಮದಲ್ಲಿ ಹುಲಿ ದಾಳಿ ಮಾಡಿ ಮೂರು ಕರುಗಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ಬಿ.ಹೊಸಳ್ಳಿ ಗ್ರಾಮದ ಅಶೋಕಗೌಡ ಮತ್ತು ರುದ್ರಪ್ಪಗೌಡ  ಎಂಬುವವರ ಮೂರು ಕರುಗಳನ್ನು ಹುಲಿ ದಾಳಿ ನಡೆಸಿ ಸಾಯಿಸಿದೆ. ಕರುಗಳ ಕುತ್ತಿಗೆ ಭಾಗದಲ್ಲಿ ಹುಲಿ ಕಚ್ಚಿರುವ ಗುರುತುಗಳಿದ್ದು, ಸ್ಥಳದಲ್ಲಿ ಹುಲಿ ಹೆಜ್ಜೆಗಳು ಮೂಡಿವೆ.

ಘಟನೆ ನಡೆದ ಸ್ಥಳಕ್ಕೆ  ಉಪ ವಲಯ  ಅರಣ್ಯ ಅಧಿಕಾರಿ ಉಮೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕಳೆದ ಕೆಲ ತಿಂಗಳಿಂದ ಕಡಿಮೆಯಾಗಿದ್ದ ಹುಲಿ ಉಪಟಳ ಈಗ ಮತ್ತೆ ಪ್ರಾರಂಭವಾಗಿದೆ. ಈಗ್ಗೆ ಕೆಲ ತಿಂಗಳ ಹಿಂದೆಯೂ ಹಲವು ಗೋವುಗಳು ಹುಲಿ ದಾಳಿಗೆ ಬಲಿಯಾಗಿದ್ದವು.

ಹುಲಿ ಸ್ಥಳಾಂತರಕ್ಕೆ ಸಾರ್ವಜನಿಕರ ಒತ್ತಾಯ:

ಸುಮಾರು ವರ್ಷಗಳಿಂದ ಈ ಭಾಗದ ಭಾರತೀಬೈಲ್, ಬಿ.ಹೊಸಳ್ಳಿ, ಹೊಕ್ಕಳ್ಳಿ, ಹೆಗ್ಗುಡ್ಲು ಭಾಗದಲ್ಲಿ ನೂರಕ್ಕೂ ಅಧಿಕ ದನಗಳು ಹುಲಿಯ ದಾಳಿಯಿಂದ ಸತ್ತಿದ್ದರೂ ಕೂಡ ಅರಣ್ಯ ಇಲಾಖೆ ಹುಲಿ ಸ್ಥಳಾಂತರಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹಲವು ಬಾರಿ ಹುಲಿ ಸ್ಥಳಾಂತರಕ್ಕೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರೂ ಹುಲಿ ಸೆರೆ ಹಿಡಿಯಲು ಮೀನಾಮೇಷ ಎಣಿಸುವಂತಾಗಿದೆ.ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಹೆಚ್ಚು ತಿರುಗುತ್ತಿದ್ದು ಮನುಷ್ಯರ ಮೇಲೆ ಎರಗುವ ಸಾಧ್ಯತೆಗಳು ಹೆಚ್ಚಿವೆ.ಹುಲಿಯ ದಾಳಿಯಿಂದ ಕೂಲಿ ಕಾರ್ಮಿಕರು ಶಾಲಾ ಮಕ್ಕಳು ಕೂಡ ರಸ್ತೆಯಲ್ಲಿ ಓಡಾಡಲು ಭಯ ಪಡುವಂತಾಗಿದೆ. ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಲ್ಲಿ ಜಾನುವಾರುಗಳನ್ನು ಕೊಂದು ತಿನ್ನುತ್ತಿರುವ ಮತ್ತು ಜನರಲ್ಲಿ ಭಯ ಮೂಡಿಸಿರುವ ಹುಲಿಯನ್ನು  ಹಿಡಿದು ಬೇರೆಡೆಗೆ ಸಾಗಿಸಲು ಕ್ರಮಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲದೇ ಇದ್ದರೆ ಅರಣ್ಯ ಇಲಾಖೆ ಕಛೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ