October 5, 2024

ಗ್ರಾಹಕರು ಬ್ಯಾಂಕಿನಲ್ಲಿ ಇರಿಸಿದ್ದ ಅಸಲಿ ಚಿನ್ನವನ್ನು ಮಾರಾಟ ಮಾಡಿ ನಕಲಿ ಚಿನ್ನವನ್ನು  ಇಟ್ಟು ಸಾಲ ಮಂಜೂರು ಮಾಡಿರುವುದು ಸೇರಿದಂತೆ ಸುಮಾರು ಆರು ಕೋಟಿಗೂ ಅಧಿಕ  ವಂಚನೆ ಪ್ರಕರಣ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಚಿಕ್ಕಮಗಳೂರು ಶಾಖೆಯಲ್ಲಿ ನಡೆದಿದೆ. ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಐವರು ಸಿಬ್ಬಂದಿಗಳ ಮೇಲೆ ಮೇಲಾಧಿಕಾರಿಗಳು ದೂರು ದಾಖಲಿಸಿದ್ದಾರೆ.

ಸದರಿ ಬ್ಯಾಂಕ್ ಶಾಖೆಯಲ್ಲಿ ಕೆಲ ಗ್ರಾಹಕರಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಸಾಲವನ್ನು ಮಾಡಲಾಗಿದೆ. ಬ್ಯಾಂಕಿಗೆ ಕಟ್ಟಲೆಂದು ಕೊಟ್ಟ ಹಣವನ್ನು, ಠೇವಣಿ ಇಟ್ಟಿದ್ದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡು ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಗ್ರಾಹಕರಿಗೆ ವಂಚಿಸಿದ್ದು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಚಿಕ್ಕಮಗಳೂರಿನ ಬೋಳರಾಮೇಶ್ವರ ದೇಗುಲ ಬಳಿ ಇರುವ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ ಮತ್ತು ಲಾಕರ್ ನಲ್ಲಿ ಇಟ್ಟಿದ್ದ ಚಿನ್ನವನ್ನು ಮಾರಾಟ ಮಾಡಿ ನಕಲಿ ಚಿನ್ನವನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾರೆ.

ಇತ್ತೀಚೆಗೆ ಈ ಪ್ರಕರಣ ಬೆಳಕಿಗೆ ಬಂದಿತ್ತು ಈಗ್ಗೆ ಕೆಲ ತಿಂಗಳ ಹಿಂದೆ ಬ್ಯಾಂಕಿನ ವ್ಯವಸ್ಥಾಪಕ ಬಿ.ಕೆ ಪ್ರಶಾಂತ್, ಸಹಾಯಕ ವ್ಯವಸ್ಥಾಪಕಿ ಎಂ.ಪಿ .ವರ್ಷಾ, ಮಾಜಿ ಶಾಖಾ ವ್ಯವಸ್ಥಾಪಕ ಸಂದೀಪ್ ಕೊಲ್ಲೂರಿ, ಮುಖ್ಯ ಕ್ಯಾಶಿಯರ್ ಜೆ. ಸಿ. ಕಾರ್ತಿಕ್ ಹಾಗೂ ವಿಶೇಷ ಸಹಾಯಕ ಜೆ .ಪಿ. ನಾರಾಯಣಸ್ವಾಮಿ ಇವರನ್ನು ಅಮಾನತು ಮಾಡಲಾಗಿತ್ತು.

ಆರಂಭದಲ್ಲಿ ಸುಮಾರು 25 ಲಕ್ಷ ಹಣ ದುರುಪಯೋಗ ಆಗಿದೆ ಎಂಬುದು ಆಡಿಟ್ ವರದಿಯಲ್ಲಿ ಗೊತ್ತಾಗಿತ್ತು. ಇದರಿಂದ ಅನುಮಾನ ಬಂದು ಬೆಂಗಳೂರು ಮುಖ್ಯ ಶಾಖೆ ಅಧಿಕಾರಿಗಳ ತಂಡ ನಡೆಸಿದ ಪರಿಶೀಲನೆ ವೇಳೆ ಕೋಟ್ಯಾಂತರ ರೂಪಾಯಿಗಳ ದೊಡ್ಡ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದ 141 ಚಿನ್ನದ ಪ್ಯಾಕೆಟ್ ಗಳ ಪೈಕಿ 140 ಪ್ಯಾಕೆಟ್ ಗಳಲ್ಲಿ ನಕಲಿ ಚಿನ್ನ ಪತ್ತೆಯಾಗಿವೆ. ಆರೋಪಿಗಳು ಮೊದಲೇ ನಕಲಿ ಚಿನ್ನವನ್ನು ತಂದು ಇಟ್ಟುಕೊಂಡು ಅಸಲಿ ಚಿನ್ನದ ಬದಲು ನಕಲಿ ಚಿನ್ನವನ್ನು ಲಾಕರ್ ನಲ್ಲಿ ಇಟ್ಟು ಬಳಿಕ ಅಸಲಿ ಚಿನ್ನವನ್ನು ಬೇರೆ ಕಡೆ ಮಾರುತ್ತಿದ್ದರು ಎನ್ನುವುದು ತನಿಖೆಯಿಂದ ಬಯಲಾಗಿದೆ.

ಮ್ಯಾನೇಜರ್ ಸಂದೀಪ್ ತನ್ನ ಪತ್ನಿ ಶ್ವೇತಾ ಹೆಸರಿನಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದ್ದಿದ್ದು , ನಾರಾಯಣಸ್ವಾಮಿ  ತನ್ನ ಪತ್ನಿ ಲಾವಣ್ಯ ಹೆಸರಿನಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು 50 ಲಕ್ಷ ರೂ. ಸಾಲ ಪಡೆದಿದ್ದಾನೆ.

ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ , ನಾರಾಯಣಸ್ವಾಮಿ ತಲೆಮರೆಸಿಕೊಂಡಿದ್ದಾನೆ . ಉಳಿದವರನ್ನು ಅಮಾನತುಗೊಳಿಸಲಾಗಿದೆ.

ಕಂಗಾಲಾಗಿರುವ ಗ್ರಾಹಕರು

ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್ ನಲ್ಲಿ ವ್ಯವಹಾರ ಮಾಡುತ್ತಿದ್ದ ಗ್ರಾಹಕರು ಕಂಗಾಲಾಗಿದ್ದಾರೆ. ತಾವು ಆಡವಿಟ್ಟ ಚಿನ್ನವನ್ನೇ ಲಪಟಾಯಿಸಿದ್ದಾರೆ, ತಾವು ಠೇವಣಿ ಇಟ್ಟಿದ್ದ ಹಣವನ್ನೇ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬು ವಿಚಾರ ತಿಳಿದು ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬಹಳಷ್ಟು ಮಂದಿ ತಾವು ಬ್ಯಾಂಕಿನಲ್ಲಿ ಇಟ್ಟಿದ್ದ ಠೇವಣಿಯನ್ನು ವಾಪಾಸ್ಸು ಪಡೆಯಲು ಬ್ಯಾಂಕಿಗೆ ಬರುತ್ತಿದ್ದಾರೆ. ಇದರಿಂದ ಬ್ಯಾಂಕಿನಲ್ಲಿ ಕಾರ್ಯದೊತ್ತಡ ಉಂಟಾಗಿದೆ. ಒಟ್ಟಾರೆ ಇದು ಸೆಂಟ್ರಲ್ ಬ್ಯಾಂಕ್ ಇಲ್ಲಿ ನಮ್ಮ ಹಣ ಚಿನ್ನ ಸೇಫ್ ಆಗಿ ಇರುತ್ತದೆ ಎಂದು ನಂಬಿ ವ್ಯವಹಾರ ಮಾಡಿದ್ದ ಗ್ರಾಹಕರೀಗ ಕಂಗಾಲಾಗಿದ್ದಾರೆ. ಗ್ರಾಹಕರಿಗೆ ಯಾವುದೇ ನಷ್ಟವಾಗದಂತೆ ಬ್ಯಾಂಕ್ ಮುಖ್ಯ ಶಾಖೆಯ ಅಧಿಕಾರಿಗಳು ನ್ಯಾಯ ಒದಗಿಸಿಕೊಡುವ ಜವಾಬ್ದಾರಿ ವಹಿಸಿಕೊಂಡು ಗ್ರಾಹಕರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ