October 5, 2024

ಮೂಡಿಗೆರೆ ಕಳಸ ಗಡಿಭಾಗದ ಮಾಳಿಗನಾಡು ಗ್ರಾಮದ ಜನರ ಬಹುದಿನದ ಕನಸು ನನಸಾಗಿದೆ. ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಆಗಬೇಕೆಂಬ ಇಲ್ಲಿನ ಜನರ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ.

ಗ್ರಾಮಕ್ಕೆ ಕೆ.ಕೆ.ಬಿ.(ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್) ಸಂಸ್ಥೆಯ ಖಾಸಗಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಮೂಲಕ ಜನರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 04 ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು. ಬಸ್ಸಿಗೆ ಅರ್ಚಕರ ಮೂಲಕ ಪೂಜೆ ಮಾಡಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಮಾಳಿಗನಾಡು ಗ್ರಾಮದಿಂದ ಹೊರಟು -ಕೊಟ್ಟಿಗೆಹಾರ-ಬಾಳೆಹೊನ್ನೂರು-ಶೃಂಗೇರಿ ಮಾರ್ಗವಾಗಿ ಸಂಜೆ  ಮಾಳಿಗನಾಡಿಗೆ   ಬಂದು ಬೆಳಿಗ್ಗೆ ಎಂದಿನಂತೆ ಬೆಳಿಗ್ಗೆ 8-15ಕ್ಕೆ ಹೊರಡುತ್ತದೆ.

ಬಸ್ ಸಂಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದು ತಮ್ಮ ಕೋರಿಕೆಗೆ ಸ್ಪಂದಿಸಿದ ಕೆ.ಕೆ.ಬಿ. ಟ್ರಾವೆಲ್ಸ್ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ತುಂಬು  ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಹಾಗೆಯೇ ಸಾರ್ವಜನಿಕರು ಈ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಬಸ್ ಸಂಚಾರ ಒದಗಿಸಿಕೊಟ್ಟ ಮಾಲೀಕರಿಗೆ ಪ್ರೋತ್ಸಾಹಿಸುವುದರ ಜೊತೆಗೆ ಬಸ್ ಸಂಚಾರ ನಿರಂತರವಾಗಿ ಮುನ್ನಡೆಯುವಂತೆ ಸಹಕರಿಸಬೇಕು ಎಂದು ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಸುದೀಪ್ ಎಂ. ಡಿ, ಉಮೇಶ್ ಬಿ. ಎ, ಗೋಪಾಲ ಶೆಟ್ಟಿ, ಬಸವರಾಜ್, ಯೋಗೇಶ್, ಮದು, ಸುನಿಲ್, ರಂಜಿತ್, ಪುಟ್ಟಯ್ಯ ಮುಂತಾದವರು ಉಪಸ್ಥಿತರಿದ್ದರು.

*  ಸುದೀಪ್ ಎಂ.ಡಿ,  ಮಾಳಿಗನಾಡು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ