October 5, 2024

ಕಾಡುಕೋಣವೊಂದು ರಸ್ತೆಗೆ ಅಡ್ಡಬಂದಾಗ ಕಾರು ಡಿಕ್ಕಿಯಾಗಿ ನಾಲ್ವರು ಕಾರ್ಮಿಕರಿಗೆ ಗಂಭೀರ ಪೆಟ್ಟಾಗಿರುವ ಘಟನೆ ನಡೆದಿದೆ.

ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ. ಇಂದು ಸಂಜೆ ಸುಮಾರು 5-30ರ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ತೋಟದ ಹೊಳ ಹೊಡೆಯುವ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ತಮ್ಮ ಓಮಿನಿ ಕಾರಿನಲ್ಲಿ ಕೆಲಸ ಮುಗಿಸಿ ವಾಪಾಸ್ಸಾಗತ್ತಿದ್ದಾಗ ಈ ಘಟನೆ ನಡೆದಿದೆ. ಗೌಡಹಳ್ಳಿ ಮತ್ತು ಹೆಮ್ಮದಿ ಗ್ರಾಮಗಳ ಮಧ್ಯೆ ಎಂ.ಆರ್.ಪಿ.ಎಲ್. ಘಟಕದ ಸಮೀಪ ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

ಕಾರು ಚಾಲನೆಯಲ್ಲಿದ್ದಾಗ ಪಕ್ಕದ ತೋಟದಿಂದ ಏಕಾಏಕಿ ದೊಡ್ಡ ಗಾತ್ರದ ಕಾಡುಕೋಣವೊಂದು ರಸ್ತೆಗೆ ಅಡ್ಡಬಂದಿದ್ದು, ಕಾರು ಕೋಡುಕೋಣಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಪಕ್ಕದ ಮರವೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಇದರಿಂದ ಕಾರಿನಲ್ಲಿದ್ದ ನಾಲ್ಕು ಮಂದಿ ಕಾರ್ಮಿಕ ಯುವಕರಿಗೆ ತೀವ್ರ ಪೆಟ್ಟಾಗಿದೆ. ಹಣೆ, ತಲೆ, ಎದೆ, ಕೈಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿದೆ. ಗಾಯಾಳುಗಳನ್ನು ಸ್ಥಳೀಯ ಯುವಕರಾದ ವಿನಯ್ ಗೌಡ, ಪ್ರದೀಪ್ ಗೌಡ  ತಮ್ಮ ವಾಹನದಲ್ಲಿ  ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಮೂಡಿಗೆರೆ ಅರಣ್ಯ ಇಲಾಖೆ ಡಿ ಆರ್ ಎಫ್ ಓ ಚೇತನ್, ಸಿಬ್ಬಂದಿಗಳಾದ ಕುಮಾರ್, ಆನಂದ್, ಲಕ್ಷ್ಮಣ್ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.

ಕಾರ್ಮಿಕರು ದಾವಣಗೆರೆ ಜಿಲ್ಲೆ ಕಗ್ಗನಗೊಳ್ಳ ಗ್ರಾಮದ ಹುಲುಗಪ್ಪ(17 ವರ್ಷ), ಚಿನ್ನಪ್ಪ (20 ವರ್ಷ), ಗುರುರಾಜ್(17 ವರ್ಷ) ಮತ್ತು ವೀರಪ್ಪ (64 ವರ್ಷ)   ಎಂದು ತಿಳಿದುಬಂದಿದ್ದು, ಸ್ಥಳೀಯ ಕಾಫಿ ತೋಟಗಳಲ್ಲಿ ಕಳೆಕೊಚ್ಚುವ ಯಂತ್ರದಿಂದ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಿರಂತರ ಕಾಡುಕೋಣಗಳ ಹಾವಳಿ :

ಈ ಭಾಗದ ಹೆಮ್ಮದಿ, ಗೌಡಹಳ್ಳಿ, ಊರುಬಗೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡುಕೋಣಗಳು ರೈತರಿಗೆ ಅಪಾರ ನಷ್ಟವನ್ನು ಉಂಟುಮಾಡುತ್ತಿವೆ. ಕಾಡುಕೋಣಗಳು ತಂಡ ತಂಡವಾಗಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ತೋಟದಲ್ಲಿ ಕಾಫಿ, ಅಡಿಕೆ ಗಿಡಗಳನ್ನು ನಾಶಪಡಿಸುತ್ತಾ ಅಪಾರ ಹಾನಿ ಉಂಟುಮಾಡುತ್ತಿವೆ.

ಇತ್ತೀಚೆಗೆ ಹೆಮ್ಮದಿ ಗ್ರಾಮದಲ್ಲಿ ಕೊಳಗಾಮೆ ಹರೀಶ್ ಎಂಬುವವರ ತೋಟಕ್ಕೆ ಕಾಡುಕೋಣಗಳು ಗುಂಪು ನಿರಂತರ ಲಗ್ಗೆ ಇಟ್ಟು ಬಹಳಷ್ಟು ಹಾನಿ ಉಂಟುಮಾಡಿವೆ. ಈ ಬಗ್ಗೆ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಒಂದು ಕಡೆಯಿಂದ ಕಾಡಾನೆ ಮತ್ತೊಂದು ಕಡೆಯಿಂದ ಕಾಡುಕೋಣಗಳ ಹಾವಳಿ ಈ ಭಾಗದಲ್ಲಿ ನಿರಂತರವಾಗಿ ರೈತರಿಗೆ ನಷ್ಟವನ್ನುಉಂಟುಮಾಡುತ್ತಿವೆ. ಇದೀಗ ಹಾಡಹಗಲೇ ಕಾಡುಕೋಣಗಳು ಮುಖ್ಯರಸ್ತೆಗೆ ಬಂದಿದ್ದು, ಕಾರಿಗೆ ಡಿಕ್ಕಿ ಹೊಡೆದಿದೆ.

ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಿ ಕಾಡುಕೋಣಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ