October 5, 2024

ದೇಶದಲ್ಲಿ ಮಧ್ಯಪಾನ ಧೂಮಪಾನ ಕೆಟ್ಟ ಹವ್ಯಾಸಗಳು ದೇಶದ ದೇಶಕ್ಕೆ ಮಾರಕವಾಗಿದ್ದು ಇವುಗಳನ್ನು ಸರ್ಕಾರಗಳು ಕೂಡಲೇ ನಿಷೇಧಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು  ಧರ್ಮಸ್ಥಳ  ಧರ್ಮೋತ್ಥಾನ  ಟ್ರಸ್ಟ್ ನ ಸದಸ್ಯ ಪ್ರಶಾಂತ್ ಚಿಪ್ರಗುತ್ತಿ ಆಗ್ರಹಿಸಿದ್ದಾರೆ

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗೋಣಿಬೀಡಿನಲ್ಲಿ ಹಮ್ಮಿಕೊಂಡಿದ್ದ 1764ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮದ್ಯಪಾನದಿಂದ ಸರ್ಕಾರಕ್ಕೆ ಲಾಭ ಇದೆ ಎಂದು ಹೇಳುತ್ತಿರುವ ಸರ್ಕಾರ ಮೂರ್ಖತನ. ಅದಕ್ಕಿಂತ 10 ಪಟ್ಟು ಆರ್ಥಿಕ ನಷ್ಟ ರಾಜ್ಯಕ್ಕೆ, ರಾಷ್ಟ್ರಕ್ಕೆ ನಷ್ಟ ಆಗುತ್ತಿದ್ದು. ನಮ್ಮದು ಮಾನವ ಸಂಪನ್ಮೂಲದ ದೇಶವಾಗಿದ್ದು ಇಲ್ಲಿನ ನಾಗರಿಕರಿಗೆ ಕುಡಿತದ ಚಟ ಹಬ್ಬಿಸುತ್ತಿರುವುದರಿಂದ. ಮಾನವ ದಿನಗಳು ನಷ್ಟವಾಗುತ್ತಿವೆ ಮತ್ತು ದೈಹಿಕ ಶ್ರಮತೆ ಕೊರತೆ ಉಂಟಾಗುತ್ತಿದೆ. ಕುಡಿದು ಸಮಯ ಹಾಳು ಮಾಡುವುದು. ಆರೋಗ್ಯವನ್ನು ಹದಗೆಡಿಸುವುದು, ಸಂಸಾರವನ್ನು ಶೋಷಿಸುವುದು.

ಕುಡಿತದ ಚಟದಿಂದ ಎಷ್ಟೋ ಮಂದಿ ದಾರಿಯಲ್ಲಿ ಬಿಳುತ್ತಿದ್ದಾಋಎ. ತಾವು ದುಡಿದ ಹಣವನ್ನು ಕುಡಿತಕ್ಕಾಗಿ ವ್ಯಯಿಸುತ್ತಿದ್ದ, ಸಂಸಾರವನ್ನು ಬೀದಿಗೆ ತಳ್ಳಿ ಅನೇಕ ಸಂದರ್ಭದಲ್ಲಿ ಹೆಂಡತಿ ಮಕ್ಕಳನ್ನು ಜೀತಕ್ಕೆ ತಳ್ಳುತ್ತಿರುವ ಸಂದರ್ಭಗಳು ನಡೆಯುತ್ತಿವೆ. ಮಧ್ಯಪಾನದಿಂದ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದೇ ಅವರ ಭವಿಷ್ಯವನ್ನುಮೊಟಕುಗೊಳಿಸಲಾಗುತ್ತಿದೆ. ಅಲ್ಲದೆ ಅಕಾಲಿಕವಾಗಿ ತಮ್ಮ ಸಾವನ್ನು ತಂದುಕೊಳ್ಳುತ್ತಿದ್ದಾರೆ.

ಯುವಜನತೆ ಇಂದು ಅತಿ ಹೆಚ್ಚು ಕುಡಿತ ಮತ್ತು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗುತ್ತಿದ್ದು. ಇದು ಸಮಾಜದ ದುರಂತವಾಗಿದ್ದು. ಈ ಎಲ್ಲಾ ನಷ್ಟಗಳು ಮಧ್ಯಪಾನದಿಂದ ಬರುವ ಆದಾಯದ ಹತ್ತು ಪಟ್ಟು ಹೆಚ್ಚಾಗಿದ್ದು. ದೇಶದ ಹಿತ್ತದೃಷ್ಟಿಯಿಂದ ಮಧ್ಯಪಾನ ಮತ್ತು ಮಾದಕ ವಸ್ತುಗಳನ್ನು ನಿಷೇಧಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ತಾಲ್ಲೂಕು ನಿರ್ದೇಶಕ ಶಿವಾನಂದ, ಬಿ.ಜೆ.ಪಿ. ತಾಲ್ಲೂಕು ಅಧ್ಯಕ್ಷ ಜೆ.ಎಸ್.ರಘು, ಮದ್ಯವ್ಯರ್ಜನ ಶಿಬಿರದ ಅಧ್ಯಕ್ಷ ಗಿರೀಶ್ ಮಣ್ಣೀಕೆರೆ, ವಿಪತ್ತು ನಿರ್ವಹಣಾ ತಂಡದ ಪ್ರವೀಣ್ ಪೂಜಾರಿ, ಪ್ರಗತಿಪರ ಕೃಷಿಕ ಪೂರ್ಣೇಶ್ ಜಿ. ಹೊಸಳ್ಳಿ ಮುಂತಾದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ