October 5, 2024

ಅನುವಾದ ಸಾಹಿತ್ಯಕ್ಕೆ ಪೂರಕವಾಗಿ ಜಗತ್ತಿನ ಎಲ್ಲ ಸಾಹಿತ್ಯವನ್ನು ಕನ್ನಡಕ್ಕೆ ತರುವ ನಿಟ್ಟಿನಲ್ಲಿ ಅಜ್ಜಂಪುರದಲ್ಲಿ ಅನುವಾದ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಅಜ್ಜಂಪುರ ಜಿ ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಅವರು ಮಂಗಳವಾರ ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿ ಇದಕ್ಕೆ ಪೂರಕವಾಗುವಂತೆ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಗಮನ ಸೆಳೆಯಲು ಪ್ರಯತ್ನಿಸಲಾಗುವುದೆಂದು ಹೇಳಿದರು.

ಒಂದು ತಲೆಮಾರನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಜಾಗೃತ ಮಾಡುವ ಜೊತೆಗೆ ಅನುವಾದ ಸಾಹಿತ್ಯದಲ್ಲಿ ಬದುಕಿನ ಕೊನೆಯ ಕ್ಷಣದವರೆಗೂ ನಿರಂತರವಾಗಿ ದುಡಿದ ವ್ಯಕ್ತಿ ಅಜ್ಜಂಪುರ ಜಿ.ಸೂರಿ ಎಂದು ತಿಳಿಸಿದರು.

ಕನ್ನಡದಲ್ಲಿ ಅವರು ಹಲವು ಕೃತಿಗಳನ್ನು ಬರೆದಿದ್ದಾರೆ. ಇವರ ಬಹುತೇಕ ಕೃತಿಗಳು ಅನುವಾದಿತ ಪುಸ್ತಕ 80 ಮತ್ತು 90ರ ದಶಕದಲ್ಲಿ ಕನ್ನಡದ ಪ್ರಮುಖ ಅಷ್ಟೂ ಪತ್ರಿಕೆಗಳಲ್ಲಿ ಏಕ ಕಾಲಕ್ಕೆ ಇವರ 12 ಕಾದಂಬರಿಗಳು ಧಾರಾವಾಹಿ ಆಗಿ ಪ್ರಕಟವಾಗುತ್ತಿತ್ತು ಎಂದರೆ ಅದು ಅವರ ಸಾಹಿತ್ಯದ ದಿವ್ಯಶಕ್ತಿ. ಇಂತಹ ಮೇರು ಸಾಹಿತಿ ಒಂದು ಕಾಲಕ್ಕೆ ಮಿಂಚಿ ಮರೆಯಾಗಿದ್ದು ನಮಗೆಲ್ಲ ಇಂದು ಕಾಡುವ ಯಕ್ಷ ಪ್ರಶ್ನೆಯಾಗಿದೆ ಎಂದರು.

ನಮ್ಮ ಸಾಹಿತ್ಯ ಈಗಲೂ ಜೀವಂತ ಇರುವುದೇ ಪರಂಪರೆಯ ಆಧಾರವಾಗಿ. ನಮ್ಮ ಪರಂಪರೆ ಗಟ್ಟಿಯಾದ? ನಮ್ಮ ಸಂಸ್ಕೃತಿಗಳು ಗಟ್ಟಿಯಾಗುತ್ತವೆ. ನಿಟ್ಟಿನಲ್ಲಿ ಸಾಹಿತ್ಯಕ್ಕೆ ಅನುವಾದ ಕ್ಷೇತ್ರವಾಗಿ ಸೂರಿಯವರ ಕೊಡುಗೆ ಅಪಾರವಾದದ್ದು. ಇವರನ್ನೂ ಹೊಸ ತಲಮಾರಿನ ಯುವಕರಿಗೆ ಪ್ರತಿ?ನದ ಮುಖೇನ ಪರಿಚಯ ಮಾಡಿಕೊಟ್ಟು ಅವರ ಸಾಹಿತ್ಯವನ್ನು ಓದಿಸಬೇಕು ಎನ್ನುವ ಮಹದಾಸೆಯನ್ನು ಪ್ರತಿ? ಹೊಂದಿದೆ ಎಂದು ಹೇಳಿದರು.

ಹೊಸ ತಲೆಮಾರು ಆಧುನಿಕ ವಿದ್ಯುನ್ಮಾನಗಳಿಗೆ ತಮ್ಮನ್ನು ತಾವು ಒಗ್ಗಿಸಿಕೊಂಡಿರುವ ಕಾಲಘಟ್ಟದಲ್ಲಿ ಅವರನ್ನು ತಲುಪಲು ಅವರದ್ದೇ ಮಾರ್ಗವನ್ನು ಹುಡುಕಿಕೊಂಡು ಸಾಗಬೇಕಿದೆ. ಈಗ ಸಧ್ಯಕ್ಕೆ ಪ್ರಚುರದಲ್ಲಿರುವುದು ಬುಕ್ ಮತ್ತು ಆಡಿಯೋ ಬುಕ್ಗಳು ಇವುಗಳ ಮೂಲಕವೂ ಸಾಹಿತ್ಯದ ಓದು ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸಬೇಕಾದ ವಿ?ಯವಾಗಿದೆ ಎಂದರು.

ಮೂಲಕವಾಗಿ ಇಂದಿನ ಯುವ ಜನತೆಯನ್ನು ತಲುಪಲು ಇರುವುದು ಕನ್ನಡದೇ ಸಂಸ್ಥೆಯಾದ ಪ್ರತಿಲಿಪಿ. ಇದು ಕನ್ನಡದಲ್ಲಿ ಒಟ್ಟು ಲಕ್ಷಕ್ಕೂ ಅಧಿಕ ಸಕ್ರಿಯ ಓದುಗರನ್ನು ಹೊಂದಿದ್ದು, ಇವರ ಸಂಸ್ಥೆಯ ಸಹಯೋಗದೊಂದಿಗೆ ಅಜ್ಜಂಪುರ ಜಿ.ಸೂರಿ ಪ್ರತಿ?ನವು ಅಜ್ಜಂಪುರ ಜಿ.ಸೂರಿ ಅವರ ಎಲ್ಲಾ ಕಥೆ, ಕಾದಂಬರಿ ಮತ್ತು ಬಿಡಿ ಲೇಖನಗಳನ್ನು ಡಿಜಿಟಲ್ ರೂಪದಲ್ಲಿ ಓದುಗರನ್ನು ಸೆಳೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಓದು ಎನ್ನುವ ನಿರಂತರ ಪ್ರಕ್ರಿಯೆಗೆ ಸೂರಿ ಅವರ ಕೊಡುಗೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಮೂಲಕ ಸಾಹಿತ್ಯದ ಪರಿಚಯವನ್ನು ಅಜ್ಜಂಪುರ ಜಿ.ಸೂರಿ ಪ್ರತಿ? ಮಾಡುತ್ತಿದೆ ಎಂದು ವಿಶ್ಲೇಷಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಬಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರಭುಸೂರಿ, ಕಾರ್ಯದರ್ಶಿ ಪೃಥ್ವಿಸೂರಿ, ಗೌರವ ಸಲಹೆಗಾರರಾದ ಕಮಲ್ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ