October 5, 2024

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಸಮೀಪದ ಹೇಮಾವತಿ ತೀರದಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರ ಅಗ್ರಹಾರ ಶ್ರೀ ಆದಿಸುಬ್ರಮಣ್ಯ ದೇಗುಲದ ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಯ ಕವಚ ಸಮರ್ಪಣೆ ಮಾಡಿಲಾಯಿತು. ದೇವಾಲಯದ ಹಿರಿಯ ಅರ್ಚಕರಾದಿ ಶ್ರೀ ಸುಬ್ರಮಣ್ಯ ಭಟ್ (ಸುಬ್ಬಣ್ಣ ಭಟ್ರು) ಮತ್ತು ಅವರ ಕುಟುಂಬದವರು ದೇವಾಲಯದ ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಯ ಚೌಕಟ್ಟನ್ನು ಮಾಡಿಸಿಕೊಟ್ಟಿರುತ್ತಾರೆ.

ಸೋಮವಾರ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಡುಪಿ ಅದಮಾರು ಹಿರಿಯ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬೆಳ್ಳಿಯ ಚೌಕಟ್ಟನ್ನು ಅನಾವರಣಗೊಳಿಸುವ ಮೂಲಕ ದೇವರಿಗೆ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಶ್ರೀಗಳು “ನಾಗ ನಮ್ಮ ಕಣ್ಣಿಗೆ ಕಾಣುವ ಮತ್ತು ನಮ್ಮ ಭಕ್ತಿಭಾವನೆಗಳಿಗೆ ಸ್ಪಂದಿಸುವ, ಸೂಕ್ಷ್ಮವಾಗಿ ಸೂಚನೆ ನೀಡುವ ಪ್ರತ್ಯಕ್ಷ ದೇವರಾಗಿದೆ. ನಾಗ ಅಪ್ರತಿಮ ಮಾತಾಪಿತೃ ಪ್ರೇಮಿ. ನಾಗದೇವನಿಗೆ  ಅತ್ಯುತ್ತಮ ಪೂಜೆ ಎಂದರೆ ಅದು ನಮ್ಮ ಹೆತ್ತವರನ್ನು ನಾವು ಚೆನ್ನಾಗಿ ನೋಡಿಕೊಳ್ಳುವುದಾಗಿದೆ.  ನಮ್ಮ ತಂದೆ ತಾಯಿಗಳು ಪ್ರತ್ಯಕ್ಷ ದೇವತೆಗಳು. ಅವರ ಮನಸ್ಸನ್ನು ನೋಯಿಸಿ, ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಕ್ಕಳು ಎಷ್ಟೇ ತೀರ್ಥಕ್ಷೇತ್ರಗಳಿಗೆ ಸುತ್ತಿದರೂ, ಎಷ್ಟೇ ಪೂಜೆಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಿಲ್ಲ. ನಾವು ನಮ್ಮ ಹೆತ್ತವರನ್ನು ಅವರು ವಯಸ್ಸಾದ ಕಾಲದಲ್ಲಿ ಸುಖವಾಗಿ ಜೋಪಾನದಿಂದ ನೋಡಿಕೊಂಡು ಅವರಿಗೆ ಪ್ರೀತಿ ತೋರುವುದೇ ನಿಜವಾದ ದೇವರ ಪೂಜೆಯಾಗಿದೆ ಎಂದರು.

ಅಗ್ರಹಾರ ಆದಿಸುಬ್ರಮಣ್ಯ ಕ್ಷೇತ್ರ ಬಹಳ ಪುರಾತನವಾದ ಪುಣ್ಯ ಕ್ಷೇತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಆಗುತ್ತಿರುವ ಜೀರ್ಣೋದ್ಧಾರ ಕಾರ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳಿಂದ ಕ್ಷೇತ್ರವಿಂದು ಹೊಸತನದಿಂದ ನಳನಳಿಸುತ್ತಿದೆ. ದೇವಸ್ಥಾನ ವ್ಯವಸ್ಥಾಪನ ಸಮಿತಿಯವರ ಪರಿಶ್ರಮ ದೇವಾಲಯದ ಅರ್ಚಕ ಸಮುದಾಯದ ಶ್ರದ್ಧಾಪೂರ್ವಕ ಪೂಜಾಕೈಂಕರ್ಯಗಳಿಂದ ಕ್ಷೇತ್ರದ ತೇಜಸ್ಸು ಮತ್ತಷ್ಟು ಹೆಚ್ಚಿದೆ ಎಂದರು.

ಈ ಸಂದರ್ಭದಲ್ಲಿ ಬೆಳ್ಳಿ ಚೌಕಟ್ಟು ಸಮರ್ಪಿಸಿದ ಸುಬ್ರಮಣ್ಯ ಭಟ್ ಮತ್ತು ಅವರ ಕುಟುಂಬದವರನ್ನು ಗೌರವಿಸಲಾಯಿತು. ದೇವರ ಉತ್ಸವ ಮೂರ್ತಿಯ ರಥೋತ್ಸವ ನಡೆಸಲಾಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್.ಜೆ. ಜಯರಾಂಗೌಡ, ಸಮಿತಿಯ ಪದಾಧಿಕಾರಿಗಳಾದ ವಿ.ಕೆ. ಶಿವೇಗೌಡ, ಬಾಲಸುಬ್ರಮಣ್ಯ, ಅಗ್ರಹಾರ ಮಹೇಶ್, ರಮೇಶ್ ಮಂಡಿಮನೆ, ಜಿ.ಹೊಸಳ್ಳಿ ಆದರ್ಶ, ಅಗ್ರಹಾರ ಪ್ರಕಾಶ್, ಕಮ್ಮರಗೋಡು ಜಗದೀಶ್, ತಾಲ್ಲೂಕು ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ