October 5, 2024

ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಪದ ಅರ್ಥ ಮಾಡಿಕೊಂಡರೆ ಕನ್ನಡ ರಾಜ್ಯೋತ್ಸವ ಆಚರಣೆ ಅರ್ಥಪೂರ್ಣವಾಗುತ್ತದೆ. ಆಟೋ ಚಾಲಕರು ಕನ್ನಡದ ಬಗ್ಗೆ ತೋರುತ್ತಿರುವ ಅಭಿಮಾನ, ಆಸಕ್ತಿ ಬೇರೆಯವರಿಗೆ ಮಾದರಿಯಾಗಿದೆ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಗುರುವಾರ ಸಂಜೆ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸ್ವತಶ್ಚಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ತಾಲೂಕು ಆಟೋ ಚಾಲಕರ ಸಂಘದ ವತಿಯಿಂದ ಏರ್ಪಡಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಿಗರಾದ ನಾವು ಹುಟ್ಟಿನಿಂದಲೂ ಕನ್ನಡ ಭಾಷೆ ಮಾತನಾಡುವ ಮೂಲಕ ಬೆಳೆದಿದ್ದೇವೆ. ಕನ್ನಡ ಭಾಷೆ ಉಳಿಸಲು ಕನ್ನಡಿಗರೇ ಮುಂದಾಗಬೇಕೆ ಹೊರತು, ಬೇರೆಯವರಿಂದ ಸಾಧ್ಯವಿಲ್ಲ. ಈ ಬಗ್ಗೆ ನಮ್ಮನ್ನು ನಾವೇ ವಿಮರ್ಶೆ ಮಾಡಿಕೊಳ್ಳಬೇಕಿದೆ. ಕನ್ನಡ ಪದಗಳ ಅರ್ಥ ಪ್ರತಿಯೊಬ್ಬ ಕನ್ನಡಿಗರಿಗೆ ತಿಳಿದಿದೆ. ಆದರೂ ಕನ್ನಡ ಭಾಷೆ ಮಾತನಾಡಲು ಕೀಳರಿಮೆ ತೋರುತ್ತಿರುವುದು ದುರಾದೃಷ್ಟ. ಕೇವಲ ಕನ್ನಡ ಭಾಷೆ ಉಳಿಸುವುದಕ್ಕೋಸ್ಕರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯಬಾರದು. ಕನ್ನಡ ಭಾಷಾಭಿಮಾನ ಎಲ್ಲರಲ್ಲೂ ಮೂಡಿದಾಗ ಮಾತ್ರ ಕನ್ನಡ ಭಾಷೆಗೆ ಯಾವತ್ತೂ ಕಂಟಕ ಬಾರದು ಎಂದ ಅವರು, ಆಟೋ ಚಾಲಕರು ಬದುಕಿನ ದಾರಿ ಮತ್ತು ಸಮಾಜ ಸೇವೆ ಮಾಡುತ್ತಿದ್ದಾರೆ. ಆಟೋ ಚಾಲಕರು ಅಪ್ಪಟ ಕನ್ನಡ ಅಭಿಮಾನಿಗಳು, ಹಗಲು ರಾತ್ರಿಯೆನ್ನದೇ ಆಟೋ ಚಾಲಕರು ಸಾರ್ವಜನಿಕರ ಸೇವೆಗೆ ಸಿದ್ಧರಾಗಿರುತ್ತಾರೆ  ಹಾಗಾಗಿ ಸಾರ್ವಜನಿಕರು ಆಟೋ ಚಾಲಕರ ಮೇಲೆ ಗೌರವ ಇಟ್ಟುಕೊಳ್ಳುವ ವಾತಾವರಣ ನಿರ್ಮಾಣವಾಗಬೇಕೆಂದು ಹೇಳಿದರು.

ಸಾಹಿತಿ ಡಾ.ಸಂಪತ್ ಬೆಟ್ಟಗೆರೆ ಮಾತನಾಡಿ, ಇತಿಹಾಸ ತಜ್ಞರು ಹೇಳುವ ಪ್ರಕಾರ ಹಿಂದೆ ಆಟೋ ರಿಕ್ಷಾವನ್ನು ಹೆಚ್ಚಾಗಿ ಶ್ರೀಮಂತರು ಬಳಸುವ ಸಾಧನವಾಗಿತ್ತು. ಅಂತಹ ವಾಹನದ ಮೇಲೆ ತಾತ್ಸಾರ ಮಾಡಬಾರದು. ಕನ್ನಡ ಅಭಿಮಾನ ಕೇವಲ ಸಾಹಿತಿಗಳಲ್ಲಿ ಮಾತ್ರವಲ್ಲ, ಆಟೋ ಚಾಲಕರಲ್ಲೂ ಇರುತ್ತದೆ. ದಿನ ನಿತ್ಯ ಪತ್ರಿಕೆ ಓದುವವರು, ಅದರ ಬಗ್ಗೆ ಚರ್ಚೆ ಮಾಡುವುದು ಹೆಚ್ಚಾಗಿ ಆಟೋ ಚಾಲಕರೇ ಸಿಗುತ್ತಾರೆ. ಅಲ್ಲದೇ ಆಟೋ ಚಾಲಕರು ಗಣ್ಯರು ಹಾಗೂ ಜನ ಸಾಮಾನ್ಯರೊಂದಿಗೆ ಸಂಪರ್ಕ ಬೆಸೆಯುವ ವ್ಯಕ್ತಿತ್ವ ಅವರಿಗಿದೆ. ಜನರನ್ನು ನಿಗದಿತ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವ ಕಾರ್ಯ ನಡೆಸಿದ್ದಾರೆ ಎಂದ ಅವರು, ಕನ್ನಡ ರಾಜ್ಯೋತ್ಸವದ ಜತೆಗೆ ಕರ್ನಾಟಕ ರಾಜ್ಯೋತ್ಸವ ಕೂಡ ಆಗಬೇಕು. ಕ್ನನಡ ರಾಜ್ಯೋತ್ಸವದಲ್ಲಿ ಕನ್ನಡ ಮಾತ್ರ ಇರುತ್ತದೆ. ಆದರೆ ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡ, ತುಳು, ಉರ್ದು ಸೇರಿದಂತೆ ಎಲ್ಲಾ ಭಾಷೆ ಇರುತ್ತದೆ. ಈ ಎಲ್ಲಾ ಭಾಷಿಗರು ಒಂದೆಡೆ ಸೇರಿ ಕನ್ನಡದ ಹಬ್ಬ ಆಚರಿಸುವ ಮೂಲಕ ಕನ್ನಡ ಭಾಷೆ ಉಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಆಟೋ ಸಂಘದ ಗೌರವ ಅಧ್ಯಕ್ಷ ಎಂ.ಹೆಚ್. ಅಮರ್‌ನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾಷೆಯನ್ನು ಉಳಿಸಬೇಕೆಂದರೆ ಕನ್ನಡ ಭಾಷೆ ಮಾತನಾಡಿದರೆ ಸಾಕು. ಭಾಷೆ ಬಳಸುವುದನ್ನು ಬಿಟ್ಟರೆ ಆ ಭಾಷೆ ಮರೆತು ಹೋಗುತ್ತದೆ. ಜತೆಗೆ ನಮ್ಮ ಸಂಸ್ಕೃತಿ ಕೂಡ ಭಾಷೆ ಜೊತೆಗೆ ಮರೆಯಾಗಿ ಹೋಗುತ್ತದೆ. ಆಟೋ ರಿಕ್ಷಾದ ಚಾಲನ ಪರವಾನಗಿ, ಬ್ಯಾಡ್ಜ್ ರದ್ದಾಗಿ 2 ವರ್ಷ ಕಳೆದಿದೆ. ಆದರೆ ಬಣಕಲ್ ಮತ್ತು ಬಾಳೂರು ಪೊಲೀಸ್ ವ್ಯಾಪ್ತಿಯಲ್ಲಿ ಆಟೋ ಚಾಲಕರ ಮೇಲೆ ದಂಡ ಹಾಕುತ್ತಿದ್ದಾರೆ. ಇದನ್ನು ಜಿಲ್ಲಾ ವರಿಷ್ಟಾಧಿಕಾರಿಗಳು ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕ ಆರೀಫ್ ಬಣಕಲ್, ಕ್ರೀಡಾಪಟುಗಳಾದ ಎಸ್.ರಕ್ಷಿತಾ, ರಶ್ಮಿ ಪ್ಯಾಟೇಹಿತ್ಲು, ಗಾಯಕ ಬಕ್ಕಿ ಮಂಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವತಶ್ಚಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿ.ಚಂದ್ರೇಶ್ ವಹಿಸಿದ್ದರು.

ಶೃಂಗೇರಿ ಮತ್ತು ಕೊಪ್ಪ ಆಟೋ ಸಂಘದ ಮುಖಂಡರುಗಳಾದ ಜಗದೀಶ್, ವಿಜಯಕುಮಾರ್, ವಿಜೇಂದ್ರ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಬಿಎಸ್‌ಪಿ ತಾಲೂಕು ಅಧ್ಯಕ್ಷ ಎಲ್.ಬಿ.ರಮೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ, ಕಸಾಪ ಅಧ್ಯಕ್ಷ ಎಚ್.ಎಂ.ಶಾಂತಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ಕಣಚೂರು, ಜೆಸಿಐ ಅಧ್ಯಕ್ಷೆ ಸವಿತಾ ರವಿ, ಕರವೇ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ವಾಣಿ, ಕ.ರ.ವೇ ಜಿಲ್ಲಾಧ್ಯಕ್ಷ ನೂರುಲ್ಲಾ ಖಾನ್, ಬಿ.ಎಸ್ಪಿ. ಮುಖಂಡ ಯು.ಬಿ. ಮಂಜಯ್ಯ, ಕ.ರ.ವೇ ತಾಲ್ಲೂಕು ಅಧ್ಯಕ್ಷ ಪ್ರಸನ್ನ ದಾರದಹಳ್ಳಿ, ಸಮಾಜಸೇವಕ ಫಿಶ್ ಮೋಣು, ಪತ್ರಕರ್ತ ಪ್ರಸನ್ನ ಗೌಡಹಳ್ಳಿ, ಆಟೋ ಸಂಘದ ತಾಲ್ಲೂಕು ಅಧ್ಯಕ್ಷ ಯು.ಬಿ. ನಾಗೇಶ್, ಆಟೋ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ಜಯಾನಂದ,  ಸಂಘದ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ನಾಗರಾಜು ಸ್ವಾಗತಿಸಿದರು, ಮಾಜಿ ಅಧ್ಯಕ್ಷ ಸುಧೀರ್ ವಂದಿಸಿದರು.

ಇದಕ್ಕೂ ಮುನ್ನಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.

ಸಭಾ ಕರ‍್ಯಕ್ರಮದ ನಂತರ ಬಕ್ಕಿ ಮಂಜುನಾಥ್ ಸಂಗಡಿಗರಿಂದ ರಸಮಂಜರಿ ಕರ‍್ಯಕ್ರಮ ರ‍್ಪಡಿಸಲಾಗಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ