October 5, 2024

ಮೂಡಿಗೆರೆ ಪಟ್ಟಣ ವ್ಯಾಪ್ತಿಯ ಗಂಗನಮಕ್ಕಿಯಲ್ಲಿ ಹೆದ್ದಾರಿಯ ಅಂಚಿಗೆ ಖಾಸಗಿ ವ್ಯಕ್ತಿಗಳು ಬೇಲಿ ಅಳವಡಿಸುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಂಗನಮಕ್ಕಿಯಲ್ಲಿ ಈ ಹಿಂದೆ ಗದ್ದೆ ಇದ್ದ ಜಾಗದಲ್ಲಿ ಈಗ ಖಾಸಗಿ ವ್ಯಕ್ತಿಯೊಬ್ಬರು ಲೇಯೌಟ್ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಅವರು ಸದರಿ ಜಾಗಕ್ಕೆ ಬೇಲಿ ಅಳವಡಿಸುತ್ತಿದ್ದು, ಆ ಬೇಲಿಯು ಹೆದ್ದಾರಿಯ ಅಂಚಿಗೆ ಬಂದಿದೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದು, ಯಾವ ಮಾನದಂಡದಲ್ಲಿ ಅವರು ರಸ್ತೆಯಂಚಿಗೆ ಬೇಲಿ ಅಳವಡಿಸುತ್ತಿದ್ದಾರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಗಂಗನಮಕ್ಕಿ ಜಾಗವು ಮೂಡಿಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಗೆ ಸೇರುತ್ತದೆ. ಇದೀಗ ಖಾಸಗಿ ವ್ಯಕ್ತಿಯು ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಬೇಲಿ ನಿರ್ಮಿಸಿದ್ದು, ರಸ್ತೆ ಪಕ್ಕದಲ್ಲಿ ಕನಿಷ್ಟ ಒಂದು ವಾಹನವೂ ನಿಲ್ಲಲು ಅವಕಾಶವಿಲ್ಲದಂತೆ ಬೇಲಿ ನಿರ್ಮಿಸಲಾಗುತ್ತಿದೆ. ರಸ್ತೆಯಲ್ಲಿ ಎರಡು ದೊಡ್ಡ ವಾಹನಗಳು ಬಂದರೆ ಸೈಡ್ ಕೊಡಲು ಸಹ ಸಾಧ್ಯವಾಗದಷ್ಟು ಹತ್ತಿರಕ್ಕೆ ಬೇಲಿ ನಿರ್ಮಿಸಲಾಗುತ್ತಿದೆ.

ಈ ಬಗ್ಗೆ ಪಟ್ಟಣ ಪಂಚಾಯಿತಿಯವರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಗಮನ ಹರಿಸಿ ರಸ್ತೆಯಂಚಿಗೆ ಅಳವಡಿಸಿರುವ ಬೇಲಿಯನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲದೇ ಇದ್ದರೆ ಪ್ರತಿಭಟನೆ ನಡೆಸುವ ಜೊತೆಗೆ ಬೇಲಿಯನ್ನು ಸಾರ್ವಜನಿಕರೇ ಕಿತ್ತು ಹಾಕುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು ಸಹ ಗಮನಹರಿಸಬೇಕಾಗಿದೆ.

ಗಂಗನಮಕ್ಕಿಯಲ್ಲಿ ಖಾಸಗಿ ವ್ಯಕ್ತಿಯು ರಸ್ತೆಯಂಚಿಗೆ ಬೇಲಿ ಹಾಕುತ್ತಿರುವುದು ಕಾನೂನು ಬಾಹೀರವಾಗಿದೆ. ಈ ಬೇಲಿಯನ್ನು ರಾಷ್ಟ್ರೀಯ ಹೆದ್ದಾರಿ ಕನಿಷ್ಠ ನಿಯಮಕ್ಕೆ ವಿರುದ್ಧವಾಗಿ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಜರುಗಿಸಿ ಬೇಲಿ ತೆರವುಗೊಳಿಸದೇ ಇದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಮತ್ತು ಸಾರ್ವಜನಿಕರೇ ಸೇರಿ ಬೇಲಿಯನ್ನು ಕಿತ್ತು ಹಾಕಬೇಕಾಗುತ್ತದೆ

ಎಲ್.ಬಿ. ರಮೇಶ್ ಲೋಕವಳ್ಳಿ, ಬಿ.ಎಸ್ಪಿ. ಮುಖಂಡರು, ಮೂಡಿಗೆರೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ