October 5, 2024

ಅಂಗಾಂಗದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಅಂಗಾಂಗ ದಾನವು ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ ಎಂದು ಎಂದು ಮೂಡಿಗೆರೆ ಹಿರಿಯ ವೈದ್ಯ ಡಾ. ರಾಮಚರಣ ಅಡ್ಯಂತಾಯ ತಿಳಿಸಿದರು.

ಅವರು ಪಟ್ಟಣದ ಬಿ.ಜಿ.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಮೂಡಿಗೆರೆ ಜೇಸಿಐ ಆಯೋಜಿಸಿದ್ದ ಅಂಗಾಂಗ ದಾನ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಅಂಗಾಂಗ ದಾನ ಅಷ್ಟು ಸುಲಭವಾದ ಸಂಗತಿಯಲ್ಲ. ಇದರ ಬಗ್ಗೆ ಸರಿಯಾದ ಅರಿವು ಇರಬೇಕು. ಅಂಗಾಂಗ ದಾನವನ್ನು ಮಾಡುವುದರಿಂದ ಮಣ್ಣಲ್ಲಿ ಮಣ್ಣಾಗುವ ಈ ದೇಹವು ಬೇರೆಯವರಿಗೆ ಬೆಳಕಾಗಲು ಕಾರಣವಾಗುತ್ತದೆ. ಅಂಗಾಂಗ ದಾನವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಆರೋಗ್ಯವಂತ ಮನುಷ್ಯನ ಅಂಗಾಂಗಗಳನ್ನು ಮಾತ್ರ ಬೇರೆಯವರಿಗೆ ದಾನ ಮಾಡಬಹುದು. ಇದರಲ್ಲಿ ಸಾಕಷ್ಟು ನಿಬಂಧನೆಗಳಿವೆ. ಜನರು ಅಂಗಾಂಗ ದಾನದ ಬಗ್ಗೆ ಆಸಕ್ತಿ ತೋರಿದರೆ ಅದರಿಂದ ಅದೆಷ್ಟೋ ಜನರ ಜೀವ ಉಳಿಸಲು ಕಾರಣವಾಗುತ್ತದೆ ಎಂದರು.

ಅಂಗಾಂಗ ದಾನದ ಬಗ್ಗೆ ವಿಶೇಷ ಅದ್ಯಯನ ನಡೆಸುತ್ತಿರುವ ಮೂಡಿಗೆರೆ ಜೂನಿಯರ್ ಜೇಸಿ ಮಾಜಿ ಅಧ್ಯಕ್ಷೆ, ಪ್ರಾರ್ಥನಾ ನಾಗೇಶ್ ಮಾಡ್ಕಲ್ ಮಾಹಿತಿ ನೀಡಿ ; ಅಂಗಾಂಗ ದಾನದ ಬಗ್ಗೆ ಜನರಲ್ಲಿ ಕೆಲವು ಪೂರ್ವಾಗ್ರಹ ಮನೋಭಾವನೆಗಳು ಇವೆ. ವಿವಿಧ ಧರ್ಮಗಳ ಸಂಪ್ರದಾಯಗಳು ಸಹ ಅಂಗಾಂಗದಾನ ಮಾಡುವುದಕ್ಕೆ ಜನರು ಆಸಕ್ತಿ ತೋರದಿರಲು ಕಾರಣವಾಗಿವೆ. ಭಾರತದಲ್ಲಿ ಅಂಗಾಂಗ ದಾನದ ಪ್ರಮಾಣ ಬಹಳ ಕಡಿಮೆಯಿದೆ. ಜನರಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ವ್ಯಾಪಕವಾಗಿ ಆಗಬೇಕಿದೆ. ಅಂಗಾಂಗದಾನ ಮಾಡಬೇಕೆಂದರೆ ನಾವು ಮೊದಲು ನೋಂದಣಿ ಮಾಡಿಸಬೇಕು. ವ್ಯಕ್ತಿ ಯಾವ ಅಂಗಗಳನ್ನು ದಾನಮಾಡುತ್ತೇವೆ ಎಂಬುದು ನೋಂದಣಿ ಮಾಡಿಸಿ ಅದರ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದರೆ ಆ ವ್ಯಕ್ತಿಯ ಮರಣ ನಂತರ ಅವರ ಆರೋಗ್ಯಪೂರ್ಣ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ನೀಡಲು ಸಾಧ್ಯವಿದೆ. ರಕ್ತ ಮತ್ತು ಒಂದು ಕಿಡ್ನಿಯನ್ನು ವ್ಯಕ್ತಿ ಜೀವಂತ ಇರುವಾಗಲೇ ದಾನಮಾಡಲು ಸಾಧ್ಯವಿದೆ. ಉಳಿದಂತೆ ಕಣ್ಣು, ಯಕೃತ್ ಮುಂತಾದ ಅಂಗಾಂಗಗಳನ್ನು ವ್ಯಕ್ತಿ ಸಾವನ್ನಪ್ಪಿದ ಇಷ್ಟು ಸಮಯದ ಒಳಗಾಗಿ ಬೇರೆಯವರಿಗೆ ಅಳವಡಿಸಬಹುದಾಗಿದೆ. ಹೃದಯ ದಾನವನ್ನು ಮಾಡಬಹುದಾಗಿದ್ದು ಅಪಘಾತದಲ್ಲಿ ಇನ್ನೇನು ಅವರು ಬದುಕಲು ಸಾಧ್ಯವೇ ಇಲ್ಲ ಎಂದು ವೈದ್ಯರು ಪ್ರಮಾಣಿಕರಿಸಿದ ವ್ಯಕ್ತಿಗಳ ಹೃದಯವನ್ನು ಸಹ ಇತ್ತೀಚೆಗೆ ಬೇರೆಯವರಿಗೆ ಅಳವಡಿಸಲು ಪ್ರಕ್ರಿಯೆಗಳು ಸಹ ನಡೆಯುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ವಿ.ಎಸ್. ಟ್ರಸ್ಟ್ ಉಪಾಧ್ಯಕ್ಷ ಕೆ.ಹೆಚ್. ವೆಂಕಟೇಶ್, ಮೂಡಿಗೆರೆ ಜೇಸಿಐ ಪೂರ್ವಾಧ್ಯಕ್ಷ ಎನ್.ಎಲ್. ಪುಣ್ಯಮೂರ್ತಿ, ಶಾಲೆಯ ಪ್ರಾಂಶುಪಾಲರಾದ ಸಂದೇಶ್, ಜೇಸಿಐ ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಲೇಡಿ ಜೇಸಿ ಕಾರ್ಯದರ್ಶಿ ಶೃತಿ ದೀಕ್ಷಿತ್ ಉಪಸ್ಥಿತರಿದ್ದರು. ಮೂಡಿಗೆರೆ ಜೇಸಿಐ ಅಧ್ಯಕ್ಷ ಸುಪ್ರೀತ್ ಕಾರಬೈಲ್ ಅಧ್ಯಕ್ಷತೆ ವಹಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ