October 5, 2024

ಸಾಂಬಾರ ಮಂಡಳಿ ವತಿಯಿಂದ ಸರ್ಕಾರವು ರೈತರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಜೊತೆಗೆ ಮಂಡಳಿಯ ಮೂಲಕ ಸಾಂಬಾರ ಬೆಳೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ನೀಡಲಾಗುತ್ತಿದೆ. ರೈತರು ಈ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾಂಬಾರ ಮಂಡಳಿ ಸಕಲೇಶಪುರ ಪ್ರಾಂತ್ಯ ಕಛೇರಿ ಸಹಾಯಕ ನಿರ್ದೇಶಕ ಎಂ.ವೈ. ಹೊನ್ನೂರ್ ತಿಳಿಸಿದರು.

ಅವರು ಶುಕ್ರವಾರ ಮೂಡಿಗೆರೆ ಸಾಂಬಾರ ಮಂಡಳಿ ಕಛೇರಿ ವತಿಯಿಂದ ತಾಲ್ಲೂಕಿನ ಮೇಕನಗದ್ದೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಏಲಕ್ಕಿ ಬೆಳೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.


ಮಲೆನಾಡು ಭಾಗದಲ್ಲಿ ಅನೇಕ ಮಂದಿ ರೈತರು ಏಲಕ್ಕಿ ಬೆಳೆಯನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಅಡಿಕೆ ಮತ್ತು ಕಾಫಿ ನಡುವೆ ಅಂತರಬೆಳೆಯಾಗಿಯೂ ಏಲಕ್ಕಿಯನ್ನು ಬೆಳೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಏಲಕ್ಕಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಮತ್ತು ಬೆಲೆ ಸಿಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಏಲಕ್ಕಿಯನ್ನು ಬೆಳೆದರೆ ಉತ್ತಮ ಲಾಭ ಗಳಿಸಬಹುದು. ಸಾಂಬಾರ ಮಂಡಳಿಯಿಂದ ರೈತರಿಗೆ ಹೊಸ ಏಲಕ್ಕಿ ನಾಟಿಗೆ ಮತ್ತು ಮರುನಾಟಿಗೆ ಸಹಾಯಧನ ನೀಡಲಾಗುತ್ತದೆ. ಜೊತೆಗೆ ಬೆಳೆಯನ್ನು ಬೆಳೆಯುವ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಉಚಿತವಾಗಿ ನೀಡಲಾಗುತ್ತದೆ. ರೈತರು ಹತ್ತಿರದ ಸಾಂಬಾರ ಮಂಡಳಿ ಕಛೇರಿಗೆ ಭೇಟಿ ನೀಡಿ ಯೋಜನೆಗಳ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ಸಕಲೇಶಪುರ ದೋಣಿಗಲ್ ಭಾರತೀಯ ಏಲಕ್ಕಿ ಸಂಶೋಧನಾ ಕೇಂದ್ರದ ವಿಜ್ಞಾನಿ ಹರ್ಷ ಕೆ. ಎನ್. ಏಲಕ್ಕಿ ಸಸಿಗಳ ನರ್ಸರಿ, ವ್ಯವಸಾಯ ಪದ್ಧತಿ, ರೋಗ ಮತ್ತು ಕೀಟಗಳ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸ್ಥಳೀಯ ಏಲಕ್ಕಿ ಬೆಳೆಗಾರರಾದ ಯೋಗೇಂದ್ರ, ಕೆ.ಬಿ. ರಮೇಶ್ ಏಲಕ್ಕಿ ಬೆಳೆಯ ಬಗೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.

ತರಬೇತಿಯ ನಂತರ ಸ್ಥಳೀಯ ಪ್ರಗತಿಪರ ಏಲಕ್ಕಿ ಬೆಳೆಗಾರ ಯೋಗೇಂದ್ರ ನೆಲಗಹಳ್ಳಿ ಅವರ ತೋಟಕ್ಕೆ ಭೇಟಿ ನೀಡಿ ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಮೂಡಿಗೆರೆ ಸಾಂಬಾರ ಮಂಡಳಿ ಕಛೇರಿಯ ಫೀಲ್ಡ್ ಆಫೀಸರ್ ಶಶಿಧರನ್, ವಿಸ್ತರಣಾ ಸಹಾಯಕಿ ಜೂಲಿಯೇಟ್ ಜಾಯ್, ಸ್ಥಳೀಯ ಬೆಳೆಗಾರರಾದ ಎಂ.ಕೆ.ಪ್ರಸನ್ನ ಉಪಸ್ಥಿತರಿದ್ದರು.

ಮೇಕನಗದ್ದೆ ಮತ್ತು ಸುತ್ತಮುತ್ತಲಿನ ರೈತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಏಲಕ್ಕಿ ಬೆಳೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ