October 5, 2024

ಮಾಧ್ಯಮದವರ ವಿರುದ್ಧ ಅವಹೇಳನಕಾರಿಯಾಗಿ ಹಾಗೂ ಅವ್ಯಾಚ್ಯ ಶಬ್ಧದಿಂದ ನಿಂದಿಸಿ ಮಾತನಾಡುವ ಮೂಲಕ ಆ ಆಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮೂಡಿಗೆರೆ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮಂಗಳವಾರ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದರು.

ಕಾಡಾನೆ ಸಾವಿನ ಬಗ್ಗೆ ಹಾಗೂ ತಾಲೂಕಿನಲ್ಲಿ ಇಲ್ಲಿಯವರೆಗೂ ಕಾಡಾನೆ ದಾಳಿಯಿಂದ ಬಲಿಯಾದ ವ್ಯಕ್ತಿಗಳ ಬಗ್ಗೆ, ಅದರಿಂದ ಜನ ದಂಗೆ ಎದ್ದು ಅರಣ್ಯ ಇಲಾಖೆ ಎದುರು ಪ್ರತಿಭಟಿಸಿದ ಬಗ್ಗೆ, ಕಾಡಾನೆಯಿಂದ ಶಾಶ್ವತ ಪರಿಹಾರಕ್ಕಾಗಿ ಸರಕಾರದ ಗಮನ ಸೆಳೆಯುವ ಬಗ್ಗೆ ನಿರಂತರವಾಗಿ ವಸ್ತುನಿಷ್ಟವಾದ ವರದಿಯನ್ನು ಪತ್ರಕರ್ತರು ಮಾಡುತ್ತಾ ಬಂದಿದ್ದಾರೆ. ಕಳೆದ ಶನಿವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಾಡಾನೆಯೊಂದು ಸಾವನ್ನಪ್ಪಿರುವ ವರದಿಯನ್ನು ಕೂಡ ಪತ್ರಕರ್ತರು ಮಾಡಿದ್ದರು.

ಪತ್ರಕರ್ತರು ಕಾಡಾನೆ ಸಾವಿನ ಸುದ್ದಿಯನ್ನು ಮಾಡಿರುವುದೇ ತಪ್ಪೆನ್ನುವ ರೀತಿಯಲ್ಲಿ ಓರ್ವ ವ್ಯಕ್ತಿ ಪತ್ರಕರ್ತರ ವಿರುದ್ಧ ಅವ್ಯಾಚ್ಯ ಶಬ್ಧ ಬಳಸಿ ಆಡಿಯೋ ತುಳುಕನ್ನು ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಮಾಡಿದ್ದಾರೆ. ಜತೆಗೆ ಆ ಆಡಿಯೋ ತುಣುಕು ಬೇರೆ ಬೇರೆ ಗ್ರೂಪ್‍ಗಳಿಗೆ ಹರಿಯಬಿಡಲಾಗಿದೆ. ಇದು ಪತ್ರಕರ್ತರಿಗೆ ಅಗೌರವ ತೋರಿದಂತಾಗಿದೆ. ಹಾಗಾಗಿ ಪತ್ರಕರ್ತರು ವಿರುದ್ಧ ಮಾತನಾಡಿದ ವ್ಯಕ್ತಿ ಹಾಗೂ ಆಡಿಯೋ ತುಣುಕನ್ನು ಬೇರೆ ಬೇರೆ ಗ್ರೂಪ್‍ಗಳಿಗೆ ರವಾನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ಕಣಚೂರು, ಉಪಾಧ್ಯಕ್ಷ ತನು ಕೊಟ್ಟಿಗೆಹಾರ, ಗೌರವಾಧ್ಯಕ್ಷ ಎ.ಆರ್.ಉದಯಶಂಕರ್, ಅಮರ್‍ನಾಥ್, ಉಮಾಶಂಕರ್, ಪ್ರಸನ್ನ ಕುಮಾರ್, ಪ್ರಸನ್ನ ತಳವಾರ, ಗಣೇಶ್ ಮಗ್ಗಲಮಕ್ಕಿ, ಪ್ರಕಾಶ್, ಸೈಯದ್, ಮನ್ಸೂರ್, ಸೋಮಶೇಖರ್, ಶಾರದಾ ಶೇಖರ್, ಅನಿಲ್ ಮೊಂತೆರೋ, ಜೋಸೆಪ್ ಉಪಸ್ಥಿತರಿದ್ದರು.

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಅಪಹರಣ : ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುವ ಮಹಿಳೆಯರಿಗಾಗಿ ಹುಡುಕಾಟ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ